ರಾಯಚೂರು: ಜಾಗತಿಕ ಸನ್ನಿವೇಶದ ಕಾರಣ ಜಿಲ್ಲೆಯಲ್ಲಿ ಗ್ರಾಹಕರ ಹಿತದೃಷ್ಟಿಯಿಂದ ಕೊರತೆಯಾಗದಂತೆ ಮಾರ್ಗಸೂಚಿ ಅನುಸರಿಸಿ ಇಂಧನ ವಿತರಿಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ತಿಳಿಸಿದ್ದಾರೆ.

ಪೆಟ್ರೋಲಿಯಂ ನಿಯಮದ ಪ್ರಕಾರ ರಿಟೇಲ್ ಔಟ್ಲೆಟ್ಗಳಿಗೆ ವಾಹನಗಳ ಟ್ಯಾಂಕ್ಗಳಿಗೆ ಅಥವಾ ಅಧಿಕೃತ ಕಂಟೇನರ್ಗಳಿಗೆ ಗರಿಷ್ಠ ಮಿತಿ 200 ಲೀಟರ್ಗಳಿಗೆ ಒಳಪಟ್ಟು ಮಾತ್ರ ಇಂಧನ ಪೂರೈಸಲಾಗುವುದು ಎಂದು ಹೇಳಿದ್ದಾರೆ.

ಬಲ್ಕ್ ಸಪ್ಲೈ ಒಪೆರಷನ್ಸ್ ವ್ಯಾಪಾರವನ್ನು ವಿಶೇಷವಾಗಿ ಜಾರಿ ಯಲ್ಲಿರುವ ನೇರ ಮಾರಾಟ ಕಾರ್ಯವಿಧಾನಗಳ ಮೂಲಕ ಮಾತ್ರ ನಡೆಸತಕ್ಕದ್ದು. ಪೆಟ್ರೋಲ್ ಮತ್ತು ಡೀಸೆಲ್ ಅನ್ನು ವಾಹನಗಳ ಟ್ಯಾಂಕ್ಗಳಿಗೆ ಮಾತ್ರ ಪೂರೈಸಬೇಕಾಗಿರುತ್ತದೆ. ಬಾಟಲ್ಗಳು, ಕ್ಯಾನ್ಗಳು ಮತ್ತು ಇನ್ನಿತರ ಕಂಟೇನರ್ಗಳಿಗೆ ಪೂರೈಕೆ ನಿಷೇ ಧಿಸಲಾಗಿದೆ.

ಸಗಟು ಗ್ರಾಹಕರಿಗೆ ಡೀಸೆಲ್ ಅನ್ನು ಗ್ರಾಹಕರ ಪಂಪ್ಗಳ ಅಧೀನದಲ್ಲಿ ಬರುವ ಡೈರೆಕ್ಟ್ ಸೇಲ್ಸ್ ಮೆಕ್ಯಾನಿಸಂ /ಡಿಪೊಟ್ಸ್ಗಳ ಮೂಲಕ ಮಾತ್ರ ಮಾರಾಟ ಮಾಡಬೇಕು. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಪೆಟ್ರೋಲ್ ಪಂಪ್ಗಳಲ್ಲಿ ಶಿಸ್ತು ಮತ್ತು ಸೌಹಾರ್ದ ನಡವಳಿಕೆ ಕಾಪಾಡಿಕೊಳ್ಳಲು ಮತ್ತು ಪಂಪ್ ಸಿಬ್ಬಂದಿ ಹಾಗೂ ನಾಗರಿಕರೊಂದಿಗೆ, ಅಗತ್ಯ ಸೇವೆಗಳ ಸುಗಮ ಕಾರ್ಯನಿರ್ವಹಣೆಯಲ್ಲಿ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-32-427218771

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.