ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಕಾಯಂ ಆದೇಶ ರದ್ದುಗೊಳಿಸಲು ಪ್ರತಿಭಟನೆ

Last Updated 28 ಅಕ್ಟೋಬರ್ 2020, 12:59 IST
ಅಕ್ಷರ ಗಾತ್ರ

ರಾಯಚೂರು: ಅಕ್ಟೋಬರ್ 4 ರಂದು ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಹೊರಡಿಸಿರುವ ಕಾನೂ‌ನುಬಾಹಿರ ಕಾಯಂ ಆದೇಶ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವಾ ನೌಕರರ ಸಂಘ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪೌರಕಾರ್ಮಿಕರು ಬುಧವಾರ ಪ್ರತಿಭಟನೆ ನಡೆಸಿದರು.

ಆನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಉಮಾದೇವಿ ಪ್ರಕರಣದಂತೆ 115 ಜನ ದಿನಗೂಲಿ ಕಾರ್ಮಿಕರ ಸೇವೆಯನ್ನು ಸಕ್ರಮಗೊಳಿಸಿ ಆದೇಶ ನೀಡಲಾಗಿದೆ. 88 ಪೌರಕಾರ್ಮಿಕರು, 13 ಲೋಡರ್ಸ್, 14 ಪಂಪ್ ಆಪರೇಟರ್ ಒಳಗೊಂಡಿದ್ದಾರೆ. ಪ್ರಸ್ತಾವನೆಯಲ್ಲಿ ಕೇವಲ 11 ಪೌರ ಕಾರ್ಮಿಕರು, 31, ಮ್ಯಾನ್ ಹೋಲ್ ಸ್ಕ್ಯಾವೆಂಜರ್ ಮಾತ್ರ ಗುರುತಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಯುಜಿಡಿ ಕಾರ್ಮಿಕರು ಸೇರಿದಂತೆ 41 ಜನ ಮಾತ್ರ ಪೌರಕಾರ್ಮಿಕರೆಂದು ಸಕ್ರಮ ನೇಮಕಾತಿಗೆ ಅರ್ಹರಾಗಿದ್ದಾರೆ. ವಾಲ್ ಮೆನ್, ಪಂಪ್ ಆಪರೇಟರ್, ಫಿಲ್ಟರ್, ಪರಿಚಾರಕಿಯರು 60 ಜನರನ್ನು ಕಾನೂನು ಬಾಹೀರವಾಗಿ ಅಕ್ರಮ ನೇಮಕಗೊಂಡ 60 ಜನ ಪೌರ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗದೇ ವೇತನ ಪಡೆಯುತ್ತಿದ್ದಾರೆ ಎಂದು ದೂರಿದರು.

ನೇರ ನೇಮಕಾತಿ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು. ಉಳಿದ ಪೌರ ಕಾರ್ಮಿಕರಿಗೆ ನೇರ ವೇತನ ಪಾವತಿಸಬೇಕು. ನೈರ್ಮಲ್ಯ ವಿಭಾಗದ ವಾಹನ ಚಾಲಕರ 3 ತಿಂಗಳ ವೇತನ 5 ತಿಂಗಳ ಪಿಎಫ್, ಇಎಸ್ಐ ಹಣ ಜಮಾ ಮಾಡಬೇಕು. ಗುತ್ತಿಗೆ ದಾರರು 2014ರಿಂದ ಕಡಿಮೆ ಪಿಎಫ್ ಹಣ ಜಮಾ ಮಾಡಿದ್ದು ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಪ್ಪು ಪಟ್ಟಿಗೆ ಸೇರಿಸಬೇಕು. ಪೌರ ಕಾರ್ಮಿಕರಿಗೆ ಸಮಸ್ತ್ರ, ಮಾಸ್ಕ್, ಇತರೆ ಸುರಕ್ಷತಾ ಸಾಮಾಗ್ರಿ ನೀಡಬೇಕು. ಹಾಗೂ ಕಾನೂನು ನಿಯಮದ ಪ್ರಕಾರ ರಜೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಎಸ್.ಮಾರೆಪ್ಪ ವಕೀಲ, ಆರ್. ಹನುಮಂತು, ಮುತ್ತಣ್ಣ, ಉರುಕುಂದಪ್ಪ, ಹನುಮೇಶ, ಭೀಮೇಶ, ನರಸಿಂಹಲು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT