ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಎಸ್ಐ ಪರಶುರಾಮ್‌ ಸಾವು ಪ್ರಕರಣ: ಸಿಬಿಐ ತನಿಖೆಗೆ ವಹಿಸಲು ಆಗ್ರಹ

Published 9 ಆಗಸ್ಟ್ 2024, 16:21 IST
Last Updated 9 ಆಗಸ್ಟ್ 2024, 16:21 IST
ಅಕ್ಷರ ಗಾತ್ರ

ಮಸ್ಕಿ: ಯಾದಗಿರಿ ಪಿಎಸ್ಐ ಪರಶುರಾಮ್‌ ಸಾವು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು.

ಹಳೆಯ ಬಸ್ ನಿಲ್ದಾಣದ ಡಾ. ಅಂಬೇಡ್ಕರ್ ಪ್ರತಿಮೆ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡ ದೊಡ್ಡಪ್ಪ ಮುರಾರಿ, ಸಿ.ದಾನಪ್ಪ, ಗಂಗಾಧರ ಎಂ., ಹನುಮಂತಪ್ಪ ವೆಂಕಟಾಪೂರ, ಎಂ. ಮೌನೇಶ ಮುರಾರಿ, ‘ವರ್ಗಾವಣೆಗಾಗಿ ಲಂಚ ಕೇಳಿದ ಶಾಸಕ ಮತ್ತು ಅವರ ಮಗನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪರಶುರಾಮ್‌ ಕುಟುಂಬಕ್ಕೆ ಸರ್ಕಾರ ₹2 ಕೋಟಿ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ತಹಶೀಲ್ದಾರ್ ಮಲ್ಲಪ್ಪ ಮನವಿ ಸ್ವೀಕರಿಸಿದರು.

ಮುಖಂಡರಾದ ಮಲ್ಲಯ್ಯ ಬಳ್ಳಾ, ಸಂತೋಷ ಹಿರೇದಿನ್ನಿ, ಸೋಮಶೇಖರ ವಕೀಲ, ಕಾಸೀಮಪ್ಪ ಡಿ. ಮುರಾರಿ, ಅಶೋಕ ಮುರಾರಿ, ದುರಗರಾಜ ವಟಗಲ್, ಸಿದ್ದು ಮುರಾರಿ, ಶ್ರೀಕಾಂತ ಮುರಾರಿ, ಪ್ರಶಾಂತ ಮುರಾರಿ, ಬಾಲಸ್ವಾಮಿ ಜಿನ್ನಾಪೂರ, ಮಲ್ಲಪ್ಪ ಗೋನಾಳ, ಕಿರಣ್ ಮುರಾರಿ, ಹುಲಗಪ್ಪ ಹಸಮಕಲ್, ಅಶೋಕ ನಂಜಲದಿನ್ನಿ, ಚಿನ್ನಪ್ಪ, ಬಾಲರಾಜ, ಶಿವು ಯಕ್ಲಾಸಪೂರ, ಮೌನೇಶ ಅಮಿನಗಡ, ಬಸವರಾಜ ಉದ್ಭಾಳ, ಶಿವರೆಡ್ಡಿ ಮಸ್ಕಿ, ಸಿದ್ದು ಮುರಾರಿ, ಹುಚ್ಚರೆಡ್ಡಿ, ಬಸವರಾಜ ಗೌಡನಭಾವಿ, ಚೆನ್ನಬಸವ ಹಸಮಕಲ್, ಮರಿಸ್ವಾಮಿ, ಜಮದಗ್ನಿ ಗೋನಾಳ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT