ಕವಿತಾಳ: ‘ಸ್ಥಳೀಯ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ವೆಂಕಟೇಶ ನಾಯಕ ಅವರ ಅಮಾನತಿಗೆ ಆಗ್ರಹಿಸಿ ಪೊಲೀಸ್ ಠಾಣೆ ಎದುರು ಸೋಮವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ದಲಿತ ಸಂಘಟನೆ ಮುಖಂಡ ಅರಳಪ್ಪ ತುಪ್ಪದೂರು ಹೇಳಿದರು.

‘ಠಾಣಾ ವ್ಯಾಪ್ತಿಯ ಹಳ್ಳಿಗಳಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ನೊಂದು ಠಾಣೆಗೆ ಬರುವ ದಲಿತರಿಗೆ ನ್ಯಾಯ ಒದಗಿಸುವ ಬದಲು, ಪಿಎಸ್ಐ ಅವರು ದಲಿತರ ವಿರುದ್ದವೇ ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ಪರಿಷ್ಠಾಧಿಕಾರಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರೂ ನಾಲ್ವರು ಶಾಸಕರು ಮತ್ತು ಸಂಸದರ ಕುಮ್ಮಕ್ಕಿನಿಂದ ಕ್ರಮ ಜರುಗಿಸುತ್ತಿಲ್ಲ’ ಎಂದು ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಸೋಮವಾರ ನಡೆಯುವ ಪ್ರತಿಭಟನೆಯಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಸಂಘಟನೆ ಮುಖಂಡರು ಪಾಲ್ಗೊಳ್ಳಲಿದ್ದು ಪಿಎಸ್ಐ ವಿರುದ್ಧ ಕ್ರಮಕೈಗೊಳ್ಳುವವರೆಗೆ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ದಲಿತ ಹಾಗೂ ಪ್ರಗತಿ ಪರ ಹೋರಾಟ ಸಂಘಟನೆ ಮುಖಂಡರಾದ ಅಲ್ಲಮಪ್ರಭು, ಚಂದ್ರು, ಜೋಸೆಫ್ ತೋರಣದಿನ್ನಿ, ಗಂಗಪ್ಪ, ರಮೇಶ ಇರಬಗೇರ, ಬಾಲಸ್ವಾಮಿ ಜಿನ್ನಾಪುರ, ಸಂತೋಷ ಕಲಶೆಟ್ಟಿ, ಮೌನೇಶ, ಹುಚ್ಚಪ್ಪ, ಲಾಳ್ಳೆಪ್ಪ, ರಿಯಾಜ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.