ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಪಿಎಸ್: 4ನೇ ಘಟಕದಲ್ಲಿ ಬೆಂಕಿ ಅವಘಡ

Last Updated 10 ನವೆಂಬರ್ 2020, 17:56 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ (ಆರ್‌ಟಿಇಎಸ್)ದ 4ನೇ ಘಟಕದಲ್ಲಿ ಮಂಗಳವಾರ ರಾತ್ರಿ ವಿದ್ಯುತ್ ಅವಘಡ ಉಂಟಾಗಿದ್ದು, ಲಕ್ಷಾಂತರ ಮೌಲ್ಯದ ವಿದ್ಯುತ್ ಪರಿವರ್ತಕ ಸುಟ್ಟುಹೋಗಿದೆ.

ಶಾಖೋತ್ಪನ್ನ ವಿದ್ಯುತ್ ಬೇಡಿಕೆ ಹೆಚ್ಚಿದ್ದರಿಂದ 4 ನೇ ಘಟಕ ಆರಂಭಿಸುವಾಗ ಹೈ ವೋಲ್ಟೇಜ್ ಉಂಟಾಗಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿಸಲಾಗಿದೆ. ಪರಿವರ್ತಕ ಅಕ್ಕಪಕ್ಕದ ಕೆಲವು ಸಾಧನಗಳು ಕೂಡಾ ಉರಿದು ಹೋಗಿವೆ.

ಕೂಡಲೇ ಕೆಪಿಸಿಎಲ್ ಅಗ್ನಿಶಾಮಕ ಸಿಬ್ಬಂದಿ ಕಾರ್ಯಪ್ರವೃತ್ತವಾಗಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಶಾಖೋತ್ಪನ್ನ ವಿದ್ಯುತ್‌ಗೆ‌ ಬೇಡಿಕೆಯಿಲ್ಲದೆ ಕೆಲವು ತಿಂಗಳುಗಳಿಂದ ಸ್ಥಾವರದ ಎಲ್ಲ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ. ಸೋಮವಾರದಿಂದ ಒಂದನೇ ಘಟಕ ಆರಂಭಿಸಲಾಗಿದೆ. ಮರುದಿನವೇ 4 ನೇ ಘಟಕ ಆರಂಭಿಸುವಾಗ ಬೆಂಕಿ ಅವಘಡ ಕಾಣಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT