ರಾಯಚೂರು: ‘ಬಾಬಾಸಾಹೇಬರು ಅಸಮಾನತೆಯಿಂದ ಬಳಲುತ್ತಿದ್ದ ಸಮಾಜವನ್ನು ನೋಡಿ ಸುಮ್ಮನಿರಲಾಗದೆ ಇಂಥದೊಂದು ಸಂಘರ್ಷದ, ಹೋರಾಟದ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದರು’ ಎಂದು ರಾಜ್ಯಸಭಾ ಮಾಜಿ ಸದಸ್ಯ ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟರು.

ಆದಿಕವಿ ಶ್ರೀ ಮಹಿರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಬಾಬಾಸಾಹೇಬ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

‘ಆಧುನಿಕ ಕಾಲಘಟ್ಟದಲ್ಲೂ, ಸಾಮಾಜಿಕ ವಾತಾವರಣ ಸುಧಾರಿಸದೆ ಇನ್ನೂ ಅಸ್ಪೃಶ್ಯತೆ ಜೀವಂತಇದೆ’ ಎಂದು ಹೇಳಿದರು.

‘ಅಂಬೇಡ್ಕರ್ ಮಂಡಿಸಿದ ಹಿಂದೂ ಕೋಡ್ಬಿಲ್ ದೇಶದ ಎಲ್ಲ ವರ್ಗದ ಮಹಿಳೆಯರಿಗೆ ಅನುಕೂಲವಾಯಿತು. ಈ ಬಿಲ್ ಮಹಿಳೆಯರಿಗೆ ಆಸ್ತಿಯಲ್ಲಿ ಪಾಲು ಸಿಗಬೇಕು ಎಂದು ಪ್ರತಿಪಾದಿಸಿತು. ವಿಧವಾ ವಿವಾಹ ಪದ್ಧತಿ ಜಾರಿಗೊಳಿಸುವ ಮೊದಲ ಪ್ರಯತ್ನ ಮಾಡಿದ್ದು ಅಂಬೇಡ್ಕರ್. ಅವರು ತಳಸಮುದಾಯಗಳ ಮೀಸಲಾತಿಗಾಗಿಯಷ್ಟೇ ಹೋರಾಟ ಮಾಡಲಿಲ್ಲ, ದೇಶದ ಎಲ್ಲ ಜನರ ಒಳಿತಿಗಾಗಿ ಹೋರಾಡಿದರು’ ಎಂದರು.

ಅಧ್ಯಕ್ಷತೆವಹಿಸಿದ್ದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಮಾತನಾಡಿದರು.

ಕುಲಸಚಿವ ಡಾ.ಎ.ಚೆನ್ನಪ್ಪ, ಮೌಲ್ಯಮಾಪನ ಕುಲಸಚಿವರಾದ ಪ್ರೊ. ಜ್ಯೋತಿ ಧಮ್ಮಪ್ರಕಾಶ್, ಹಣಕಾಸು ಅಧಿಕಾರಿಗಾಯತ್ರಿ ಉಪಸ್ಥಿತರಿದ್ದರು. ಎನ್ಎಸ್ಎಸ್ ಅಧಿಕಾರಿ ಡಾ.ಜಿ.ಎಸ್.ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಜಯಂತಿ ನಿಮಿತ್ತ ‘ಡಾ.ಬಾಬಾಸಾಹೇಬ್ ಅಂಬೇಡ್ಕರ್ರವರ ಚಿಂತನೆಗಳು ಮತ್ತು ಸಮಕಾಲೀನ ಭಾರತ’ ವಿಷಯ ಕುರಿತು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವೆಂಕಟೇಶ ಎನ್., ಶಿವರಾಜ, ಸಂಗೀತ ನಾಯಕ, ವೆಂಕಟೇಶ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಉಪನ್ಯಾಸಕ ದುರುಗಪ್ಪ ಗಣೇಕಲ್ ಸ್ವಾಗತಿಸಿದರು. ಉಪನ್ಯಾಸಕಿ ಶಿವಲೀಲಾ ನಿರೂಪಿಸಿದರು. ಡಾ. ಪದ್ಮಜಾ ದೇಸಾಯಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-32-295786261

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.