ಕವಿತಾಳ: ಸಾಂಪ್ರದಾಯಿಕ ಭತ್ತದ ಬೆಳೆಗೆ ಪರ್ಯಾಯವಾಗಿ ಎಳ್ಳು ಬೆಳೆಯುವ ಮೂಲಕ ಮಸ್ಕಿ ತಾಲ್ಲೂಕಿನ ಹಾಲಾಪುರ ಗ್ರಾಮದ ರೈತ ಮರಿಗೌಡ ಪಾಟೀಲ ಆರ್ಥಿಕವಾಗಿ ಲಾಭ ಪಡೆದಿದ್ದಾರೆ.

ಜಲಾಶಯಕ್ಕೆ ಕ್ರಸ್ಟ್ ಗೇಟ್ ಅಳವಡಿಕೆ ಹಿನ್ನೆಲೆಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಪೂರೈಸದ ಕಾರಣ ಕಾಲುವೆ ನೀರು ಅವಲಂಬಿಸಿ ವ್ಯವಸಾಯ ಮಾಡುತ್ತಿದ್ದ ರೈತರು ಪ್ರಸಕ್ತ ಬೇಸಿಗೆ ಅವಧಿಯಲ್ಲಿ ಯಾವುದೇ ಬೆಳೆ ಬೆಳೆದಿಲ್ಲ.

ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾದ ಕಾರಣ ಭತ್ತಕ್ಕೆ ಪರ್ಯಾಯವಾಗಿ ಬೇರೆ ಬೆಳೆಯುವ ಬಗ್ಗೆ ಯೋಚಿಸಿದ ರೈತ ಮರಿಗೌಡ ಪಾಟೀಲ ಸಮೀಪದ ತುಗ್ಗಲದಿನ್ನಿ ಗ್ರಾಮದ ಬಳಿಯ ತಮ್ಮ 2.5 ಎಕರೆ ಸ್ವಂತ ಜಮೀನಿನಲ್ಲಿ ಕರಿ ಎಳ್ಳು ಬಿತ್ತನೆ ಮಾಡಿ ಉತ್ತಮ ಇಳುವರಿ ಪಡೆದಿದ್ದಾರೆ.

ಅತ್ಯಂತ ಕಡಿಮೆ ಪ್ರಮಾಣದ ರಸಗೊಬ್ಬರ, ಕ್ರಿಮಿನಾಶಕ ಬಳಕೆ ಸೇರಿದಂತೆ ಕಡಿಮೆ ನಿರ್ವಹಣೆ ವೆಚ್ಚದಲ್ಲಿ ಮೂರು ತಿಂಗಳ ಅವಧಿಯಲ್ಲಿ ಪ್ರತಿ ಎಕರೆ ಪ್ರದೇಶದಲ್ಲಿ ಅಂದಾಜು 6 ಕ್ವಿಂಟಾಲ್ ಎಳ್ಳು ಬೆಳೆದ ಮರಿಗೌಡ ಅವರ ಬಗ್ಗೆ ಸ್ಥಳೀಯ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2.5 ಎಕರೆ ಜಮೀನಿನಲ್ಲಿ 15 ಕ್ವಿಂಟಾಲ್ ಕರಿ ಎಳ್ಳು ಇಳುವರಿ ಬಂದಿದೆ, ಪ್ರಸ್ತುತ ಮಾರುಕಟ್ಟೆಯಲ್ಲಿ ₹13 ಸಾವಿರದಂತೆ ಮಾರಾಟವಾಗುತ್ತಿದೆ. ಪ್ರತಿ ಎಕರೆ ಬೆಳೆ ಬೆಳೆಯಲು ₹10 ಸಾವಿರ ಖರ್ಚಾಗಿದೆ ಅಂದಾಜು ₹2 ಲಕ್ಷ ಮೊತ್ತದ ಬೆಳೆ ಕೈ ಸೇರಿದೆ.

‘ಈ ಭಾಗದಲ್ಲಿ ಬಹುತೇಕ ರೈತರು ಸಾಂಪ್ರದಾಯಿಕ ಭತ್ತ ಬೆಳೆಯುತ್ತಿದ್ದು ಪರ್ಯಾಯವಾಗಿ ಬೇರೆ ಬೆಳೆ ಬೆಳೆಯಲು ಆಸಕ್ತಿ ತೋರುವುದಿಲ್ಲ. ಬೇಸಿಗೆಯಲ್ಲಿ ಕಾಲುವೆ ನೀರು ಇಲ್ಲದ ಕಾರಣ ಮಾದರಿಯಾಗಿ ಬೆಳೆದು ನೋಡುವ ಕುತೂಹಲದಿಂದ ಕರಿ ಎಳ್ಳು ಬಿತ್ತನೆ ಮಾಡಿದ್ದೆ ಇದೀಗ ಉತ್ತಮ ಇಳುವರಿ ಬಂದಿದೆ’ ಎಂದು ರೈತ ಮರಿಗೌಡ ಪಾಟೀಲ ಸಂತಸ ವ್ಯಕ್ತಪಡಿಸಿದರು.

‘ಸತತ ಒಂದೇ ಬೆಳೆ ಬೆಳೆಯುವುದರಿಂದ ಭೂಮಿಯ ಫಲವತ್ತತೆ ನಾಶವಾಗುತ್ತದೆ ಮಣ್ಣಿನ ಗುಣಧರ್ಮ ಆಧರಿಸಿ ಬೇರೆ ಬೆಳೆ ಬೆಳೆಯುವುದು ಒಳ್ಳೆಯ ಬೆಳವಣಿಗೆ ಈ ಭಾಗದಲ್ಲಿ ಬಹುತೇಕ ಬತ್ತದ ಗದ್ದೆಗಳು ಈ ವರ್ಷ ಬಿಕೊ ಎನ್ನುತ್ತಿವೆ ಮರಿಗೌಡ ಅವರು ಎಳ್ಳು ಬೆಳೆದು ಮಾದರಿಯಾಗಿದ್ದಾರೆ’ ಎಂದು ರೈತ ಬಸ್ಸಪ್ಪ ತುಗ್ಗಲದಿನ್ನಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-32-29200479

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.