ರಾಯಚೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ‘ರೈತ ಸಂತೆ’ಗೆ ಶುಕ್ರವಾರ ಚಾಲನೆ ನೀಡಲಾಯಿತು.

ಕುಲಪತಿ ಹನುಮಂತಪ್ಪ, ಆಡಳಿತ ಮಂಡಳಿ ಸದಸ್ಯರಾದ ಮಲ್ಲಿಕಾರ್ಜುನ, ಮಲ್ಲೇಶ ಕೊಲಿಮಿ ಮತ್ತು ವಿಸ್ತರಣಾ ನಿರ್ದೇಶಕ ಎ.ಆರ್.ಕುರುಬರ ರೈತರ ತಕ್ಕಡಿ ಮತ್ತು ಕೃಷಿ ಉತ್ಪನ್ನಗಳಿಗೆ ಪೂಜೆ ಸಲ್ಲಿಸಿದರು.

ಕುಲಪತಿ ಹನುಮಂತಪ್ಪ ಮಾತನಾಡಿ, ‘ರೈತರು ಬೆಳೆದ ತರಕಾರಿ, ಹಣ್ಣು ಹಾಗೂ ಧಾನ್ಯವನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ವೇದಿಕೆ ಕಲ್ಪಿಸಲಾಗಿದೆ. ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಅನ್ನದಾತ ಬೆಳೆದ ಬೆಳೆಗೆ ಉತ್ತಮ ಬೆಲೆ ದೊರಕಿಸಿಕೊಡಲು ಕೈಜೋಡಿಸಬೇಕು’ ಎಂದು ಮನವಿ ಮಾಡಿದರು

‘ಜಿಲ್ಲೆಯಲ್ಲಿ ಬೆಳೆಯುವ ಉತ್ತಮ ಗುಣಮಟ್ಟದ ಹಣ್ಣು ಹಾಗೂ ತರಕಾರಿಗೆ ಮಧ್ಯವರ್ತಿಗಳ ಹಾವಳಿಯಿಂದ ಉತ್ತಮ ಬೆಲೆ ಸಿಗದೆ ಬೇರೆ ರಾಜ್ಯಗಳಿಗೆ ಮಾರಾಟವಾಗುತ್ತಿದೆ. ಇಲ್ಲಿ ಬೆಳೆದಿರುವ ಬೆಳೆಯನ್ನು ರೈತರು ನೇರವಾಗಿ ತಂದು ಮಾರಾಟ ಮಾಡುವುದರಿಂದ ಅವರ ಬೆಳೆಗೆ ಉತ್ತಮ ಬೆಳೆ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಮುಂದಿನ ದಿನಗಳಲ್ಲಿ ಮಾವು ಮೇಳ, ನೇರಳೆ ಮೇಳ ಮತ್ತು ಸಸ್ಯ ಮೇಳ ಆಯೋಜಿಸಲಾಗುವುದು’ ಎಂದು ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ತಿಮ್ಮಣ್ಣ ನಾಯಕ ಮಾತನಾಡಿ, ‘ಕೃಷಿಯಲ್ಲಿನ ಹೊಸ ರೈತ ಸ್ನೇಹಿ ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸುವುದು ಹಾಗೂ ರೈತರು ಆರ್ಥಿಕವಾಗಿ ಸ್ವಾವಲಂಬಿಯಾಗಲು ತರಬೇತಿ ನೀಡುವುದು ಸಂತೆಯ ಮುಖ್ಯ ಉದ್ದೇಶವಾಗಿದೆ’ ಎಂದರು.

‘ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ವಾರಕ್ಕೆ ಒಮ್ಮೆ ರೈತ ಸಂತೆ ನಡೆಸಬೇಕು’ ಎಂದು ಬೋಳಮಾನದೊಡ್ಡಿಯ ರೈತ ಮಾವು ಬೆಳೆಗಾರ ತಿಕ್ಕನಗೌಡ ಹೇಳಿದರು.

‘ನನ್ನ ತೋಟದಿಂದ ತಂದಿದ್ದ ಒಂದು ಕ್ವಿಂಟಾಲ್ ಬದನೆಕಾಯಿ, ಬೆಂಡಿಕಾಯಿ, ಸೌತೆಕಾಯಿ ಅರ್ಧಗಂಟೆಯಲ್ಲಿ ಖಾಲಿಯಾಯಿತು. ಉತ್ತಮ ಬೆಲೆ ಸಿಕ್ಕಿದ್ದಕ್ಕೆ ಖುಷಿಯಾಯಿತು’ ಎಂದು ಕಡಗಂದೊಡ್ಡಿ ರೈತ ನರಸಪ್ಪ ಸಂತಸ ಹಂಚಿಕೊಂಡರು.

‘ಈ ತರಹದ ಸಂತೆಯಿಂದ ಜನರಿಗೆ ಮತ್ತು ರೈತರಿಗೆ ಸಹಾಯವಾಗಲಿದೆ’ ಎಂದು ಗ್ರಾಹಕ ರಾಜೇಂದ್ರಕುಮಾರ ಎಸ್ ಶಿವಾಲೆ ಹೇಳಿದರು

40 ರೈತರು ವಿವಿಧ ಬಗೆಯ ತರಕಾರಿ, ಹಣ್ಣುಗಳಾದ ಮಾವು ನೇರಳೆ, ಸೀಬೆ, ಸಿರಿಧಾನ್ಯ, ಜವಾರಿ ಮೊಟ್ಟೆ ಮಾರಾಟ ಮಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-32-1796506776

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.