ರಾಯಚೂರು: ತಾಲ್ಲೂಕಿನ ಹೊಸೂರಿನಲ್ಲಿ ನೂತನವಾಗಿ ನಿರ್ಮಿಸಿರುವ ಸಂಗಮೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ಶಿಲಾಮೂರ್ತಿಗಳ ಪ್ರತಿಷ್ಟಾಪನಾ ಮಹೋತ್ಸವ ಏ. 21ರಿಂದ 23ರವರೆಗೆ ನಡೆಯಲಿದೆ ಎಂದು ಗ್ರಾಮಸ್ಥ ಎಂ. ವಿರೂಪಾಕ್ಷಿ ತಿಳಿಸಿದರು.

ಏ.21ರಂದು ಬೆಳಿಗ್ಗೆ 8ಗಂಟೆಗೆ ಕಲ್ಲಡ್ಡಿ ಬಸವಣ್ಣ ದೇವಸ್ಥಾನದಿಂದ ನೂತನ ಶಿಲಾಮೂರ್ತಿಗಳನ್ನು ಮೆರವಣಿಗೆ ಮೂಲಕ ಪುರಪ್ರವೇಶ ಮಾಡಿಸಲಾಗುವುದು. ನಂತರ ಜಲಾಧಿವಾಸ ಕಾರ್ಯಕ್ರಮ ನೆರವೇರಲಿದೆ ಎಂದು ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಏ.22ರಂದು ಬೆಳಿಗ್ಗೆ 10.30ಕ್ಕೆ ಧಾನ್ಯಾಧಿವಾಸ, ನಂತರ ನೂತನ ಶಿಲಾಮೂರ್ತಿಗಳಿಗೆ ಶಯನಾಧಿವಾಸ ನೆರವೇರಿಸಲಾಗುವುದು. ಏ.23ರಂದು ಶಿಲಾಮೂರ್ತಿಗಳಿಗೆ ರುದ್ರಾಭಿಷೇಕ, ಅಲಂಕಾರ ಪೂಜೆ ನೆರವೇರಿಸಿ, ಶಾಂತಮಲ್ಲ ಶಿವಾಚಾರ್ಯರಿಂದ ನೂತನ ಶಿಲಾಮೂರ್ತಿಗಳಿಗೆ ಪ್ರಾಣ ಪ್ರತಿಷ್ಟಾಪನೆ ಮಾಡಿಲಾಗುವುದು. ಬಳಿಕ ಪೂರ್ಣಾಹುತಿ, ನೂತನ ಗೋಪುರಕ್ಕೆ ಕಳಸಾರೋಹಣ ಜರುಗಲಿದೆ. ಮಠಾಧಿಶರು, ಸಚಿವರು, ಶಾಸಕರು, ಸಂಸದರು, ಮಾಜಿ ಸಚಿವರು ಭಾಗವಹಿಸಲಿದ್ದಾರೆ. ಪೌರೋಹಿತ್ಯವನ್ನು ಶರಣಯ್ಯಸ್ವಾಮಿ ಜಾಗೀರ ವೆಂಕಟಾಪುರ ಹಾಗೂ ಸಂಗಡಿಗರು ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-32-104928076

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.