ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ತಿರುಪತಿಯಿಂದ ಮಂತ್ರಾಲಯಕ್ಕೆ ಶೇಷ ವಸ್ತ್ರ

Last Updated 24 ಆಗಸ್ಟ್ 2021, 4:15 IST
ಅಕ್ಷರ ಗಾತ್ರ

ರಾಯಚೂರು: ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 350ನೇ ಆರಾಧನೆಯು ಸಂಭ್ರಮ, ಸಡಗರದೊಂದಿಗೆ ನಡೆಯುತ್ತಿದೆ.

ಮಂಗಳವಾರ ರಾಯರ ಮಧ್ಯಾರಾಧನೆ ನಿಮಿತ್ತ, ತಿರುಪತಿಯ ವೆಂಕಟೇಶ್ವರ ಸನ್ನಿಧಿಯಿಂದ ಶೇಷ ವಸ್ತ್ರವನ್ನು ದೇವಸ್ಥಾನ ಮಂಡಳಿ ಅಧಿಕಾರಿಗಳು ಮಂತ್ರಾಲಯಕ್ಕೆ ತೆಗೆದುಕೊಂಡು ಬಂದಿದ್ದರು. ಟಿಟಿಡಿ ಅಧಿಕಾರಿಗಳು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರಿಗೆ ಹಸ್ತಾಂತರಿಸಿದರು. ವಿಶೇಷ‌ ಮೆರವಣಿಗೆ ನಡೆಯಿತು.

ಶ್ರೀಗಳು ಶೇಷ ವಸ್ತ್ರವನ್ನು ಬರಮಾಡಿಕೊಂಡು, ಹರಿವಾಣದಲ್ಲಿ ತಲೆಮೇಲೆ ಹೊತ್ತು ಮಠದ ಗರ್ಭಗುಡಿಗೆ ತೆಗೆದುಕೊಂಡು ಹೋದರು. ಚಂಡಿವಾಧ್ಯ, ಪಂಡಿತರ ಮಂತ್ರೋಚ್ಚಾರಣೆಯೊಂದಿಗೆ ಶೇಷವಸ್ತ್ರವನ್ನು ರಾಯರ ವೃಂದಾವನಕ್ಕೆ ಸಮರ್ಪಿಸಲಾಯಿತು.

ತಿರುಪತಿಯ ಪದ್ಮಾವತಿ‌ ದೇವಸ್ಥಾನದಿಂದ ತಂದಿದ್ದ ಶೇಷ ವಸ್ತ್ರವನ್ನು ಮಂಚಾಲಮ್ಮದೇವಿಗೆ ಸಮರ್ಪಿಸಲಾಯಿತು.

ರಾಯರ ಮೂಲ‌ವೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕ, ಮಂಗಳಾರತಿ ನೆರವೇರಿಸಲಾಗುತ್ತದೆ.ಮಧ್ಯಾರಾಧನೆ ನಿಮಿತ್ತ ಮಧ್ಯಾಹ್ನ ಮಠದ ಪ್ರಾಕಾರದಲ್ಲಿ ಸುವರ್ಣ ರಥೋತ್ಸವ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT