ರಾಯಚೂರು: ಬಿಸಿಲ ನಾಡು ರಾಯಚೂರು ಜಿಲ್ಲೆಯಲ್ಲಿ ಭಾನುವಾರದವರೆಗೂ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿತ್ತು. ಉಷ್ಣಾಂಶ ನಿಧಾನವಾಗಿ ಏರುಗತಿಯಲ್ಲಿ ಸಾಗಿದ್ದು ಇದೀಗ 43 ಡಿಗ್ರಿ ಸೆಲ್ಸಿಯಸ್ ತಲುಪಿದೆ.

ಬೆಳಗಾಗುವ ಮೊದಲೇ ಧಗೆ ಶುರುವಾಗುತ್ತಿದೆ. ಬೆಳಿಗ್ಗೆ 7.30ರ ವೇಳೆ 38 ಡಿಗ್ರಿ ಸೆಲ್ಸಿಯಸ್ನಿಂದ ಶುರುವಾಗುವ ಗರಿಷ್ಠ ಉಷ್ಣಾಂಶ ಮಧ್ಯಾಹ್ನ 1 ಗಂಟೆಯ ವೇಳೆಗೆ 43 ಡಿಗ್ರಿ ಸೆಲ್ಸಿಯಸ್ ತಲುಪುತ್ತಿದೆ. ಮಧ್ಯಾಹ್ನ 3 ಗಂಟೆಯವರೆಗೂ ಇದೇ ಸ್ಥಿತಿ ಮುಂದುವರಿಯುತ್ತಿದೆ.

ಸರ್ಕಾರಿ ಕಚೇರಿಗಳ ಸಮಯ ಬದಲಾದ ನಂತರ ನೌಕರರು ಬೆಳಿಗ್ಗೆ ಕಚೇರಿಗಳಿಗೆ ತೆರಳಿ ಮಧ್ಯಾಹ್ನದ ವೇಳೆಗೆ ಮನೆ ಸೇರಿಕೊಳ್ಳುತ್ತಿದ್ದಾರೆ. ಕಾಂಕ್ರೀಟ್ ಕಟ್ಟಡಗಳಲ್ಲಿ ಕಚೇರಿ ಇರುವ ಖಾಸಗಿ ನೌಕರರು ಬೆಂಕಿ ಬಿಸಿಲು ಹಾಗೂ ಧಗೆಯಿಂದ ಹೈರಾಣಾಗಿದ್ದಾರೆ. ನಾಗರಿಕರು ಬೆಳಿಗ್ಗೆ 10 ಗಂಟೆಯಿಂದ ಮನೆಗಳಿಂದ ಹೊರಗೆ ಬರಲು ಹಿಂಜರಿಯುತ್ತಿದ್ದಾರೆ.

ಮಹಾನಗರ ಪಾಲಿಕೆಯ ಅಮೃತ ಕುಟೀರ ಸೇರಿದಂತೆ, ದಾನಿಗಳು ಅಲ್ಲಲ್ಲಿ ನಿರ್ಮಿಸಿರುವ ಜಲ ಕುಟೀರಗಳಲ್ಲಿ ಆಗಾಗ ನೀರು ಖಾಲಿಯಾಗುತ್ತಿದೆ. ಕಲ್ಲಂಗಡಿ ಹಣ್ಣು, ಕಬ್ಬಿನ ಹಾಲು, ಮಜ್ಜಿಗೆ, ಶರಬತ್ ಹಾಗೂ ಪಾನಕಕ್ಕೆ ಬೇಡಿಕೆ ಹೆಚ್ಚಿದೆ. ಜನ ಬಿಸಿಲ ಧಗೆ ಸಹಿಸಿಕೊಳ್ಳಲಾಗದೇ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.

