ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕರ ಕಾಯಂಗೊಳಿಸಲು ಅನಿರ್ಧಿಷ್ಟಾವಧಿ ಧರಣಿ

Last Updated 22 ಫೆಬ್ರುವರಿ 2021, 15:58 IST
ಅಕ್ಷರ ಗಾತ್ರ

ರಾಯಚೂರು: ನಗರಸಭೆ ಹಿಂದಿನ ಪೌರಕಾರ್ಮಿಕರಿಗೆ ನೇರ ವೇತನ ಪಾವತಿಸಬೇಕು ಹಾಗೂ ಕಾಯಂಗೊಳಿಸದೇ ವಿಳಂಬ ಮಾಡಿದ್ದು ಕೂಡಲೇ ಕಾಯಂಗೊಳಿಸಿ, ಅಕ್ರಮ ಪೌರ ಕಾರ್ಮಿಕರನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿ ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಕರ್ನಾಟಕ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವಾ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಪೌರಕಾರ್ಮಿಕರು ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಒಳಚರಂಡಿ ಕೆಲಸ ಮಾಡುವ ಕಾರ್ಮಿಕರು ಸೇರಿದಂತೆ 41ಜನ ಮಾತ್ರ ಪೌರಕಾರ್ಮಿಕರೆಂದು ಸಕ್ರಮ ನೇಮಕಾತಿ ಅರ್ಹರಾಗಿದ್ದಾರೆ. ವಾಲ್‍ಮ್ಯಾನ್, ಪಂಪ್ ಆಪರೇಟರ್, ಫಿಟ್ಟರ್, ಪರಿಚಾರಕಿಯರು ಸೇರಿ 60 ಜನರನ್ನು ಕಾನೂನು ಬಾಹಿರವಾಗಿ ಅಕ್ರಮವಾಗಿ ಪೌರಕಾರ್ಮಿಕರೆಂದು ನೇಮಕ ಮಾಡಲಾಗಿದೆ. ಇಲ್ಲಿಯವರೆಗೆ ಅಕ್ರಮವಾಗಿ ನೇಮಕಕೊಂಡ 60 ಪೌರಕಾರ್ಮಿಕರು ತಮ್ಮ ಕರ್ತವ್ಯಕ್ಕೆ ಹಾಜರಾಗದೇ ಕೆಲಸವನ್ನು ಮಾಡದೇ ವೇತನ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಕೊರೊನಾ ವಾರಿಯರ್ ಆದ ಪೌರಕಾರ್ಮಿಕರ ಮೇಲೆ ಹೂಡಿದ ಸುಳ್ಳು ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಹಾಗೂ ಜಿಲ್ಲಾಧಿಕಾರಿಗಳ 2017ರಂದು ಹೊರಡಿಸಿ ಕಾನೂನು ಬಾಹಿರ ದಿನಗೂಲಿ ನೌಕರರ ಕಾಯಂ ಆದೇಶವನ್ನು ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ನಾಲ್ಕು ತಿಂಗಳ ವೇತನ ಪಾವತಿ ಹಾಗೂನೈರ್ಮಲ್ಯ ವಿಭಾಗದ ವಾಹನ ಚಾಲಕರಿಗೆ ಏಳು ತಿಂಗಳ ವೇತನ, ಇಎಸ್‍ಐ ಹಣವನ್ನು ಜಮಾ ಮಾಡಬೇಕು. ಗುತ್ತಿಗೆದಾರರು 2014ರಿಂದ ಕಡಿಮೆ ಪಿಎಫ್ ಹಣ ಜಮಾ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.

ಸಂಘದ ರಾಜ್ಯಾಧ್ಯಕ್ಷ ಎಸ್.ಮಾರೆಪ್ಪ ವಕೀಲ, ಜಿಲ್ಲಾಧ್ಯಕ್ಷ ಉರುಕುಂದಪ್ಪ, ಉಪಾಧ್ಯಕ್ಷ ಮತ್ತಣ್ಣ, ತಾಲ್ಲೂಕು ಅಧ್ಯಕ್ಷ ಅಬ್ರಾಹಂ ಕಮಲಾಪುರ ಹಾಗೂ ಅನೇಕ ಜನ ಕಾರ್ಮಿಕರು ಧರಣಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT