ರಾಯಚೂರು: ‘ಸಾಮುದಾಯಿಕ ಸೇವಾ ಕಾರ್ಯಗಳನ್ನು ಸಮಾಜ ಯಾವತ್ತೂ ಬೆಂಬಲಿಸುತ್ತದೆ’ ಎಂದು ಮಟಮಾರಿಯ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಸನಗೌಡ ಬುರೆಡ್ಡಿ ಹೇಳಿದರು.

ಮಟಮಾರಿ ಗ್ರಾಮದಲ್ಲಿ ಆಯೋಜಿಸಿದ್ದ ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್ಎಸ್ಎಸ್ ಘಟಕದ 2025-26ನೇ ಸಾಲಿನ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ಉದ್ಯೋಗ ಮತ್ತು ಆರ್ಥಿಕ ಸಂಪಾದನೆಯ ಸ್ವಾರ್ಥದ ಹಿಂದೆ ಓಡುತ್ತಿರುವ ಇಂದಿನ ಯುವ ಜನತೆಯಲ್ಲಿ ಸಾಮಾಜಿಕ ಮತ್ತು ಸಾಮುದಾಯಿಕ ಸೇವೆಯ ಪ್ರಜ್ಞೆ ಕಾಣುವುದು ಬಹಳ ಅಪರೂಪವಾಗಿದೆ’ ಎಂದರು.

‘ಗ್ರಾಮಗಳ ಶ್ರೇಯೋಭಿವೃದ್ಧಿಯು ಯುವಜನತೆಯ ಶ್ರಮ ಮತ್ತು ಭಾಗವಹಿಸುವಿಕೆಯನ್ನು ಅವಲಂಬಿಸಿದೆ. ಸಾಮಾಜಿಕ ಅಭಿವೃದ್ಧಿಯು ಸಮಾಜ ಮತ್ತು ಸಾಮುದಾಯಿಕ ಸೇವೆಗಳನ್ನು ಆಧರಿಸಿದ್ದು, ಅಂತಹ ಕಾರ್ಯಚಟುವಟಿಕೆಗಳನ್ನು ಯಾರೇ ನಿರ್ವಹಿಸಿದರೂ ಸಮಾಜ ಬೆಂಬಲಿಸುತ್ತದೆ’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೇಖರಪ್ಪ ಮಾತನಾಡಿ, ‘ಕಾಲೇಜಿನ ಕೋಣೆಗಳಲ್ಲಿ ಕಲಿತು ಕೊಂಡು ಸಂಪಾದಿಸುವ ಜ್ಞಾನಕ್ಕಿಂತ, ಚಟುವಟಿಕೆಗಳಲ್ಲಿ ಭಾಗವಹಿಸಿ, ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಂಡಾಗ ಸಿಗುವ ಅನುಭವ ಜನ್ಯ ಜ್ಞಾನವೂ ಇಂದಿನ ಯುವ ಜನತೆಗೆ ಅಗತ್ಯವಿದೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಸುಗುಣಾ ಬಸವರಾಜ ಮಾತನಾಡಿದರು. ಎನ್ಎಸ್ಎಸ್ ಅಧಿಕಾರಿ ಸಂತೋಷಕುಮಾರ ರೇವೂರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗ್ರಾಮದ ಮುಖಂಡರಾದ ಬಸನಗೌಡ ಮುದೀಗೌಡರ, ಚಂದ್ರಪ್ಪ ನಾಯಕ, ಈರಣ್ಣ, ಪ್ರಾಧ್ಯಾಪಕ ಶರಣಗೌಡ.ಕೆ, ರೇಖಾ ಪಾಟೀಲ, ವೀರಾಂಜನೇಯ ಉಪಸ್ಥಿತರಿದ್ದರು.

ಸ್ವಯಂ ಸೇವಕಿ ಸಂಗೀತಾ ಪ್ರಕಾಶ, ಮಹೇಶ್ವರಿ ಹಾಗೂ ತೇಜೇಶ್ವರಿ ಪ್ರಾರ್ಥನೆ ಗೀತೆ ಹಾಡಿದರು. ಸಂಗೀತಾ ಸ್ವಾಗತಿಸಿದರು. ಲಕ್ಷ್ಮೀ ನರಸಪ್ಪ ನಿರೂಪಿಸಿದರು. ತೇಜೇಶ್ವರಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-32-1321755297

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.