ಜಿಲ್ಲೆಯಲ್ಲಿ ಒಂದೂವರೆ ತಿಂಗಳು ಪ್ರಖರ ಬಿಸಿಲು ಮುಂದುವರಿಯಲಿದೆ. ಅಷ್ಟೇ ಅಲ್ಲ; ಒಂದು ವಾರ ಗರಿಷ್ಠ 42ರಿಂದ 43 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ರಾಯಚೂರು ನಗರ, ರಾಯಚೂರು ತಾಲ್ಲೂಕಿನ ಗಿಲ್ಲೇಸುಗೂರು, ಕಲ್ಮಲಾ, ಸಿಂಧನೂರು ತಾಲ್ಲೂಕಿನ ಸಾಲಗುಂಡಿ, ವಲ್ಕಮದಿನ್ನಿ, ಕುನ್ನಟಗಿ, ಗೊರೆಬಾಳ, ಬಾದರ್ಲಿ, ತುರ್ವಿಹಾಳ, ಹುಡಾ, ಮಸ್ಕಿ ತಾಲ್ಲೂಕಿನ ಗುಡದೂರು, ಲಿಂಗಸುಗೂರು ತಾಲ್ಲೂಕಿನ ಗುರಗುಂಟಾ, ಸಿರವಾರ ತಾಲ್ಲೂಕಿನ ಕಲ್ಲೂರು, ಮಾನ್ವಿ ತಾಲ್ಲೂಕಿನ ಕುರ್ಡಿ, ಮಾನ್ವಿ ಪಟ್ಟಣದಲ್ಲಿ ರಣಬಿಸಿಲು ಇದೆ.

ರಾಯಚೂರು, ಮಸ್ಕಿ, ಮಾನ್ವಿಯ ಸುತ್ತ ಕಲ್ಲಿನ ಬಂಡೆಗಳ ಗುಡ್ಡಗಳು ಸುತ್ತುವರಿದಿದೆ. ಸಂಜೆ ವೇಳೆಯಲ್ಲಿ ಒಂದಿಷ್ಟು ಗಾಳಿ ಬಿಸಿದರೂ ಬಿಸಿ ಹಬೆ ಬರುತ್ತಿದೆ. ತಗಡಿನ ಶೆಡ್ಗಳಲ್ಲಿ ವಾಸವಾಗಿರುವವರು ನರಕಯಾತನೆ ಅನುಭವಿಸುತ್ತಿದ್ದಾರೆ. ರೈ ತರು ದನಕರುಗಳ ಮೇಲೆ ಗೋಣಿ ಚೀಲ ತೊಯ್ದು ಹಾಕುತ್ತಿದ್ದಾರೆ. ಜಾನುವಾರುಗಳು ಬಿಸಿಲಿನ ಝಳಕ್ಕೆ ಬಾಯಿ ತೆರೆದು ಬಳಲುತ್ತಿವೆ. ಗಿಡ–ಮರಗಳೂ ಕಡಿಮೆ ಇರುವ ಕಾರಣ ನೆರಳು ಹುಡುಕಿಕೊಂಡು ಅಲೆಯುತ್ತಿವೆ.

ಸಂಚಾರ ದಟ್ಟಣೆ ಹೆಚ್ಚಿರುವ ರಾಯಚೂರು ನಗರದ ಪ್ರಮುಖ ವೃತ್ತಗಳಲ್ಲಿ ಬಿಸಿಲಿನಿಂದ ರಕ್ಷಣೆ ಒದಗಿಸಲು ಶೀಘ್ರ ನೆರಳಿನ ವ್ಯವಸ್ಥೆ ಮಾಡಲಾಗುವುದು
ಜುಬಿನ್ ಮೊಹಾಪಾತ್ರ, ಮಹಾನಗರ ಪಾಲಿಕೆ ಆಯುಕ್ತ

ಜಿಲ್ಲೆಯಲ್ಲಿ ಪ್ರಖರ ಬಿಸಿಲು ಮುಂದುವರಿದಿರುವ ಕಾರಣ ಮಧ್ಯಾಹ್ನ ಮನೆಗಳಿಂದ ಹೊರಗೆ ಬರುವುದು ಸೂಕ್ತವಲ್ಲ. ದೇಹದಲ್ಲಿ ನೀರಿನಾಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು
ಡಾ.ಸುರೇಂದ್ರಬಾಬು, ಜಿಲ್ಲಾ ಆರೋಗ್ಯ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.