ರಾಯಚೂರು: ರಾಯಚೂರು ಗ್ರಾಮೀಣ ಕ್ಷೇತ್ರದ ಯದ್ಲಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಜಳ್ಳಿ ಗ್ರಾಮದಲ್ಲಿ ಸಾರ್ವಜನಿಕ ನಲ್ಲಿಗಳಲ್ಲಿ ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.

ಸಮಸ್ಯೆ ಕುರಿತು ಹಲವು ಬಾರಿ ದೂರು ನೀಡಿದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಸುಗೂರು ಕೈಗಾರಿಕಾ ಪ್ರದೇಶದಿಂದ ಹರಿದು ಬರುವ ರಾಸಾಯನಿಕಯುಕ್ತ ಕಲುಷಿತ ನೀರು ಹಳ್ಳಗಳ ಮೂಲಕ ಕೃಷ್ಣಾ ನದಿಗೆ ಸೇರುತ್ತಿದೆ ಎನ್ನಲಾಗಿದೆ. ಇದೇ ನದಿಯ ನೀರನ್ನು ಗ್ರಾಮಕ್ಕೆ ಸರಬರಾಜು ಮಾಡಲಾಗುತ್ತಿದ್ದು ಗ್ರಾಮಸ್ಥರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಲಾಗಿದೆ.

ಕಲುಷಿತ ನೀರನ್ನು ನಿರಂತರವಾಗಿ ಬಳಸುತ್ತಿರುವ ಪರಿಣಾಮ ಗ್ರಾಮದ ಜನರಲ್ಲಿ ಅತಿಸಾರ, ಭೇದಿ, ಕಾಲರಾ, ನೆಗಡಿ, ಜ್ವರ, ಮೈ–ಕೈ ನೋವು, ಕಿಡ್ನಿ ಹಾಗೂ ಕರುಳಿನ ಸಂಬಂಧಿತ ರೋಗಗಳು ಹೆಚ್ಚಾಗುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಗರ್ಭಿಣಿಯರು ಮತ್ತು ನವಜಾತ ಶಿಶುಗಳಲ್ಲಿ ಚರ್ಮದ ಸೋಂಕು ಹೆಚ್ಚುತ್ತಿರುವುದು ಗ್ರಾಮಸ್ಥರಲ್ಲಿ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಕಲುಷಿತ ನೀರಿನ ಪರಿಣಾಮ ಜಲಚರ ಪ್ರಾಣಿಗಳೂ ಸಾಯುತ್ತಿರುವುದಾಗಿ ಆರೋಪಿಸಲಾಗಿದೆ.

ಹಲವು ದಿನಗಳಿಂದ ನಲ್ಲಿಗಳಲ್ಲಿ ದುರ್ವಾಸನೆಯ ನೀರು ಬರುತ್ತಿದೆ. ನೀರು ಬಂದ ಕೂಡಲೇ ಒಂದು ಗಂಟೆ ಕಾಲ ಕಸದ ಕಡ್ಡಿ, ವಿಷಕಾರಿ ಹುಳುಗಳು ಬರುತ್ತವೆ. ಮಕ್ಕಳು ಇದೇ ನೀರು ಕುಡಿಯುತ್ತಿರುವುದರಿಂದ ಆರೋಗ್ಯ ಹದಗೆಡುತ್ತಿದೆ. ನೀರು ಬರೋದೇ ಕಷ್ಟವಾಗಿರುವ ಪರಿಸ್ಥಿತಿಯಲ್ಲಿ ಇಂತಹ ಕೊಳಕು ನೀರು ಬಂದರೆ ಕುಡಿಯೋದು ಹೇಗೆ? ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ನೀರು ಪೂರೈಕೆ ಮಾಡುತ್ತಾರೆ. ಮೊದಲು ಗಬ್ಬು ನೀರು ಬರುತ್ತದೆ. ಈ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ಮನೆಗಳಿಗೆ ಇದೇ ನೀರು ಬಂದಿದ್ದರೆ ಸಮಸ್ಯೆಯ ತೀವ್ರತೆ ಅವರಿಗೆ ಗೊತ್ತಾಗುತ್ತಿತ್ತೇನೋ ಎಂದು ಗ್ರಾಮದ ನಿವಾಸಿ ಶಂಕ್ರಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇಷ್ಟು ದಿನ ನೀರು ಬಂದರೆ ಸಾಕು ಎಂದುಕೊಂಡಿದ್ದೆವು. ಈಗ ಬರುತ್ತಿರುವ ನೀರು ಕುಡಿದರೆ ಬದುಕುತ್ತೇವೆಯೋ ಇಲ್ಲವೋ ಅನ್ನೋ ಭಯ ಶುರುವಾಗಿದೆ. ಆದರೂ ಕೇಳುವವರೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಲುಷಿತ ನೀರು ಪೂರೈಕೆ ಆಗಿರುವ ಬಗ್ಗೆ ಮಾಹಿತಿ ಇಲ್ಲ, ಪಿಡಿಒ ಮೂಲಕ ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗುವುದು

–ಚಂದ್ರಶೇಖರ ಪವಾರ, ತಾ.ಪಂ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.