ಮಾನ್ವಿ: ‘ಮಹಿಳಾ ಸ್ವ ಸಹಾಯ ಸಂಘಗಳು ತಯಾರಿಸುವ ವಿವಿಧ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸುವ ಉದ್ದೇಶದಿಂದ ಸಂಜೀವಿನಿ ಇ-ಮಾರ್ಟ್ ಆರಂಭಿಸಿದ್ದು , ಗ್ರಾಮೀಣ ಮಹಿಳೆಯರ ಉತ್ಪನ್ನಗಳಿಗೆ ಸಂಜೀವಿನಿ ಇ-ಮಾಟ್ ಉತ್ತೇಜನಕಾರಿ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಖಾಲೀದ್ ಅಹ್ಮದ್ ಹೇಳಿದರು.

ಗುರುವಾರ ಪಟ್ಟಣದ ಹಳೆ ತಾಲ್ಲೂಕು ಪಂಚಾಯಿತಿ ಕಟ್ಟಡದಲ್ಲಿ ಜಿಲ್ಲಾ ಪಂಚಾಯಿತಿ, ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಸಂಜೀವಿನಿ ಇ-ಮಾರ್ಟ್ ಮಾರಾಟ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಸಂಜೀವಿನಿ ಯೋಜನೆ ಅಡಿಯಲ್ಲಿ ಸಂಜೀವಿನಿ ಇ-ಮಾರ್ಟ್ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಮಹಿಳಾ ಸ್ವ ಸಹಾಯ ಸಂಘಗಳು ತಯಾರಿಸುವ ವಿವಿಧ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸುವ ಉದ್ದೇಶದಿಂದ ಈ ಯೋಜನೆ ರೂಪುಗೊಂಡಿದೆ. ಅದರ ನಿರ್ವಹಣೆಯ ಜವಾಬ್ದಾರಿಯನ್ನು ಶ್ರೀನಿಧಿ ಸಂಜೀವಿನಿ ಮಹಿಳಾ ಸಂಘಕ್ಕೆ ನೀಡಲಾಗಿದೆ’ ಎಂದರು.

‘ಸಂಜೀವಿನಿ ಇ-ಮಾರ್ಟ್ ಕೇಂದ್ರ ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸಲಿದ್ದು, ಮಹಿಳಾ ಸಂಘದ ಸದಸ್ಯರು ಉತ್ಪನ್ನಗಳ ಸಂಗ್ರಹ, ಗುಣಮಟ್ಟ ಪರಿಶೀಲನೆ, ಪ್ರದರ್ಶನ ಹಾಗೂ ಮಾರಾಟದ ಕಾರ್ಯಗಳನ್ನು ನೋಡಿಕೊಳ್ಳಲಿದ್ದಾರೆ. ಸ್ಥಳೀಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದರ ಜತೆಗೆ ಗ್ರಾಹಕರಿಗೂ ಗುಣಮಟ್ಟದ ವಸ್ತುಗಳು ಲಭ್ಯವಾಗಲಿವೆ’ ಎಂದರು.

ತಾ.ಪಂ ಸಹಾಯಕ ನಿರ್ದೇಶಕಿ ದೀಪಾ ಅರಳಿಕಟ್ಟೆ ಮಾತನಾಡಿದರು. ತಾಲ್ಲೂಕು ವ್ಯವಸ್ಥಾಪಕ ಬಸವರಾಜ, ಎನ್.ಆರ್.ಎಲ್.ಎಮ್ ವಲಯ ಮೇಲ್ವಿಚಾರಕ ಶರಣಬಸವ, ಕೃಷಿಯೇತರ ವ್ಯವಸ್ಥಾಪಕ ಮಹಾಂತೇಶ, ಐ.ಎಫ್.ಸಿ ಸಂಯೋಜಕ ವಿನೋದ್, ಡಿಇಒ ಬಸವರಾಜ, ವೈಪಿ ಕಲ್ಪನಾ, ತಾಲ್ಲೂಕು ಮಟ್ಟದ ಸಂಪನ್ಮೂಲ ವ್ಯಕ್ತಿ ರುದ್ರಮ್ಮ, ಚನ್ನಬಸ್ಸಮ್ಮ, ಸಂಜೀವಿನಿ ಒಕ್ಕೂಟ ಹಾಗೂ ಶ್ರೀನಿಧಿ ಸ್ವಸಹಾಯ ಸಂಘ ಮಹಿಳೆಯರ ಒಕ್ಕೂಟದ ಪದಾಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.