ಹಟ್ಟಿ ಚಿನ್ನದ ಗಣಿ: ‘ಬೇಸಿಗೆಯಲ್ಲಿ ಅರವಟಿಗೆಯಿಂದ ಜನರಿಗೆ ಅನುಕೂಲವಾಗಲಿದೆ’ ಎಂದು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಘು ನಾಯಕ ಹೇಳಿದರು.

ಪಟ್ಟಣದ ಹಳೆ ಸಿನಿಮಾ ಟಾಕೀಸ್ ಹತ್ತಿರ ಶ್ರೀರಾಮ ಸೇನೆ ಸಂಘಟನೆಯಿಂದ ನಿರ್ಮಿಸಿದ ಕುಡಿಯುವ ನೀರಿನ ಅರವಟಿಗೆಗೆ ಚಾಲನೆ ನೀಡಿ ಮಾತನಾಡಿದರು.

‘ಶುದ್ದ, ತಂಪಾದ ಕುಡಿಯುವ ನೀರು ಕೊಡುವ ಸಮಾಜಮುಖಿ ಕಾರ್ಯ ನಿರಂತರವಾಗಿ ನಡೆಯಲಿದೆ. ಅರವಟಿಗೆಯಲ್ಲಿಯ ಮಡಕೆಗಳಿಗೆ ವಿವಿಧ ಸಂಘ–ಸಂಸ್ಥೆಗಳು, ಕೆಲವರು ವೈಯುಕ್ತಿಕವಾಗಿಯೂ ನೀರು ತುಂಬಿಸುವ ಕಾಯಕದಲ್ಲಿ ತೊಡಗಿದ್ದಾರೆ. ಇಂಥ ಕಾರ್ಯಕ್ಕೆ ಯುವಕರು ಮುಂದೆ ಬಂದು ಸಮಾಜ ಸೇವೆ ಮಾಡಬೇಕು’ ಎಂದು ಹೇಳಿದರು.

ಇದೇ ವೇಳೆ ಶ್ರೀರಾಮ ನವಮಿಯ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಯುಗಾದಿ ಹಬ್ಬದ ನಿಮಿತ್ತ ಬೇವು ವಿತರಣೆ ಮಾಡಲಾಯಿತು.

ಮುಖಂಡರಾದ ಹನುಮಂತ ರೆಡ್ಡಿ, ಬಸವರಾಜಗೌಡ ಗುರಿಕಾರ, ಪರಮೇಶ ಯಾದವ, ಶರಣುಗೌಡ ಗುರಿಕಾರ, ಪ.ಪಂ ಮಾಜಿ ಸದಸ್ಯ ರಂಗನಾಥ ಮುಂಡರಗಿ, ಎಂ.ಸಿ.ಚಂದ್ರಶೇಖರ ನಾಯಕ, ಸದಾನಂದ ಕಟ್ಟಿಮನಿ, ಚನ್ನಬಸವ ನಾಯಕ, ಸುರೇಶಗೌಡ ಗುರಿಕಾರ, ಅರುಣ್ ಹಾಗೂ ಇತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-32-1942097756

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.