ರಾಯಚೂರು: ಜಿಲ್ಲೆಯಲ್ಲಿ ಎರಡು ವಾರಗಳಿಂದ ಸರಾಸರಿ 42ರಿಂದ 43 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದೆ.

21 ಪ್ರದೇಶಗಳಲ್ಲಿ ಬೆಂಕಿ ಬಿಸಿಲು ಮುಂದುವರಿದಿದೆ. ಮೇ 12ರವರೆಗೂ ಪ್ರಖರ ಬಿಸಿಲು ಮುಂದುವರಿಯಲಿದೆ ಎನ್ನುವ ಆಘಾತಕಾರಿ ವಿಷಯವನ್ನು ಹವಾಮಾನ ಇಲಾಖೆಯ ಅಧಿಕಾರಿಗಳು ಬಹಿರಂಗ ಪಡಿಸಿದ್ದಾರೆ.

ಜಿಲ್ಲೆಯ 21 ಸ್ಥಳಗಳಲ್ಲಿ ಶುಕ್ರವಾರ 43 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಮುಂದಿನ ಐದು ದಿನಗಳಲ್ಲಿ ಗರಿಷ್ಠ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್ ದಾಡಿದರೂ ಅಚ್ಚರಿ ಇಲ್ಲ. ಈ ನಡುವೆ ಮಳೆ ಬಂದರೂ ಧಗೆ ಹೆಚ್ಚಾಗಲಿದೆಯೇ ಹೊರತು ವಾತಾವರಣ ತಣ್ಣಗಾಗುವುದಿಲ್ಲ.

ರಾಯಚೂರು ನಗರ ಹೊರ ವಲಯದಲ್ಲಿರುವ ಯರಮರಸ್ ಕ್ಯಾಂಪ್ನಲ್ಲಿ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ನಗರದೊಳಗೆ ಗುಡ್ಡ ಇರುವ ಕಾರಣ ಗಾಳಿಯ ಪ್ರಮಾಣ ಕಡಿಮೆ ಇದೆ. ನಗರದಲ್ಲಿ 43 ಡಿಗ್ರಿ ಸೆಲ್ಸಿಯಸ್ ತಾಪಮಾನ ಮುಂದುವರಿದಿದ್ದು, ಧಗೆ ನಗರದ ಜನರನ್ನು ಹಿಂಡಿಹಿಪ್ಪೆ ಮಾಡಿದೆ.

ಏಪ್ರಿಲ್ 17ರಂದು ರಾಯಚೂರಲ್ಲಿ 44 ಡಿಗ್ರಿ ಸೆಲ್ಸಿಯಸ್, ರಾಯಚೂರು ತಾಲ್ಲೂಕಿನ ಕಲ್ಮಲಾದಲ್ಲಿ 43.5, ದೇವಸುಗೂರಲ್ಲಿ 43.5, ಲಿಂಗಸುಗೂರು ತಾಲ್ಲೂಕಿನ ಗುರಗುಂಟಾ 43.8, ಸಿಂಧನೂರು ತಾಲ್ಲೂಕಿನ ಹಡಗಿನಾಳದಲ್ಲಿ 43.9, ವಲ್ಕಮದಿನ್ನಿಯಲ್ಲಿ 43.1, ದೇವದುರ್ಗ ತಾಲ್ಲೂಕಿನ ಗಬ್ಬೂರಲ್ಲಿ 43.2, ಅರಕೇರಿಯಲ್ಲಿ 43.1, ಮಾನ್ವಿಯಲ್ಲಿ 43.1, ಹಿರೇಕಟಕನಾಳದಲ್ಲಿ 43.2, ಸಿಂಧನೂರಲ್ಲಿ 42.9 ಹಾಗೂ ಸಿರವಾರದಲ್ಲಿ 42.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ ಅಧಿಕಾರಿ ತಿಳಿಸಿದ್ದಾರೆ.

