ರಾಯಚೂರು: ‘ಕಳೆದ 30 ವರ್ಷಗಳಿಂದ ನಡೆಯದೇ ಇರುವ ಅಭಿವೃದ್ಧಿ ಕಾಮಗಾರಿಗಳಿಗೆ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅವರ ಪ್ರಯತ್ನದ ಫಲವಾಗಿ ನಗರಕ್ಕೆ ಅನುದಾನ ಬಿಡುಗಡೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರ ಕೊಡುಗೆ ಶೂನ್ಯ’ ಎಂದು ಆರ್ಡಿಎ ಸದಸ್ಯ ನರಸಿಂಹಲು ಮಾಡಗಿರಿ ಹೇಳಿದರು.

ವಾರ್ಡ್ ನಂ–21 ನೀಲಕಂ ಠೇಶ್ವರ ದೇವಸ್ಥಾನದ ಬಳಿ ಡಾ.ಬಾಬುಜಗಜೀವನರಾಂ ಕಲ್ಯಾಣ ಮಂಟಪ ನಿರ್ಮಾಣಕ್ಕೆ ₹5 ಕೋಟಿ ಮಂಜೂರಾಗಿದೆ. ಸಚಿವ ಎನ್.ಎಸ್.ಬೋಸರಾಜರ ಬಳಿ ನಿಯೋಗದೊಂದಿಗೆ ತೆರಳಿ ಮನವಿ ಮಾಡಿದ್ದರಿಂದ, ಸಮಾಜ ಕಲ್ಯಾಣ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದರಿಂದ ಅನುದಾನ ಮಂಜೂರಾಗಿದೆ’ ಎಂದು ಭಾನುವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಅವರು 2024-25ರಲ್ಲಿ ಪತ್ರ ಬರೆದಿರಬಹುದು. ಆದರೆ, ಸಚಿವರ ಪ್ರಯತ್ನದ ಫಲವಾಗಿಯೇ ಅನುದಾನ ಮಂಜೂರಾಗಿದೆ. ಗಾಜಗಾರಪೇಟೆ ಶಾಲೆಗೆ ಆರು ಕೊಠಡಿ ನಿರ್ಮಾಣಕ್ಕೆ ₹1 ಕೋಟಿ, ಕೆಕೆಆರ್ಡಿಬಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನ ಲಭಿಸಿದೆ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಕಚೇರಿ ಬಳಿ ಡಾ.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ ರಾಂ ಭವನ ನಿರ್ಮಾಣವಾಗಿದ್ದರಿಂದ ಹರಿಜನವಾಡದಲ್ಲಿ ಮತ್ತೊಂದು ಭವನ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಲು ನಿರಾಕರಿಸಿತ್ತು. ಸಚಿವ ಎನ್.ಎಸ್.ಬೋಸರಾಜು ಅವರ ಪ್ರಯತ್ನದಿಂದ ಅನುದಾನ ಬಿಡುಗಡೆಯಾಗಿದೆ. ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಅದೇ ವಾರ್ಡ್ನಲ್ಲಿ ಹುಟ್ಟಿ ಬೆಳೆದರೂ ಯಾವ ಕೊಡುಗೆಯನ್ನೂ ನೀಡಿಲ್ಲ. ರಾಜಕೀಯ ಕುತಂತ್ರದಿಂದ ತಾವು ಮಾಡಿರುವುದಾಗಿ ಹೇಳಿಕೊಳ್ಳುತ್ತಲಿದ್ದಾರೆ ಎಂದು ಆರೋಪಿಸಿದರು.

ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಸಹ ನಗರದ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ. ಅವರು ಸಚಿವರಾಗಿ ಒಂದೇ ಒಂದು ಬಾರಿ ನಗರಸಭೆ, ಮಹಾನಗರ ಪಾಲಿಕೆ ಸಭೆ ನಡೆಸಲಿಲ್ಲ. ನಗರದ ಸಮಸ್ಯೆದ ಕುರಿತು ಸದಸ್ಯರೊಂದಿಗೆ ಕನಿಷ್ಠ ಚರ್ಚೆಯೂ ಮಾಡಲಿಲ್ಲ. ಪಾಲಿಕೆ ಸದಸ್ಯರು ಯಾರು ಎಂಬುದು ಸಹ ಅವರಿಗೆ ಗೊತ್ತಿಲ್ಲ ಎಂದು ಅವರು ಹೇಳಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ನರಸರೆಡ್ಡಿ ಮಾತನಾಡಿ, ‘ಯರಮರಸ್ ಬಳಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಅಲ್ಲಿಯ ನಿವಾಸಿಗಳಿಗೆ ಪರಿಹಾರ, ನಿವೇಶನ ಮಂಜೂರಾತಿಯನ್ನು ಎನ್.ಎಸ್.ಬೋಸರಾಜು ಮಾಡಿಸಿದ್ದಾರೆ. ದಂಡ ಗ್ರಾಮದ 108 ಮನೆಗಳು ಹಾಗೂ ಇತರೆ 37 ಶೆಡ್ಗಳ ನಿವಾಸಿಗಳಿಗೆ ಪರಿಹಾರ ವಿತರಿಸಲಾಗಿದೆ. ನಿವೇಶನ ಕೊಡಲಾಗುತ್ತಿದೆ’ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಣಿಕಂಠ, ರಾಮಪ್ರಸಾದ, ತೇಜಪ್ಪ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-32-257813095

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.