ರಾಯಚೂರು: ಜನಗಣತಿ ಕಾರ್ಯಗಳಲ್ಲಿ ತೊಡಗಿರುವ ಗಣತಿದಾರರು ಬಿಸಿಗಾಳಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ರಾಜ್ಯ ಜನಗಣತಿ ನೋಡಲ್ ಅಧಿಕಾರಿ ಮನೋಜಕುಮಾರ ಮೀನಾ ಸಲಹೆ ನೀಡಿದ್ದಾರೆ.

ಬೆಳಿಗ್ಗೆ ಬೇಗ ಮತ್ತು ಸಂಜೆ ಕ್ಷೇತ್ರ ಭೇಟಿಗಳನ್ನು ಯೋಜಿಸಬೇಕು, ಮಧ್ಯಾಹ್ನ 12ರಿಂದ 3:30ರವರೆಗೆ ಬಿಸಿಲಿನಿಂದ ತಪ್ಪಿಸಬೇಕು. ನೆರಳು ಅಥವಾ ತಂಪಾದ ಸ್ಥಳಗಳಲ್ಲಿ ಕಾಲಕಾಲಕ್ಕೆ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ದಾಹವಾಗದಿದ್ದರೂ ಪ್ರತಿ 20–30 ನಿಮಿಷಕ್ಕೊಮ್ಮೆ ನೀರು ಕುಡಿಯಬೇಕು, ಸಾಧ್ಯವಾದಲ್ಲಿ ಮಜ್ಜಿಗೆ, ನಿಂಬೆ ಷರಬತ್ತು, ಎಳನೀರು ಸೇರಿದಂತೆ ಪಾನೀಯಗಳನ್ನು ಸೇವಿಸಬೇಕು ಎಂದು ತಿಳಿಸಿದ್ದಾರೆ.

ತಲೆಸುತ್ತು, ದಣಿವು, ತಲೆನೋವು, ವಾಂತಿ, ಅತಿಯಾದ ಬೆವರು ಅಥವಾ ಗೊಂದಲ ಮುಂತಾದ ಉಷ್ಣ ಸಂಬಂಧಧಿತ ಲಕ್ಷಣಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇಂತಹ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ನೆರಳು ಅಥವಾ ತಂಪಾದ ಸ್ಥಳಕ್ಕೆ ಹೋಗಿ, ಸಮರ್ಪಕವಾಗಿ ನೀರು ಸೇವಿಸಿ ಮತ್ತು ತಕ್ಷಣ ವೈದ್ಯಕೀಯ ಸಹಾಯ ಪಡೆಯಬೇಕು ಎಂದು ಹೇಳಿದ್ದಾರೆ.

ಮೊದಲಿನಿಂದ ಆರೋಗ್ಯ ಸಮಸ್ಯೆ ಇರುವವರು ಹೆಚ್ಚುವರಿ ಮುನ್ನೆಚ್ಚರಿಕೆ ವಹಿಸಬೇಕು. ಕ್ಷೇತ್ರ ಕರ್ತವ್ಯದ ವೇಳೆ ಸಮೀಪದ ಆರೋಗ್ಯ ಕೇಂದ್ರಗಳ ವಿವರ ಮತ್ತು ತುರ್ತು ಸಂಪರ್ಕ ದೂರವಾಣಿ ಸಂಖ್ಯೆಗಳನ್ನು ಸದಾ ಕೈಗೆಟುಕುವಂತೆ ಇಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-32-795326709

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.