ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಣಕಾಸು ಕಂಪನಿಗಳಿಂದ ವಂಚನೆಗೊಳಗಾದವರಿಂದ ಪ್ರತಿಭಟನೆ

Published 2 ಸೆಪ್ಟೆಂಬರ್ 2024, 16:28 IST
Last Updated 2 ಸೆಪ್ಟೆಂಬರ್ 2024, 16:28 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ವಂಚನೆಗೊಳಗಾದ ಸಂತ್ರಸ್ತರಿಗೆ ಅನಿಯಂತ್ರಿತ ಠೇವಣಿ ಯೋಜನೆ 2019ರ ಅಡಿಯಲ್ಲಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ‘ವಂಚನೆ ಸಂತ್ರಸ್ತ ಠೇವಣಿದಾರ ಕುಟುಂಬ’ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ಜಿಲ್ಲೆಯಲ್ಲಿ ಅನೇಕರು ಪಿಎಸಿಎಲ್, ಸಾಯಿ ಪ್ರಸಾದ್, ಸಮೃದ್ಧ ಜೀವನ, ಗರಿಮಾ ಹಿಂದೂಸ್ತಾನ, ಅಗ್ರಿಗೋಲ್ಡ್ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿದ್ದು ಕಂಪನಿಗಳು ಮುಚ್ಚಿಹೋದ ಪರಿಣಾಮ 2014ರಿಂದ ಇದುವರೆಗೂ ಗ್ರಾಹಕರಿಗೆ ಹಣ ಮರು ಪಾವತಿಯಾಗಿಲ್ಲ. ಸರ್ಕಾರ ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡು ಸಂತ್ರಸ್ತರಿಗೆ ನ್ಯಾಯ ಒದಗಿಸಿಲ್ಲ ಎಂದು ದೂರಿದರು.

ಹಣ ಹೂಡಿದ ಸಂತ್ರಸ್ತರಲ್ಲಿ ಬಡ, ಮಧ್ಯಮ ವರ್ಗದವರೇ ಹೆಚ್ಚಾಗಿದ್ದು ಸರ್ಕಾರದಿಂದ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾನಿರತ ಹನುಮಂತಪ್ಪ, ಕಳಕಪ್ಪ, ರಾಜಾರಾಮ ಹಾಗೂ ಭೀಮನಗೌಡ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT