ಬುಧವಾರ, ನವೆಂಬರ್ 13, 2019
23 °C

ರಾಯಚೂರು| ನಗರೋತ್ಥಾನ ಕಾಮಗಾರಿ ವೀಕ್ಷಣೆ; ಅಧಿಕಾರಿಗೆ ತರಾಟೆ

Published:
Updated:
Prajavani

ಮುದಗಲ್: ಪಟ್ಟಣದಲ್ಲಿ ನಗರೋತ್ಥಾನ ಯೋಜನೆಯಡಿ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿ ಕುರಿತು ಗೊಂದಲದ ಮಾಹಿತಿ ನೀಡಿದ್ದಕ್ಕೆ ಪುರಸಭೆ ಎಂಜಿನಿಯರ್ ಬಡಿಗೇರಗೆ ಶಾಸಕ ಡಿ.ಎಸ್.ಹೂಲಗೇರಿ ತರಾಟೆಗೆ ತೆಗೆದುಕೊಂಡರು.

ಇಲ್ಲಿನ ಸಿಂಡಿಕೇಟ್ ಬ್ಯಾಂಕ್ ಎದುರು ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿ ವೀಕ್ಷಣೆ ವೇಳೆ ಗೊಂದಲಕಾರಿ ಮಾಹಿತಿ ನೀಡಿದ್ದಕ್ಕೆ, ‘ಸಮರ್ಪಕವಾಗಿ ಮಾಹಿತಿ ನೀಡಿ’ ಎಂದು ಶಾಸಕರು ಸೂಚಿಸಿದರು.

ಗಿರಿಯಪ್ಪ ಸುರಪುರ ಅಂಗಡಿಯಿಂದ ಪುರಸಭೆ ಮಾಜಿ ಅದ್ಯಕ್ಷ ಅಬ್ದುಲ್ ರೌಫ್ ಮನೆಯವರೆಗಿನ ಸಿಸಿ ರಸ್ತೆ ಕಾಮಗಾರಿ ಹಾಗೂ ಕುಡಿವ ನೀರು ಸರಬರಾಜು ವಾಲ್ ಚೆಂಬರ್ ನಿರ್ಮಾಣ ವೀಕ್ಷಿಸಿದರು.

ಕಾಮಗಾರಿ ಅಂದಾಜು ಪತ್ರಿಕೆ, ನೀಲ ನಕ್ಷೆ ಪರಿಶೀಲಿಸಿದರು. ‘ಅಂದಾಜು ಪತ್ರಿಕೆಯಲ್ಲಿ ತೋರಿಸಿದಂತೆ ಮಾಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಗುಣಮಟ್ಟದ ಕಾಮಗಾರಿ ಕೈಕೊಳ್ಳಿ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬೇಡಿ’ ಎಂದು ಶಾಸಕರು ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚಿಸಿದರು.

ಪ್ರಮುಖರಾದ ಸುರೇಂದ್ರಗೌಡ, ಮಹಾಂತೇಶ ಪಾಟೀಲ, ಪುರಸಭೆ ಸದಸ್ಯ ಅಜ್ಮೀರಸಾಬ ಬೆಳ್ಳಿಕಟ್ಟ್, ತಮ್ಮಣ್ಣ, ಕೇಶವರಡ್ಡಿ ಮತ್ತು ಮುಖ್ಯಾಧಿಕಾರಿ ನರಸಿಂಹಮೂರ್ತಿ ಇದ್ದರು.

ಪ್ರತಿಕ್ರಿಯಿಸಿ (+)