ರಾಯಚೂರು ಡಿಸಿ ಕಾರ್ಯಯೋಜನೆಗೆ ಕೇಂದ್ರ ಪ್ರಶಂಸೆ

ರಾಯಚೂರು: ‘ಮಹಾಮಾರಿ ದಿನಗಳಲ್ಲಿ ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಅನುಸರಿಸಿದ ಆಡಳಿತಾತ್ಮಕ ಉತ್ತಮ ಕ್ರಮಗಳು’ ಕುರಿತು ರಾಯಚೂರು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಅವರು ಮಂಡಿಸಿದ ಗುಣಾತ್ಮಕ ಹಾಗೂ ಸರಳ ಆಡಳಿತಾತ್ಮಕ ಅಂಶಗಳಿರುವ ಪ್ರಾತ್ಯಕ್ಷಿಕೆಯನ್ನು ಕೇಂದ್ರದ ನ್ಯಾಷನಲ್ ಸೆಂಟರ್ ಫಾರ್ ಗುಡ್ ಗವರ್ನನ್ಸ್ ಪ್ರಧಾನ ನಿರ್ದೇಶಕ ವಿ.ಶ್ರೀನಿವಾಸ್ ಅವರು ಪ್ರಶಂಸಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರಿಗೆ ಪತ್ರ ಬರೆದಿದ್ದಾರೆ.
ಆರ್.ವೆಂಕಟೇಶಕುಮಾರ್ ಅವರ ವೈಯಕ್ತಿಕ ಸಾಧನೆಯಲ್ಲಿ ಈ ಪತ್ರವನ್ನು ಸೇರ್ಪಡೆ ಮಾಡುವಂತೆಯೂ ಹೇಳಿರುವುದು ವಿಶೇಷ.
ಕೇಂದ್ರದ ಸಾರ್ವಜನಿಕ ಕುಂದುಕೊರತೆ, ಪಿಂಚಣಿ ಹಾಗೂ ಆಡಳಿತಾತ್ಮಕ ಸುಧಾರಣೆ ಇಲಾಖೆಯು ಕಳೆದ ಸೆಪ್ಟೆಂಬರ್ 4 ರಂದು ಆನ್‌ಲೈನ್‌ನಲ್ಲಿ ಈ ಬಗ್ಗೆ ಕಾರ್ಯಾಗಾರ ಆಯೋಜಿಸಿತ್ತು. ಅದರಲ್ಲಿ ಸಂಬಂಧಿತ ಇಲಾಖೆಯ ಸಚಿವರು, ನೀತಿ ಆಯೋಗದ ಕಾರ್ಯದರ್ಶಿ ಹಾಗೂ 117 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿ ಒಟ್ಟು 817 ಪ್ರತಿನಿಧಿಗಳು ಭಾಗಿಯಾಗಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.