ಏಕತೆ ಸಾರಿದ ರಾಹುಲ್ ಗಾಂಧಿ ಪಾದಯಾತ್ರೆ

ರಾಯಚೂರು: ಭಾರತ ಜೋಡೊ ಯಾತ್ರೆ ಸಮಾರೋಪ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಸೋಮವಾರ ಧ್ವಜಾರೋಹಣ ಕಾರ್ಯಕ್ರಮ ಹಾಗೂ ಮಹಾತ್ಮ ಗಾಂಧಿ ಪುಣ್ಯಸ್ಮರಣೆ ಅಂಗವಾಗಿ ಹುತಾತ್ಮರ ದಿನ ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ ಬಿ.ವಿ.ನಾಯಕ, ‘2022ರ ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಲ್ಲಿ ಆರಂಭವಾದ ಭಾರತ್ ಜೋಡೊ ಯಾತ್ರೆಯು 4,084 ಕಿ.ಮೀ., 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಕ್ರಮಿಸಿ ಜ.30ರಂದು ಶ್ರೀನಗರದಲ್ಲಿ ಮುಕ್ತಾಯಗೊಂಡಿದೆ’ ಎಂದರು.
‘ಭಾರತದ ಏಕತೆಗಾಗಿ ದೇಶದಲ್ಲಿರುವ ನಾವೆಲ್ಲರೂ ಒಂದೇ ಎಂಬ ಸಂದೇಶದೊಂದಿಗೆ ರಾಹುಲ್ ಗಾಂಧಿ ಅವರು ಐತಿಹಾಸಿಕ ಪಾದಯಾತ್ರೆ ಕೈಗೊಂಡಿರುವುದು ಹೆಮ್ಮೆಯ ಸಂಗತಿ’ ಎಂದರು.
‘ಗಾಂಧೀಜಿಯವರ ಸರಳತೆ, ಸೌಜನ್ಯತೆ ಹಾಗೂ ಅವರ ಅಹಿಂಸಾ ಗುಣಗಳೇ ಅವರನ್ನು ಮಹಾತ್ಮ ಎಂದು ಕರೆಯುವಂತೆ ಮಾಡಿದೆ’ ಎಂದು ತಿಳಿಸಿದರು.
ಕೆಪಿಸಿಸಿ ಸದಸ್ಯ ಪಾರಸಮಲ್ ಸುಖಾಣಿ, ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ದೇವಣ್ಣ ನಾಯಕ, ಡಾ.ರಜಾಕ್ ಉಸ್ತಾದ್ ಮಾತನಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ, ಮುಖಂಡರಾದ ಕೆ.ಶಾಂತಪ್ಪ, ಜಿ.ಬಸವರಾಜರೆಡ್ಡಿ, ಅಮರೇಗೌಡ ಹಂಚಿನಾಳ, ತಾಯಣ್ಣ ನಾಯಕ, ಅಬ್ದುಲ್ ಕರೀಂ, ರುದ್ರಪ್ಪ ಅಂಗಡಿ, ಆಂಜನೇಯ ಕುರುಬದೊಡ್ಡಿ, ದರೂರು ಬಸವರಾಜ, ಸುಧೀಂದ್ರ ಜಾಗೀರದಾರ, ಜಿ.ಸುರೇಶ, ರಾಮಕೃಷ್ಣ ನಾಯಕ, ಸಿದ್ಧಪ್ಪ ಭಂಡಾರಿ ಇದ್ದರು.
‘ಜನರಲ್ಲಿ ಮೂಡಿದ ಆಶಾಭಾವನೆ’
ಸಿಂಧನೂರು: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹಮ್ಮಿಕೊಂಡಿದ್ದ ಭಾರತ ಜೋಡೊ ಯಾತ್ರೆಯ ಸಮಾರೋಪ ಸಮಾರಂಭದ ಅಂಗವಾಗಿ ನಗರದ ತಾಲ್ಲೂಕು ಕಾಂಗ್ರೆಸ್ ಸಮಿತಿ ಕಾರ್ಯಾಲಯ ಆವರಣದಲ್ಲಿ ಸೋಮವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಗೌರವಿಸಲಾಯಿತು.
ಕೆಪಿಸಿಸಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಮಾತನಾಡಿ, ‘ಯಾತ್ರೆಯಿಂದ ರಾಹುಲ್ ಗಾಂಧಿಯವರ ಪ್ರೀತಿ ಮತ್ತು ಏಕತೆಯ ಸಂದೇಶಗಳು ಇಡೀ ದೇಶವನ್ನು ಒಗ್ಗೂಡಿಸಲು ಜನರ ಮನಸ್ಸಿನಲ್ಲಿ ಪ್ರಬಲವಾದ ಆಶಾಭಾವನೆಯನ್ನು ಮೂಡಿಸಿದೆ’ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಶಿವಕುಮಾರ್ ಜವಳಿ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷ ಸಮೀರ್ ಸಾಜಿದ್, ರಾಜ್ಯ ಪ್ರಧಾನ ಕಾರ್ಯದರ್ಶಿ ಫಿರೋಜ್ ಖಾನ್, ಕಾರ್ಯದರ್ಶಿ ಫರೀದ್‍ಖಾನ್, ಸಂಘಟನಾ ಕಾರ್ಯದರ್ಶಿ ಫಾರೂಕ್‍ಸಾಬ್, ಮುಖಂಡರಾದ ಜಾವೀದ್ ಅಲಿ, ಅಸ್ಲಾಂಪಾಷಾ, ಅಮೀನ್‍ಸಾಬ ಡೋಂಗ್ರಿ, ದಾದಾಪೀರ್ ದಢೇಸುಗೂರು ಇದ್ದರು.
ಧ್ವಜಾರೋಹಣ
ಸಿರವಾರ: ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ‘ಭಾರತ ಜೋಡೊ’ ಪಾದಯಾತ್ರೆ ಸಮಾರೋಪದ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ ಚುಕ್ಕಿ ಧ್ವಜಾರೋಹಣ ಮಾಡಿದರು.
ಹಿರಿಯ ಮುಖಂಡ ಚುಕ್ಕಿ ಸೂಗಪ್ಪ ಸಹುಕಾರ, ಅರಕೇರಿ ಶಿವಶರಣ, ಹಸೇನ್ ಅಲಿಸಾಬ್, ಎಚ್.ಕೆ. ಅಮರೇಶ, ಚಿನ್ನಾನ್ ನಾಗರಾಜ, ಸೂರಿ ದುರುಗಣ್ಣ, ಚಂದ್ರಶೇಖರ ನೀಲಗಲ್, ನಾಗಪ್ಪ ಪತ್ತಾರ್, ಹಾಜಿ ಚೌದರಿ, ಅಮರೇಶ ಮಲ್ಲಿಕಾರ್ಜುನ, ರಾಘವೇಂದ್ರ ಎಚ್.ಕೆ, ಮೈಬೂಬ್ ಸಾಬ್, ರಾಜು ಕಳಸ, ದೇವಪುತ್ರಪ್ಪ, ಮೌಲಸಾಬ್ ವರ್ಚಸ್, ಹಾಜಿ ಮಲಂಗ್, ರಫಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.