ಬೇಡಿಕೆ ಈಡೇರಿಸದಿದ್ದರೆ ತಕ್ಕ ಪಾಠ: ಶೇಖರಪ್ಪ ಗಿಣಿವಾರ

ಸಿಂಧನೂರು: ಪರಿಶಿಷ್ಟ ಜಾತಿಗೆ ಶೇ17 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ 7.5 ರಷ್ಟು ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಸಂಚಲನಾ ಕ್ರಿಯಾ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಸ್ಥಳೀಯ ಮಿನಿವಿಧಾನಸೌಧ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಯಾರಿಸಿದ ಜಾತಿ ಜನಗಣತಿ ವರದಿಯನ್ನು ಬಿಜೆಪಿ ಸರ್ಕಾರ ಜಾರಿಗೊಳಿಸುತ್ತಿಲ್ಲ. ತಕ್ಷಣವೇ ಎಚ್ಚೆತ್ತು ಮೀಸಲಾತಿ ಹೆಚ್ಚಳಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಮುಂಬರುವ ಚುನಾವಣೆ ಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಒಗ್ಗಟ್ಟಾಗಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ’ ಎಂದು ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ ತಿಳಸಿದರು.
ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಯಂಕೋಬ ನಾಯಕ ಮಾತನಾಡಿ, ನಿರ್ಲಕ್ಷ್ಯ ಮುಂದುವರೆಸಿದರೆ ಕಾನೂನು ಭಂಗ ಚಳವಳಿ ಅನಿರ್ವಾರ್ಯಎಂದರು.
ನಂತರ ಧರಣಿ ಸ್ಥಳಕ್ಕೆ ತಹಶೀಲ್ದಾರ್ ಮಂಜುನಾಥ ಭೋಗಾವತಿ ಬಂದು ಮನವಿ ಪತ್ರ ಸ್ವೀಕರಿಸಿದರು.
ಯದ್ದಲದೊಡ್ಡಿ ಸಂಜಯಸ್ವಾಮಿ, ಗೋನವಾರ ಮಲ್ಲಯ್ಯತಾತ, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ, ಜೆಡಿಎಸ್ ಅಧ್ಯಕ್ಷ ಬಸವರಾಜ ನಾಡಗೌಡ, ನಗರಸಭೆ ಸದಸ್ಯ ಕೆ.ರಾಜಶೇಖರ ಧರಣಿಗೆ ಬೆಂಬಲಿಸಿ ಭಾಗವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ತಿಮ್ಮಯ್ಯ ನಾಯಕ, ಮುಖಂಡರಾದ ಎಚ್.ಎನ್.ಬಡಿಗೇರ್, ರಾಮಣ್ಣ ಗೋನವಾರ, ಅಶೋಕ ಉಮಲೂಟಿ, ದೇವೇಂದ್ರಪ್ಪ ನಾಯಕ, ಕರೇಗೌಡ ಕುರುಕುಂದಿ, ಹನುಮಂತಪ್ಪ ಪುಲದಿನ್ನಿ, ಅಲ್ಲಮಪ್ರಭು ಪೂಜಾರಿ, ಮರಿಯಪ್ಪ ಜಾಲಿಹಾಳ, ಜೆ.ರಾಯಪ್ಪ ವಕೀಲ, ಎಂ.ಗಂಗಾಧರ್, ಭೀಮೇಶ ಕವಿತಾಳ, ಹಂಸರಾಜ, ದೇವೇಂದ್ರಪ್ಪ, ಸುರೇಶ ಜಾದವ್, ವೆಂಕಟೇಶ ಬಂಡಿ, ಮಹಾದೇವ ಧುಮತಿ, ಬಸವರಾಜ ಬುರ್ಲಿ, ಆಲಂಸಾಬ, ತಿಮ್ಮಣ್ಣ ರಾಮತ್ನಾಳ, ಡಾ.ಬಸವರಾಜ ಪಿ.ನಾಯಕ, ಅರುಣಕುಮಾರ, ಅನಿಲಕುಮಾರ ವೈ, ಕೃಷ್ಣ ರಾಠೋಡ್, ಲಕ್ಷ್ಮಣ ಭೋವಿ, ಎಂ.ಕೆ.ಜಗ್ಗೇಶ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.