ರಾಯಚೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಸರಳವಾಗಿ ಆಚರಿಸಲಾಯಿತು. ಕರ್ನಾಟಕ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿದ್ದಡಿ.ಸುಧಾಕರ್ ಅವರ ನಿಧನದ ಹಿನ್ನೆಲೆಯಲ್ಲಿ ಸರ್ಕಾರವು ತೀವ್ರ ಸಂತಾಪವನ್ನು ವ್ಯಕ್ತಪಡಿಸಿ ಮೂರು ದಿನಗಳ ಕಾಲ ರಾಜ್ಯದಾದ್ಯಂತ ಶೋಕಾಚರಣೆ ಆಚರಿಸಲಾಗುತ್ತಿರುವುದರಿಂದ ಸ್ತ್ರೀ ಕುಲದ ಆದರ್ಶ, ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರ ಜಯಂತಿ ಕಾರ್ಯಕ್ರಮವನ್ನು ರಾಯಚೂರು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅತ್ಯಂತ ಸರಳ ಹಾಗೂ ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು. ಮಂಗಳವಾರಪೇಟೆ ವೀರಸಂಗಮೇಶ್ವರ ಸ್ವಾಮಿ, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ವೀರಶಿವಾಚಾರ್ಯರು, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಉಪ ವಿಭಾಗಾಧಿಕಾರಿ ಹಂಪಣ್ಣ ಸಜ್ಜನ್, ತಹಶೀಲ್ದಾರ್ ಸುರೇಶ ವರ್ಮಾ ಅವರು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತ ಶರಣಪ್ಪ ಸತ್ಯಂಪೇಟೆ, ಸಿಪಿಐ ಉಮೇಶ ಕಾಂಬಳೆ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣ ಶಾವಂತಗೇರಾ, ಸಮಾಜದ ಮುಖಂಡರಾದ ಬಸವಗೌಡ ಪಿ.ಪಾಟೀಲ, ರಾಮನಗೌಡ ಏಗನೂರು, ಶರಣಪ್ಪ ಉಪಸ್ಥಿತರಿದ್ದರು.

‘ಮಲ್ಲಮ್ಮನ ಆದರ್ಶ ಸಮಾಜಕ್ಕೆ ಮಾದರಿ’

ಸಿರವಾರ: ‘ಹೇಮರಡ್ಡಿ ಮಲ್ಲಮ್ಮ ಅವರ ಬದುಕು ಒಂದು ಮಹಾನ್ ಗ್ರಂಥ. ಸಾಂಸಾರಿಕ ಜೀವನದೊಂದಿಗೆ ಸಮಾಜಕ್ಕೆ ಆದರ್ಶವಾಗಬಹುದು ಎಂದು ತೋರಿದ ಮಲ್ಲಮ್ಮಳ ಜೀವನ ಮಾನವ ಕುಲಕ್ಕೆ ಮಾದರಿ’ ಎಂದು ವೀರಶೈವ ಸಮಾಜದ ಮುಖಂಡ ಜೆ.ಶರಣಪ್ಪಗೌಡ ಹೇಳಿದರು.

ಪಟ್ಟಣದಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ, ಪೂಜೆ ಸಲ್ಲಿಸಿ ಮಾತನಾಡಿದರು.

‘ಹೇಮರಡ್ಡಿ ಮಲ್ಲಮ್ಮ ಅವರು ಸಮಾಜದ ಏಳಿಗೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿ, ಸಮಾಜ ಸುಧಾರಣೆಗೆ ಶ್ರಮಿಸಿ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಕೂಡ ತಮ್ಮ ಶ್ರಮದಿಂದ ಏನಾದರೂ ಸಾಧಿಸಬಹುದು ಎಂದು ತೋರಿಸಿದ ನಾಯಕಿ’ ಎಂದು ಅವರು ಹೇಳಿದರು.

ಜಿ.ಲೋಕರೆಡ್ಡಿ, ಪ್ರಕಾಶ ಪಾಟೀಲ ಮಾತನಾಡಿದರು.

ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು, ಶಾಸಕ ಜಿ.ಹಂಪಯ್ಯ ನಾಯಕ, ಸಂಸದ ಜಿ.ಕುಮಾರ ನಾಯಕ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಹೇಮರಡ್ಡಿ ಮಲ್ಲಮ್ಮನವರ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿದರು.

ವಿಎಸ್ಎಸ್ಎನ್ ಅಧ್ಯಕ್ಷ ಚನ್ನಪ್ಪ ಚನ್ನೂರು, ನೀಲಗಲ್ ಪಂಪಣ್ಣ ಸಾಹುಕಾರ, ಬಸಪ್ಪಗೌಡ ನಂದರೆಡ್ಡಿ, ಅಯ್ಯನಗೌಡ ಏರೆಡ್ಡಿ, ಶಿವರಾಜ ಬೆಳವಿನೂರು, ನಿಂಬಯ್ಯ ಸ್ವಾಮಿ, ವಿಜಯಕುಮಾರ ಗುಡ್ಡದಮನಿ, ಶಶಿ ಟಿ.ಪಾಟೀಲ, ದೇವಪುತ್ರಪ್ಪ ಸೇರಿದಂತೆ ವೀರಶೈವ ಸಮಾಜ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಇದ್ದರು.

ಲಿಂಗಸುಗೂರು: ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿ ಭಾನುವಾರ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ, ತಹಶೀಲ್ದಾರ್ ಸತ್ಯಮ್ಮ, ವೀರಶೈವ ಲಿಂಗಾಯತ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪ ಮೇಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಕರಡಕಲ್, ಟಿಎಪಿಸಿಎಂಎಸ್ ಅಧ್ಯಕ್ಷ ಶಶಿಧರ ಆಶಿಹಾಳ, ಬಸವರಾಜಗೌಡ ಗಣೇಕಲ್, ಅಮರೇಶಪ್ಪ ಹೂನೂರ, ಶರಣಬಸವರಾಜ ನಾಡಗೌಡ, ಸೋಮಶೇಖರ ಬಳಗಾನೂರ, ಪಂಪನಗೌಡ ಪಾಟೀಲ, ಹನಮಂತಪ್ಪ ಮೇಟಿ, ಶಿವಪುತ್ರಪ್ಪ ಬೆಳ್ಳಿಗನೂರ, ರಾಮನಗೌಡ ಕೋಡಿಹಾಳ, ಮಲ್ಲಿಕಾರ್ಜುನ ಬಿರಾದಾರ, ಚಂದ್ರಶೇಖರ ಬಾಳೇಗೌಡ್ರ, ಮಲ್ಲಣ್ಣ ಈಚನಾಳ, ಬಸನಗೌಡ ಕುಣಿಕಲ್ಲೂರು, ಅಮರಗುಂಡಪ್ಪ ತೆಗ್ಗಿನಮನಿ, ಮಹಾಂತಗೌಡ ಆಶಿಹಾಳ, ಸಿದ್ದರೆಡ್ಡಿ, ಶಂಕರಗೌಡ ಬಿರಾದಾರ, ಕನಕಪ್ಪ, ಚನ್ನಬಸವ ವಿಟ್ಲಾಪುರ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-32-492184926

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.