ಹಟ್ಟಿ ಚಿನ್ನದ ಗಣಿ: ಬೇಸಿಗೆಯಲ್ಲಿ ಎಲ್ಲಿಯೂ ಮೇವು ಸಿಗದ ಕಾರಣ ಒಣ ಹುಲ್ಲಿಗೆ ಬೇಡಿಕೆ ಹೆಚ್ಚಾಗಿದೆ.

ಕೆಲ ರೈತರು ಜಾನುವಾರು ಸಾಕಣೆ ಮಾಡುವ ಮೂಲಕ ಹೈನುಗಾರಿಕೆಯಿಂದ ಬದು ಕು ಕಟ್ಟಿಕೊಂಡಿದ್ದಾರೆ. ಮೇವು ಹೊಂದಿಸಲೇಬೇಕು. ಆದ್ದರಿಂದ ಅಗತ್ಯ ಮುನ್ನೆಚ್ಚರಿಕೆ ವಹಿಸಿ ಭತ್ತದ ಹಸಿ ಹಾಗೂ ಒಣ ಹುಲ್ಲಿನ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಮೊದಲು ರೈತರು, ಕಣದ ಸುಗ್ಗಿ ಮುಗಿದ ನಂತರ ಹುಲ್ಲಿನ ಸಂಗ್ರಹಕ್ಕೆ ಮುಂದಾಗುತ್ತಿದ್ದರು. ಆದರೆ, ಬದಲಾದ ಸನ್ನಿವೇಶದಲ್ಲಿ ಯಂತ್ರಗಳಿಂದಲೇ ಕಟಾವು ಮಾಡಿಸಿ, ಪೆಂಡಿಗಳನ್ನು ಕಟ್ಟಿ ಮಾರಾಟ ಮಾಡುತ್ತಿದ್ದಾರೆ.

ನೀರಿನ ಅಭಾವದ ಜೊತೆಗೆ ಜಾನುವಾರಗಳಿಗೆ ಮೇವಿನ ಕೊರತೆ ಎದುರಾಗುವ ಸಾಧ್ಯತೆ ಇರುವ ಕಾರಣ ಮೇವು ಸಂಗ್ರಹಕ್ಕೆ ರೈತರು ಮುಂದಾಗಿದ್ದು, ಬೆಲೆಯೂ ಗಗನಕ್ಕೇರಿದೆ.

ಒಂದು ಟ್ರ್ಯಾಕ್ಟರ್ ಹುಲ್ಲಿಗೆ ₹10 ಸಾವಿರ ನಿಗದಿ ಪಡಿಸಲಾಗಿದೆ. ಕಳೆದ ಬಾರಿ ಒಂದು ಪೆಂಡಿಗೆ ₹100 ಇದ್ದ ಹುಲ್ಲಿನ ದರ ಈಗ ₹200ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ಒಂದು ಟ್ರ್ಯಾಕ್ಟರ್ಗೆ ₹6 ಸಾವಿರ ಇತ್ತು. ಈಗ ₹10 ಸಾವಿರಕ್ಕೆ ಹೆಚ್ಚಿದೆ ಎನ್ನುತ್ತಾರೆ ರೈತ ಅಂಬಣ್ಣ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-32-907344510

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.