ರಾಮದುರ್ಗ (ದೇವದುರ್ಗ): ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ರಕ್ತಕ್ಕೆ ಪರ್ಯಾಯ ಇಲ್ಲ. ಅಗತ್ಯ ಸಂದರ್ಭದಲ್ಲಿ ರಕ್ತ ಬೇಕಾದರೆ ಮತ್ತೊಬ್ಬ ವ್ಯಕ್ತಿಯ ರಕ್ತವೇ ನೀಡಬೇಕು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬನದೇಶ್ವರ ಗಬ್ಬೂರು ಹೇಳಿದರು.

ಅರಕೇರಾ ತಾಲ್ಲೂಕಿನ ರಾಮದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು,‘ಯುವಕರು ರಕ್ತದಾನ ಮಾಡಿದರೆ, ರಕ್ತದ ಉತ್ಪಾದನೆ ಹೆಚ್ಚಾಗಿ ಶೇ 80ರಷ್ಟು ಹೃದಯಾಘಾತ ತಡೆಯುತ್ತದೆ. ಅಧಿಕ ರಕ್ತದೊತ್ತಡ, ಕೊಬ್ಬಿನಾಂಶ, ಸಕ್ಕರೆ ಕಡಿಮೆ ಮಾಡಿ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ’ ಎಂದು ಅವರು ಹೇಳಿದರು.

ಶಿಬಿರದಲ್ಲಿ 40 ಯುನಿಟ್ ರಕ್ತ ಸಂಗ್ರಹಿಸಲಾಯಿತು.

ವೈದ್ಯರಾದ ಡಾ.ಎಂ.ಎಸ್.ಹೊಸಮನಿ, ಹೇಮಾ, ಮನೋಜ್, ಪ್ರಶಾಂತ, ಕೆ.ಶೈಲಜಾ, ಸುನಂದ, ಫರಿದ್ ಬೇಗಂ, ಬಸವರಾಜ, ರಾಮದುರ್ಗ ಗ್ರಾಮದ ಯುವ ಮುಖಂಡರಾದ ಮಧು ಗೌಡ, ಗಂಗಾಧರ, ನಾಗರಾಜ ಬಳ್ಳಾರಿ, ಶಿವರಾಜ ನಾಯಕ, ಗಂಗಾಧರ ತಾಂಬೆ, ರಾಜಪ್ಪ ಕಬ್ಬೇರ, ದೇವರಾಜ, ಹನುಮಂತ, ಬಸವರಾಜ, ಸಂಪತ್ ರಾಜ್, ಗಂಗಾಧರ, ಅನಿಲ, ರಾಜು, ಮಾನಯ್ಯ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-32-1415248511

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.