ಗುರುವಾರ , ನವೆಂಬರ್ 21, 2019
27 °C

ಗುರು ಗುಂಡಯ್ಯ ತಾತನವರ ಪುಣ್ಯೋತ್ಸವ

Published:
Updated:
Prajavani

ತುರ್ವಿಹಾಳ: ಪಟ್ಟಣದಲ್ಲಿ ಭಾನುವಾರ ಗುರು ಗುಂಡಯ್ಯ ಅಪ್ಪ ಮತ್ತು ರಾಚಯ್ಯ ತಾತನವರ 10 ನೇ ವರ್ಷದ ಪುಣ್ಯೋತ್ಸವದ ಅಂಗವಾಗಿ ಪ್ರವಚನ ಮಹಾಮಂಗಲ ಕುಂಭೋತ್ಸವ ಕಾರ್ಯಕ್ರಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಪಟ್ಟಣದ ಸುತ್ತಮುತ್ತಲಿನಿಂದ ಬಂದಿದ್ದ ಗ್ರಾಮಸ್ಥರು, ಗುಂಡಯ್ಯ ತಾತನ ಮಠದಿಂದ ಆರಂಭವಾದ ಗುರು ಗುಂಡಯ್ಯ ಮತ್ತು ರಾಚಯ್ಯ ತಾತನವರ ಭಾವ ಚಿತ್ರದ ಮೆರವಣಿಗೆ ಡೊಳ್ಳು ಕುಣಿತ, ವಾಧ್ಯ ಮೇಳ, ಭಜನಾ ಮೇಳ, ನಂದಿ ಕೋಲಿನ ಕುಣಿತ ಪಟ್ಟಣದ ಪ್ರಮುಖ ವಾಲ್ಮೀಕಿ ವೃತ್ತ, ಬಸವೇಶ್ವರ ವೃತ್ತ, ಕನಕದಾಸ ವೃತ್ತದ ಮೂಲಕ ಗುರು ಗುಂಡಯ್ಯ ತಾತನವರ ಕರ್ತೃ ಗದ್ದುಗೆಯವರೆಗೆ ಸಾಗಿ ಬಂದಿತು

ಗುರು ಗುಂಡಯ್ಯ ತಾತನ ಪುಣ್ಯೋತ್ಸವದಲ್ಲಿ ವಿಧವಿಧದ ವಸ್ತ್ರಗಳಿಂದ ಅಲಂಕಾರಗೊಂಡ ಮಹಿಳೆಯರು 501 ಕುಂಭಗಳನ್ನು ಹೊತ್ತು ಹಾಗೂ 201 ಕಳಸಗಳೊಂದಿಗೆ ಸಡಗರ ಸಂಭ್ರಮದಿಂದ ಭಾಗವಹಿಸಿದರು. ಭಕ್ತರು ಗುರು ಗುಂಡಯ್ಯ ಅಪ್ಪಾಜಿಗೆ ಜಯವಾಗಲಿ ಎಂದು ಜಯಘೋಷಗಳನ್ನು ಕೂಗುತ್ತಾ ಭಕ್ತಿಯನ್ನು ಸಮರ್ಪಿಸಿದರು.

ಪ್ರತಿದಿನ ಗುರು ಗುಂಡಯ್ಯ ತಾತನ ಸರ್ವೇಶ್ವರ ಮಠದಲ್ಲಿ ಸರ್ವ ಜನಾಂಗದ ಭಕ್ತರು ಭೇಧ ಭಾವವಿಲ್ಲದೆ ಪ್ರಸಾದವನ್ನು ಸೇವಿಸುವ ದೃಶ್ಯ ಭಾವೈಕ್ಯತೆಯ ಪ್ರತೀಕವಾಗಿ ಕಂಡು ಬಂತು

ಈ ಕಾರ್ಯಕ್ರಮದಲ್ಲಿ ಸರ್ವೇಶ್ವರ ಮಠದ ಗುಂಡಯ್ಯ ಅಪ್ಪಾಜಿ, ಮಾದಯ್ಯ ಗುರುವಿನ್, ಅಮರಗುಂಡಯ್ಯ ಶಿವಾಚಾರ್ಯರು, ಮುದಿಸಂಗಯ್ಯ ತಾತ, ಚಿದಾನಂದಯ್ಯ ಗುರುವಿನ್, ವಿರುಪಾಕ್ಷ ತಾತ, ಉದಾಸಯ್ಯಸ್ವಾಮಿ, ತಿಮ್ಮನಗೌಡ ಕೆಲ್ಲೂರು, ತಿರುಪತಿ ನಾಯಕ, ಮಂಟೆಪ್ಪ ಎಲೆಕೂಡ್ಗಿ, ನಾಗಪ್ಪ ಮೂಲಿ ಮನಿ ,ಚಂದ್ರಗೌಡ ಸಾತನೂರು, ಗುರುಪ್ರಸಾದ ಹಟ್ಟಿ, ಅಮರೇಶ ಕೆಲ್ಲೂರು, ಅಡಿವೆಪ್ಪ ಸಜ್ಜಲಗುಡ್ಡ,ಯಂಕನಗೌಡ ಬ್ಯಾಲಿಹಾಳ ಇತರರು ಇದ್ದರು

ಪ್ರತಿಕ್ರಿಯಿಸಿ (+)