ಏಪ್ರಿಲ್ 16ರಂದು ಸಿಂಧನೂರು ತಾಲ್ಲೂಕಿನ ಸಾಲಗುಂದ, ಹಡಗಿನಹಾಳದಲ್ಲಿ 44.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಸಿಂಧನೂರು ತಾಲ್ಲೂಕಿನ ವಲ್ಕಮದಿನ್ನಿಯಲ್ಲಿ 43.1, ರಾಯಚೂರು ತಾಲ್ಲೂಕಿನ ಕಲ್ಮಲಾದಲ್ಲಿ 43.5, ದೇವಸುಗೂರಲ್ಲಿ 43.5, ಮಾನ್ವಿ ಪಟ್ಟಣದಲ್ಲಿ 43.2, ಲಿಂಗಸುಗೂರು ತಾಲ್ಲೂಕಿನ ಗುರಗುಂಟಾದಲ್ಲಿ 43.1, ಮಾನ್ವಿ ತಾಲ್ಲೂಕಿನ ಕುರ್ಡಿಯಲ್ಲಿ 42.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿ ಅನಿಲ ಕುಲಕರ್ಣಿ ಹೇಳುತ್ತಾರೆ.

ಎಪಿಎಂಸಿಯಲ್ಲಿ ಕುಡಿಯುವ ನೀರಿಲ್ಲ

ಅತಿದೊಡ್ಡ ಮಾರುಕಟ್ಟೆ ಎಂದೇ ಗುರುತಿಸಿಕೊಂಡಿರುವ ರಾಯಚೂರು ಎಪಿಎಂಸಿಗೆ ರೈತರು ಭತ್ತ, ತೊಗರಿ, ಶೇಂಗಾ, ಕುಸುಬೆ ಹಾಗೂ ಈರುಳ್ಳಿ ತರುತ್ತಿದ್ದಾರೆ. ಎಪಿಎಂಸಿಯಲ್ಲಿ ನೆರಳಿನ ವ್ಯವಸ್ಥೆ ಇದ್ದರೂ ಅಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ.

ರೈತರು, ದಲ್ಲಾಳಿಗಳು, ಲಾರಿ, ಟ್ರ್ಯಾಕ್ಟರ್, ಬುಲೆರೊ ಪಿಕ್ಅಪ್ ವಾಹನಗಳ ಚಾಲಕರು, ಕಾರ್ಮಿಕರು ಕುಡಿಯಲು ನೀರಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಕುಡಿಯುವ ನೀರಿಗಾಗಿ ಹೋಟೆಲ್ಗಳಿಗೆ ಅಲೆದಾಡುತ್ತಿದ್ದಾರೆ.

ಹೊರಗಿನಿಂದ ಬರುವವರ ಅನುಕೂಲಕ್ಕಾಗಿ ಮಹಾನಗರ ಪಾಲಿಕೆ ವತಿಯಿಂದ ನಗರದ ಪ್ರಮುಖ ಸ್ಥಳಗಳಲ್ಲಿ ನಿರ್ಮಿಸಿದ ಜಲ ಕುಟೀರಗಳಲ್ಲಿ ಸಾಮಾಜಿಕ ಸಂಸ್ಥೆಗಳು ಕುಡಿಯುವ ನೀರು ತಂದು ಸುರಿದು ಜನರ ಬಾಯಾರಿಕೆ ನೀಗಿಸುತ್ತಿವೆ.

