ಸಿರವಾರ: ‘ಭಗವಾನ್ ಬುದ್ಧ ಹಾಕಿಕೊಟ್ಟ ಸನ್ಮಾರ್ಗ ಶ್ರೇಷ್ಠವಾಗಿದ್ದು, ಬುದ್ಧರ ಧಮ್ಮ ಮಾರ್ಗದಲ್ಲಿ ನಡೆದರೆ, ಕಷ್ಟಕರ ಜೀವನವೂ ಹಸನಾಗುತ್ತದೆ’ ಎಂದು ಶಿಕ್ಷಕ ಚನ್ನಬಸವ ಹೆಗ್ಗಡದಿನ್ನಿ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತದಿಂದ ಬುದ್ಧ ಪೂರ್ಣಿಮೆ ಮತ್ತು ಬುದ್ಧರ 2,570ನೇ ಜಯಂತಿ ಅಂಗವಾಗಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪ್ರಪಂಚದ ಖ್ಯಾತ ವಿಜ್ಞಾನಿ ಐನ್ಸ್ಟೈನ್ ಹೇಳಿಕೆಯಂತೆ ಜಗತ್ತಿನಲ್ಲಿ ವೈಜ್ಞಾನಿಕವಾಗಿ ರಚಿತವಾದ ವಿಶ್ವದ ಏಕೈಕ ಧರ್ಮ ಬೌದ್ಧ ಧರ್ಮವಾಗಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಅವರು ಬುದ್ಧ ಧರ್ಮ ಸ್ವೀಕಾರಕ್ಕೆ ಮುನ್ನ 5 ವರ್ಷ ಅಧ್ಯಯನ ಮಾಡಿ, ಬುದ್ಧ ಧರ್ಮದ ಸಾರಗಳಿಗೆ ತಮ್ಮ ಜೀವನವನ್ನು ಸಮರ್ಪಿಸಿದರು’ ಎಂದರು.

ರಾಯಚೂರು ಪಶು ವೈದ್ಯಾಧಿಕಾರಿ ಷಣ್ಮುಖಪ್ಪ ಮಾತನಾಡಿ, ಬುದ್ಧರ ಅಷ್ಟಾಂಗ ಮಾರ್ಗಗಳು ಹಾಗೂ ಪಂಚಶೀಲಗಳ ಬಗ್ಗೆ ವಿವರಿಸಿದರು.

ತಹಶೀಲ್ದಾರ್ ಅಶೋಕ ಪವಾರ್, ಶಿಕ್ಷಕ ಆಂಜನೇಯ ರಾಯಚೂರು, ಬೌದ್ಧ ಧಮ್ಮದೀಪ ಸಂಚಲನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತ ಸಿರವಾರ, ಗುರಪ್ಪ, ಮರಿಲಿಂಗಪ್ಪ ಹೆಗ್ಗಡದಿನ್ನಿ, ರಮೇಶ ಭಂಡಾರಿ, ಮುದಿಯಪ್ಪ ಹೀರಾ, ತಿಮ್ಮಣ್ಣ ಮರಾಠ, ಮಲ್ಲಯ್ಯ, ರಮೇಶ ಇಂದಿರಾನಗರ ಸೇರಿದಂತೆ ಸಮಾಜದ ಮುಖಂಡರು, ತಹಶೀಲ್ದಾರ್ ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-32-1085133837

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.