ರಾಯಚೂರು: ಮುಂಗಾರು ಪೂರ್ವ ಮಳೆ ಸುರಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಬಿತ್ತನೆಗಾಗಿ ರೈತರು ಭೂಮಿ ಸಜ್ಜುಗೊಳಿಸುತ್ತಿದ್ದಾರೆ.

ಕಳೆದ ಸಾಲಿನಲ್ಲಿ ಬೆಂಬಿಡದೆ ಕಾಡಿದ ಸತತ ಮಳೆಯಿಂದ ನಿರೀಕ್ಷೆಯಂತೆ ಮುಂಗಾರು ಫಸಲು ರೈತರ ಕೈ ಸೇರಲಿಲ್ಲ. ಈ ವರ್ಷ ಈಗಾಗಲೇ ಎರಡು ಬಾರಿ ಉತ್ತಮ ಮಳೆಯಾಗಿದ್ದು, ಭೂಮಿ ಹಸಿಯಾಗಿ ಬಿತ್ತನೆಗೆ ಅಗತ್ಯ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಜಮೀನುಗಳಲ್ಲಿ ಕಸ-ಕಡ್ಡಿ ತೆಗೆದು ಸ್ವಚ್ಛಗೊಳಿಸುವುದು, ಮಳೆ ನೀರು ಭೂಮಿಯಲ್ಲಿ ಇಂಗುವಂತೆ ಮಣ್ಣನ್ನು ಹದಗೊಳಿಸುವುದು, ಮಣ್ಣಿನ ತೇವಾಂಶ, ಪೋಷಕಾಂಶ ಹೆಚ್ಚಿಸಲು ತಿಪ್ಪೆ ಗೊಬ್ಬರ ಹಾಕುವುದು, ನೇಗಿಲು, ಕುಂಟೆ ಹೊಡೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ವಾರ ಜಿಲ್ಲೆಯಾದ್ಯಂತ ಮುಂಗಾರು ಪೂರ್ವ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇತ್ತ ಕೃಷಿ ಇಲಾಖೆಯು ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 5,87,350 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹಾಕಿಕೊಂಡಿದೆ. ಇದಕ್ಕಾಗಿ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ತಯಾರಿ ಮಾಡಿಕೊಂಡಿದೆ.

ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಭತ್ತ, ಹತ್ತಿ, ಸೂರ್ಯಕಾಂತಿ, ಜೋಳ ಸೇರಿ ವಿವಿಧ ಬೆಳೆ ಬಿತ್ತನೆ ಮಾಡುವ ಸಾಧ್ಯತೆ ಇದೆ. ಪ್ರತಿ ವರ್ಷದಂತೆ ಈ ಬಾರಿಯೂ ಹತ್ತಿ, ಸೂರ್ಯಕಾಂತಿ ಬೆಳೆಗೆ ರೈತರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ಕೃಷಿ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಭತ್ತ 1,90,638 ಹೆಕ್ಟೇರ್, ತೊಗರಿ 1.5 ಲಕ್ಷ ಹೆಕ್ಟೇರ್, ಹತ್ತಿ 1.8 ಲಕ್ಷ ಹೆಕ್ಟೇರ್, ಸೂರ್ಯಕಾಂತಿ 18 ಸಾವಿರ ಹೆಕ್ಟೇರ್, ಜೋಳ 27,200 ಹೆಕ್ಟೇರ್, ಸಜ್ಜೆ 10 ಸಾವಿರ ಹೆಕ್ಟೇರ್, ಎಳ್ಳು 500 ಹೆಕ್ಟೇರ್, ಶೇಂಗಾ 1 ಸಾವಿರ ಹೆಕ್ಟೇರ್, ಸಿರಿಧಾನ್ಯ 1,023 ಹೆಕ್ಟೇರ್, ಕಬ್ಬು 500 ಹೆಕ್ಟೇರ್, ಔಡಲ 400 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ.

ಮುಂಗಾರು ಹಂಗಾಮಿಗೆ ಅಗತ್ಯ ಪ್ರಮಾಣದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಲಭ್ಯವಿದ್ದು, ರೈತರಿಗೆ ಸಮರ್ಪಕವಾಗಿ ವಿತರಣೆ ಮಾಡಲಾಗುವುದು

-ಪ್ರಕಾಶ್ ಚೌಹಾಣ್, ಜಂಟಿ ಕೃಷಿ ನಿರ್ದೇಶಕ

ರೈತರ ನೆಚ್ಚಿನ ಬೆಳೆ ಭತ್ತ, ಹತ್ತಿ

ರಾಜ್ಯದಲ್ಲಿಯೇ ಅತಿ ಹೆಚ್ಚು ಭತ್ತ ಮತ್ತು ಹತ್ತಿ ಬೆಳೆಯುವ ಜಿಲ್ಲೆಗಳ ಪೈಕಿ ರಾಯಚೂರು ಮೊದಲ ಸಾಲಿನಲ್ಲಿದೆ. ಈ ಬಾರಿ ಮುಂಗಾರು ಹಂಗಾಮಿನ ಒಟ್ಟು ಪ್ರದೇಶದ ಶೇ 32 ರಷ್ಟು ಪ್ರದೇಶದಲ್ಲಿ ಹತ್ತಿ ಬೆಳೆಯುವ ನಿರೀಕ್ಷೆ ಇದೆ. ಅತಿವೃಷ್ಟಿ, ಅನಾವೃಷ್ಟಿ ಉಂಟಾದರೂ ಹತ್ತಿ ಬೆಳೆ ಹಾನಿಯ ಪ್ರಮಾಣ ಕಡಿಮೆ ಮತ್ತು ಉತ್ತಮ ಇಳುವರಿ ಬರುವ ಕಾರಣಕ್ಕೆ ರೈತರು ಹತ್ತಿ ಬಿತ್ತನೆಗೆ ಹೆಚ್ಚು ಒಲವು ಹೊಂದಿದ್ದು, ಕೆಲ ವರ್ಷಗಳಿಂದ ಹತ್ತಿ ಬಿತ್ತನೆ ಕಡೆ ಮುಖ ಮಾಡಿದ್ದಾರೆ.

ಬಿತ್ತನೆ ಬೀಜಕ್ಕೆ ಬೇಡಿಕೆ

ಭತ್ತ, ತೊಗರಿ, ಸಜ್ಜೆ, ಹೆಸರು, ಸೂರ್ಯಕಾಂತಿ, ಮೆಕ್ಕೆಜೋಳ ರಾಯಚೂರು ತಾಲ್ಲೂಕಿಗೆ 730 ಕ್ವಿಂಟಲ್, ಮಾನ್ವಿ 1,202, ದೇವದುರ್ಗ 372, ಲಿಂಗಸುಗೂರು 1,195, ಸಿಂಧನೂರು 955 ಕ್ವಿಂಟಲ್ ಸೇರಿ ಒಟ್ಟು 5,135 ಕ್ವಿಂಟಲ್ ಬಿತ್ತನೆ ಬೀಜ ನೀಡಬೇಕು ಎಂದು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.