ನೆರಳಿನ ವ್ಯವಸ್ಥೆ ಇಲ್ಲ

ಪ್ರಮುಖ ವೃತ್ತಗಳಲ್ಲಿ ಸಂಚಾರ ಒತ್ತಡ ಹೆಚ್ಚಾದಾಗ ವೃತ್ತಗಳಲ್ಲಿ ನಿಂತ ಬೈಕ್ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಬಿಸಿಲಿಗೆ ಬೆನ್ನುಗಳ ಮೇಲೆ ಗುಳ್ಳೆಗಳು ಏಳುತ್ತಿವೆ. ಬೇಸಿಗೆಯ ಎರಡು ತಿಂಗಳು ಕಳೆಯುತ್ತ ಬಂದರೂ ಮಹಾನಗರ ಪಾಲಿಕೆ ಅಧಿಕಾರಿಗಳು ನೆರಳಿನ ವ್ಯವಸ್ಥೆ ಮಾಡಿಲ್ಲ ಎಂದು ಎಐಡಿವೈಒ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವ ಜಾನೇಕಲ್ ಹಾಗೂ ಜಿಲ್ಲಾ ಕಾರ್ಯದರ್ಶಿ ವಿನೋದ ಕುಮಾರ ಬೇಸರ ವ್ಯಕ್ತಪಡಿಸುತ್ತಾರೆ.

‘ಸರ್ಕಾರ ಕಚೇರಿ ಸಮಯ ಬದಲು ಮಾಡಿರುವುದು ಒಳ್ಳೆಯದು. ಇದರಿಂದ ಅಧಿಕಾರಿಗಳಿಗೆ ಮಾತ್ರ ಅನುಕೂಲವಾಗಿದೆ. ಕನಿಷ್ಠ ಪಕ್ಷ ಬಡವರು ಹಾಗೂ ಜನ ಸಾಮಾನ್ಯರಿಗೆ ನೆರಳಿನ ವ್ಯವಸ್ಥೆ ಮಾಡಲು ಆಸಕ್ತಿ ತೋರಿಸುತ್ತಿಲ್ಲ. ಜನರನ್ನು ಅತೀವವಾಗಿ ಬಳಲಿಸಿದೆ’ ಎನ್ನುತ್ತಾರೆ.

ನೀರಿಗಾಗಿ ಅಲೆದಾಡುತ್ತಿರುವ ಜಾನುವಾರು

ನದಿ ತಟದ ಗ್ರಾಮಗಳಲ್ಲಿ ಜಾನುವಾರುಗಳಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಗುಡ್ಡಗಾಡು ಹಾಗೂ ಬಯಲು ಪ್ರದೇಶದಲ್ಲಿರುವ ಊರುಗಳಲ್ಲಿನ ಜಾನುವಾರುಗಳು ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಎದುರಿಸುತ್ತಿವೆ.

ಬೆಂಕಿ ಬಿಸಿಲಿನಿಂದ ಮೇವು ಸಂಪೂರ್ಣ ಒಣಗಿ ಚಾಪೆ ಕಡ್ಡಿಯಂತಾಗಿದೆ. ಜಾನುವಾರುಗಳಿಗೆ ಸೇವಿಸಲು ಸಾಧ್ಯವಾಗುತ್ತಿಲ್ಲ. ಮೇವು ಹಾಗೂ ನೀರು ಅರಿಸಿಕೊಂಡು ದನಗಳು ಹಾಗೂ ಕುರಿ, ಮೇಕೆಗಳು ಕಿಲೋ ಮೀಟರ್ವರೆಗೆ ಅಲೆದಾಡುತ್ತಿವೆ.

‘ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹಾಗೂ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ಗಂಭೀರವಾಗಿಲ್ಲ. ಕಚೇರಿ ಬಿಟ್ಟು ಹೊರಗೆ ಬಂದು ಜನ ಜಾನುವಾರುಗಳ ಸಮಸ್ಯೆ ಅರಿತುಕೊಳ್ಳುತ್ತಿಲ್ಲ. ಜಾನುವಾರು ಮಾಲೀಕರಿಗೆ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ಕಷ್ಟವಾಗುತ್ತಿದೆ’ ಎನ್ನುತ್ತಾರೆ ಲಿಂಗಸುಗೂರು ತಾಲ್ಲೂಕಿನ ಗುರಗುಂಟಾದ ಗ್ರಾಮಸ್ಥರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.