ರಾಯಚೂರು: ತೆಲಂಗಾಣದ ನಾಗರ ಕರ್ನೂಲ್ ಜಿಲ್ಲೆಯ ಕುಮ್ಮರ ಗ್ರಾಮದಲ್ಲಿ ಮಡಿವಾಳ ಸಮುದಾಯದ ಹೆಣ್ಣು ಕೂಸಿನ ಹತ್ಯೆ ಮಾಡಿದ ಶ್ರೀನಿವಾಸ ರೆಡ್ಡಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಡಿವಾಳ ಯುವ ಘಟಕದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮಲ್ಲಯ್ಯ ಸ್ವಾಮಿ ಜಾತ್ರೆಗೆ ಅಪಾರ ಭಕ್ತರು ದರ್ಶನಕ್ಕೆ ಬರುತ್ತಿದ್ದಾರೆ. ಈ ದೇವಸ್ಥಾನದ ದರ್ಶನಕ್ಕೆ ಕುಮ್ಮರದ ಸರಪಂಚ ಶ್ರೀನಿವಾಸರೆಡ್ಡಿ ₹100 ಶುಲ್ಕ ನಿಗದಿಪಡಿಸಿದ್ದರು. ಇದನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಬಂದ ಪತ್ನಿ ಮೇಲೂ ಹಲ್ಲೆ ನಡೆಸಿ ಮಗುವನ್ನು ತುಳಿದು ಸಾಯಿಸಿದ್ದಾರೆ ಎಂದು ದೂರಿದರು.

ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅಲ್ಲಿನ ಮುಖ್ಯಮಂತ್ರಿ ಅವರಿಗೂ ದೂರು ಕೊಡಲಾಗಿದೆ. ತೆಲಂಗಾಣ ಸರ್ಕಾರ ಆರೋಪಿಯನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಗುಬ್ಬಲ್ ವೆಂಕಟೇಶ ಮಡಿವಾಳ, ವೈ.ನರಸಪ್ಪ, ಜಿ.ಸೂಗಪ್ಪ, ವಿರೂಪಾಕ್ಷಿ, ಜಿ.ವೆಂಕಟೇಶ, ಹುಸೇನಪ್ಪ, ಈ.ಚಂದಪ್ಪ, ಜಮುನಾ ಕೇಶವ, ಯು.ಆಂಜನೇಯ, ಹನುಮಂತು, ಚಂದ್ರಶೇಖರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260306-32-93755545

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.