ಜಾಲಹಳ್ಳಿ: ಅರಕೇರಾ ತಾಲ್ಲೂಕಿನ ಬೂಮನಗುಂಡ ಗ್ರಾಮದ ಕುರ್ಲೆರದೊಡ್ಡಿಯಲ್ಲಿ ಶನಿವಾರ ರಾತ್ರಿ ಸಿಡಿಲು ಬಡಿದು ಹುಲ್ಲಿನ ಬಣವೆಗಳು ಭಸ್ಮವಾಗಿವೆ.

ರೈತರಾದ ದುರುಗಪ್ಪ, ಸಾಬಯ್ಯ, ನರಸಣ್ಣ, ಆಂಜನಯ್ಯ, ರಾಮಯ್ಯ, ದೇವರಾಜ ಎಂಬು ವವರಿಗೆ ಸೇರಿದ ಒಂಬತ್ತು ಬಣವೆಗಳು ನಾಶವಾಗಿವೆ.

ಶನಿವಾರ ರಾತ್ರಿ 7 ಗಂಟೆ ಸುಮಾರಿಗೆ ಸಿಡಿಲು ಬಡಿದು ಮೊದಲಿಗೆ ಒಂದು ಬಣವೆಗೆ ಬೆಂಕಿ ಹೊತ್ತಿಕೊಂಡು ನಂತರ ಪಕ್ಕದಲ್ಲಿರುವ ಬಣವೆಗಳಿಗೆ ಹರಡಿದೆ. ಒಂಬತ್ತು ಬಣವೆಗಳಲ್ಲಿ ಜೋಳದ ಕಣಕಿ, ಭತ್ತದ ಹುಲ್ಲು, ಶೇಂಗಾ ಹೊಟ್ಟನ್ನು ಸಂಗ್ರಹಿಸಲಾಗಿತ್ತು.

ಅರಕೇರ, ದೇವದುರ್ಗ ಅಗ್ನಿಶಾಮಕ ಸಿಬ್ಬಂದಿ ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನ ಜಾವ 3 ಗಂಟೆವರೆಗೆ ಬೆಂಕಿ ನಂದಿಸಲು ಹರಸಾಹಸ ಪಟ್ಟರು.

ಬೆಂಕಿ ಕಿಡಿಯಿಂದ ಭಾನುವಾರ ಬೆಳಿಗ್ಗೆ 10 ಗಂಟೆಯ ನಂತರ ಬಣವೆ ಮತ್ತೆ ಹೊತ್ತಿ ಉರಿದಿದೆ. ಪುನಃ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಂದಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-32-249517166

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.