ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: 15 ಜನರಿಗೆ ಕೋವಿಡ್ ದೃಢ

9 ವರ್ಷದ ಓರ್ವ ಬಾಲಕಿ, 16 ವರ್ಷದ ಇಬ್ಬರು ಬಾಲಕರಿಗೂ ಸೋಂಕು
Last Updated 20 ಜೂನ್ 2020, 15:05 IST
ಅಕ್ಷರ ಗಾತ್ರ

ರಾಯಚೂರು: ರಾಜ್ಯ ಆರೋಗ್ಯ ಮತ್ತು ಕಲ್ಯಾಣ ಇಲಾಖೆಯಿಂದ ಶನಿವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ರಾಯಚೂರು ಜಿಲ್ಲೆಯಲ್ಲಿ 15 ಮಂದಿಗೆ ಕೋವಿಡ್‌ ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆಯು 429 ಕ್ಕೆ ಏರಿಕೆಯಾಗಿದೆ. ಆದರೆ, ಕೋವಿಡ್‌ನಿಂದ ಗುಣಮುಖರಾದವರ ಪ್ರಮಾಣ ಶೇ 55 ಕ್ಕೆ ಹೆಚ್ಚಳವಾಗಿರುವುದು ವಿಶೇಷ.

ಇತರೆ ಅನಾರೋಗ್ಯದಿಂದ ಬಳಲುತ್ತಿದ್ದ 35 ವರ್ಷ ಮಹಿಳೆಯೊಬ್ಬರನ್ನು ಹೊರತುಪಡಿಸಿದರೆ, ಇನ್ನುಳಿದ 14 ಜನರಿಗೂ ಮಹಾರಾಷ್ಟ್ರದಿಂದ ಪ್ರಯಾಣಿಸಿದ್ದರಿಂದ ಕೋವಿಡ್‌ ಬಂದಿದೆ. ಅದರಲ್ಲಿ 9 ವರ್ಷ ಬಾಲಕಿ ಹಾಗೂ 16 ವರ್ಷಗಳ ಇಬ್ಬರು ಬಾಲಕರು ಇದ್ದಾರೆ. ಮಹಾರಾಷ್ಟ್ರದ ನಂಜು ಜಿಲ್ಲೆಯಲ್ಲಿ ವಿಸ್ತರಿಸುತ್ತಲೇ ಇದೆ.

ಓಪೆಕ್‌ ಆಸ್ಪತ್ರೆಯಲ್ಲಿ ಸದ್ಯಕ್ಕೆ ಸಕ್ರಿಯವಾಗಿರುವ ಸೋಂಕಿತರು ಒಟ್ಟು 190 ಜನರಿದ್ದಾರೆ. ಇವರಲ್ಲಿ ರೋಗ ಲಕ್ಷಣಗಳು ಇಲ್ಲದವರ ಸಂಖ್ಯೆಯೇ ಹೆಚ್ಚಾಗಿದೆ. ಆದರೆ, ಆರೋಗ್ಯದ ಮೇಲೆ ವೈದ್ಯರು ನಿಗಾ ವಹಿಸಿದ್ದಾರೆ.

ಸಾವಿರ ಮಾದರಿಗಳ ನಿರೀಕ್ಷೆ: ಕೋವಿಡ್‌ ತಪಾಸಣೆಗಾಗಿ ಜಿಲ್ಲೆಯಿಂದ ಕಳುಹಿಸಿರುವ ಗಂಟಲು ದ್ರುವ ಮಾದರಿಗಳ ವರದಿಗಳ ಪೈಕಿ ಇನ್ನೂ 1,001 ವರದಿಗಳು ಬರಬೇಕಿದೆ. ಶನಿವಾರ ಒಂದೇ ದಿನ 338 ಜನರ ಗಂಟಲು ದ್ರುವ ಮಾದರಿ ಸಂಗ್ರಹಿಸಿಕೊಳ್ಳಲಾಗಿದೆ.

ಇದುವರೆಗೂ ಜಿಲ್ಲೆಯಲ್ಲಿ ಒಟ್ಟು 19,730 ಜನರ ಗಂಟಲು ದ್ರುವ ಮಾದರಿಗಳನ್ನು ಕಳುಹಿಸಲಾಗಿದ್ದು, ಅವುಗಳಲ್ಲಿ 18,294 ಮಾದರಿಗಳ ವರದಿಗಳು ಬಂದಿವೆ. ಸಾಂಸ್ಥಿಕ ಹೋಂ ಕ್ವಾರಂಟೈನ್‌ ಕೇಂದ್ರದಲ್ಲಿ ಇನ್ನೂ 180 ಜನರು ಉಳಿದುಕೊಂಡಿದ್ದಾರೆ.

ಮಹಾರಾಷ್ಟ್ರದಿಂದ ಜಿಲ್ಲೆಗೆ ಇದುವರೆಗೂ 4,555 ಜನರು ಬಂದಿದ್ದಾರೆ. ಸದ್ಯಕ್ಕೆ ಕ್ವಾರಂಟೈನ್‌ ಕೇಂದ್ರಗಳಲ್ಲಿ 157 ಜನರನ್ನು ಉಳಿಸಲಾಗಿದೆ. ತಮಿಳುನಾಡಿನಿಂದ ಬಂದಿರುವ 6 ಜನರು, ರಾಜಸ್ತಾನದಿಂದ ಬಂದಿರುವ ಒಬ್ಬರು, ತೆಲಂಗಾಣದಿಂದ ಬಂದಿರುವ ಎಂಟು ಜನರು ಹಾಗೂ ಆಂಧ್ರಪ್ರದೇಶದಿಂದ ಬಂದಿರುವ ಇಬ್ಬರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT