ಸಿರವಾರ: ರಾಯಚೂರು– ಲಿಂಗಸುಗೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ತಾಲ್ಲೂಕಿನ ಅತ್ತನೂರು ಗ್ರಾಮದಲ್ಲಿ ವರ್ಷ ಪೂರ್ತಿ ಕುಡಿಯುವ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಇದೆ. ಇಲ್ಲಿನ ಸಮಸ್ಯೆ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದರೂ ಪರಿಹಾರ ಮಾತ್ರ ಸಿಕ್ಕಿಲ್ಲ.

ಗ್ರಾಮಸ್ಥರಿಗೆ 1 ಕಿ.ಮೀ ದೂರದ ಕೆರೆಯ ನೀರೇ ಗತಿಯಾಗಿದ್ದು ಅಲ್ಲಿಂದ ಪ್ರತಿದಿನ ಬೆಳಿಗ್ಗೆ ನೀರು ತರುವುದೇ ಕೆಲಸವಾಗಿದೆ. ಸೈಕಲ್, ಬಂಡಿ, ದ್ವಿಚಕ್ರ ವಾಹನಗಳ ಮೂಲಕ ನೀರು ತರಬೇಕಾಗಿದ್ದು ಬೇಸಿಗೆಯಲ್ಲಿ ಅರ್ಧ ದಿನ ನೀರಿಗಾಗಿ ಮೀಸಲಿಡಬೇಕಾದ ಅನಿವಾರ್ಯತೆ ಉಂಟಾಗುತ್ತದೆ.

‘ಗ್ರಾಮದಲ್ಲಿ ಕೊಳವೆಬಾವಿ ಮತ್ತು ಪೈಪ್ಲೈನ್ ವ್ಯವಸ್ಥೆ ಇದ್ದರೂ ಕೊಳವೆಬಾವಿ ನೀರು ಬಳಕೆಗೆ ಯೋಗ್ಯವಿಲ್ಲದ ಕಾರಣ ಕೆರೆ ನೀರು ಅನಿವಾರ್ಯವಾಗಿದೆ. ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಗಗನ ಕುಸುಮವಾಗಿದ್ದು ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸಂಕಷ್ಟ ಎದುರಿಸುವಂತಾಗಿದೆ’ ಎಂದು ಗ್ರಾಮಸ್ಥ ಮುತ್ತಣ್ಣ ಬಾರಿಕೇರ್ ಆರೋಪಿಸುತ್ತಾರೆ.

ಪೈಪ್ ಲೈನ್ ಮೂಲಕ ಕೆರೆ ನೀರು ಪೂರೈಸಬೇಕು ಎನ್ನುವ ಮನವಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಶಾಶ್ವತ ಕುಡಿಯುವ ನೀರಿಗಾಗಿ ಗ್ರಾಮದಿಂದ 3 ಕಿ.ಮೀ ದೂರದಲ್ಲಿ ಸ್ಥಳ ಗುರುತಿಸಿ ಸರ್ಕಾರ ₹15 ಕೋಟಿ ಅನುದಾನ ಮಂಜೂರು ಮಾಡಿದ್ದರೂ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿ ಪ್ರಗತಿ ಕಂಡಿಲ್ಲ. ಈ ಯೋಜನೆಯ ಬಗ್ಗೆ ಯಾವುದೇ ಮಾಹಿತಿಯೂ ಸಿಗದಂತಾಗಿದೆ. ಶಾಶ್ವತ ಕುಡಿಯುವ ನೀರಿನ ಯೋಜನೆಯ ಕುರಿತು ವಿಧಾನಸಭೆ ಕಲಾಪದಲ್ಲಿ ಸ್ಥಳೀಯ ಶಾಸಕರು ಎರಡು ಬಾರಿ ಪ್ರಸ್ತಾವ ಮಾಡಿದ್ದರೂ ಸರ್ಕಾರ ಪರಿಹಾರ ಒದಗಿಸಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-32-1293047551

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.