ರಾಯಚೂರು: ‘ನಗರದ ಗಂಜ್ ವೃತ್ತ ಸಮೀಪದ 89 ವರ್ಷಗಳ ಇತಿಹಾಸ ಹೊಂದಿರುವ ಗೋಶಾಲೆಗೆ ಸೇರಿದ 4 ಎಕರೆ 6 ಗುಂಟೆ ಭೂಮಿಯನ್ನು ಕಬಳಿಸುವ ಯತ್ನಕ್ಕೆ ಜಿಲ್ಲಾಧಿಕಾರಿ ನಿತೀಶ್ ಕೆ. ತಡೆ ಹಾಕಿದ್ದಾರೆ. ಅಂದಿನ ಉಪವಿಭಾಗಾಧಿಕಾರಿ ನೀಡಿದ್ದ ಆದೇಶವನ್ನು ರದ್ದುಪಡಿಸಿ, ಭೂಮಿಯನ್ನು ಗೋಶಾಲೆ ಹೆಸರಿಗೆ ಮರು ನೋಂದಾಯಿಸಲು ಆದೇಶಿಸಿದ್ದಾರೆ’ ಎಂದು ಗೋಶಾಲಾ ಸಮಿತಿಯ ಮುಖಂಡ ಎಂ. ವಿರೂಪಾಕ್ಷಿ ತಿಳಿಸಿದರು.

‘ಕಳೆದ ಎರಡೂವರೆ ವರ್ಷಗಳಿಂದ ಗೋಶಾಲೆ ಭೂಮಿ ಉಳಿಸಲು ನಡೆಸಿದ ಹೋರಾಟಕ್ಕೆ ನ್ಯಾಯ ದೊರೆತಿದೆ. ಗೋಪಾಲಸಿಂಗ್ ಎಂಬುವರು ಭೂಮಿ ಕಬಳಿಸಲು ಯತ್ನಿಸಿದ್ದರು. 2023ರಲ್ಲಿ ಅಂದಿನ ಎಸಿ ರಜನಿಕಾಂತ್ ಚೌಹಾನ್ ಅವರು ಅವರ ಪರವಾಗಿ ಆದೇಶ ನೀಡಿದ್ದರು’ ಎಂದು ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಆರೋಪಿಸಿದರು.

ಡಿಸಿ ನಿತೀಶ್ ಕೆ. ಈ ಆದೇಶವನ್ನು ರದ್ದುಪಡಿಸಿ, ತಹಶೀಲ್ದಾರ್ಗೆ ಸೂಚಿಸಿ ಗೋಶಾಲೆ ಪಹಣಿಯಲ್ಲಿ ‘6-6’ ಎಂದು ನಮೂದಿಸಿ ಎರಡು ದಿನಗಳಲ್ಲಿ ನೋಂದಣಿ ಪೂರ್ಣಗೊಳಿಸಲು ನಿರ್ದೇಶನ ನೀಡಿದ್ದಾರೆ’ ಎಂದರು.

‘ಈ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಶೋರೂಂ ಮತ್ತು ವಾಣಿಜ್ಯ ಮಳಿಗೆಗಳನ್ನು ಮಹಾನಗರ ಪಾಲಿಕೆ ತಕ್ಷಣ ತೆರವುಗೊಳಿಸಬೇಕು. ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಈ ಬಗ್ಗೆ 80 ವರ್ಷಗಳ ದಾಖಲೆಗಳೊಂದಿಗೆ 7-8 ಬಾರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೆವು’ ಎಂದು ತಿಳಿಸಿದರು.

ಈ ಹಿಂದೆ ಇದರಲ್ಲಿ ಭಾಗಿಯಾದ ಉಪವಿಭಾಗಾಧಿಕಾರಿ ರಜನಿಕಾಂತ್ ಚೌಹಾನ್ ಅವರ ಮೇಲೆ ಎಫ್ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.

‘ಮಲಿಯಾಬಾದ್ ಗೋಶಾಲೆ ಭೂಮಿಯಲ್ಲೂ ಅಕ್ರಮ ನಡೆಯುತ್ತಿದೆ. ನಿಜಾಮರ ಕಾಲದಲ್ಲಿ ಗೋಶಾಲೆಗೆ 1,060 ಎಕರೆ ಮೀಸಲಿತ್ತು. ಆದರೆ ಈಗ 350ರಿಂದ 400 ಎಕರೆ ಭೂಮಿ ಕಬಳಿಕೆಯಾಗಿದೆ. ಅಲ್ಲಿ ಅನಧಿಕೃತ ಸ್ಟೋನ್ ಕ್ರಷರ್ಗಳು ಕಾರ್ಯನಿರ್ವಹಿಸುತ್ತಿವೆ. ಗೋಶಾಲೆ ಭೂಮಿ ಉಳಿವಿಗೆ ಹೋರಾಟ ಮುಂದುವರಿಯಲಿದೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನರಸಪ್ಪ ಆಸ್ಕಿಹಾಳ್, ರಾಜೇಂದ್ರ ಕುಮಾರ, ಕಿಶೋರ ಜೈನ್, ಪ್ರದೀಪ ಜೈನ್, ರಾಜು ಇತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-32-1894619399

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.