ರಾಯಚೂರು: ‘ರಾಯಚೂರು ಮೂಲಸೌಕರ್ಯ ವೃದ್ಧಿಗೆ ಒತ್ತುಕೊಡಲಾಗಿದೆ. ಹೆದ್ದಾರಿಗಳು ಹಾಗೂ ಸಾರಿಗೆ ಸಂಪರ್ಕ ವ್ಯವಸ್ಥೆ ಇನ್ನಷ್ಟು ಸುಗಮಗೊಳ್ಳಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲ ರೀತಿಯ ನೆರವು ಕೊಡಲು ಸಿದ್ಧವಿದ್ದು, ಬಂಡವಾಳ ಶಾಹಿಗಳು ಜಿಲ್ಲೆಯಲ್ಲಿ ಉದ್ಯಮ ಆರಂಭಿಸಲು ಮುಂದೆ ಬರಬೇಕು’ ಎಂದು ವಿಜ್ಞಾನ, ತಂತ್ರಜ್ಞಾನ ಹಾಗೂ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಮನವಿ ಮಾಡಿದರು.

ಇಲ್ಲಿಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಗುರುವಾರ ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಉದ್ಯಮ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ತನ್ನ ಸ್ಟಾರ್ಟ್ ಆಪ್ ಇಂಡಿಯಾ ಉಪಕ್ರಮದಡಿ ಆಯೋಜಿಸಿದ್ದ ತೇಜಸ್ ಸ್ಟಾರ್ಟ್ ಅಪ್ ಇಂಡಿಯಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಬಂಡವಾಳ ಶಾಹಿಗಳು ಮೂಲಸೌಕರ್ಯವಿರುವ ಬೆಂಗಳೂರು, ಧಾರವಾಡ ಹಾಗೂ ಬೆಳಗಾವಿ ಅಂತಹ ಮಹಾನಗರದಲ್ಲೇ ಹೊಸ ಉದ್ಯಮಗಳನ್ನು ಆರಂಭಿಸಲು ಆಸಕ್ತಿ ತೋರಿಸುತ್ತಾರೆ. ಸೌಕರ್ಯದ ಕೊರತೆಯಿಂದ ಈ ಭಾಗಕ್ಕೆ ಬರಲು ಹಿಂಜರಿಯುತ್ತಾರೆ‘ ಎಂದು ತಿಳಿಸಿದರು.

‘ರಾಯಚೂರಿನಲ್ಲಿ ನಡೆಯುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ರಾಯಚೂರು ಮಾರ್ಗವಾಗಿ ರೈಲು ಸಂಪರ್ಕ ಜಾಲವೂ ವಿಸ್ತರಿಸಿಕೊಳ್ಳುತ್ತಿದೆ. ಜಿಲ್ಲಾ ಕೇಂದ್ರದಲ್ಲಿ ಹೆದ್ದಾರಿಗಳು ಹಾದು ಹೋಗಿವೆ. ಬೆಳಗಾವಿ ಮಾರ್ಗವಾಗಿ ರಾಯಚೂರಿನಿಂದ ಗೋವಾ ರಾಜ್ಯಕ್ಕೂ ಇನ್ನು ನೇರ ಸಂಪರ್ಕ ದೊರೆಯಲಿದೆ. ಹೆದ್ದಾರಿ ಹಾಗೂ ಸಾರಿಗೆ ಸಂಪರ್ಕ ಉದ್ಯಮಗಳು ಬರಲು ನೆರವಾಗಲಿದೆ‘ ಎಂದು ಹೇಳಿದರು.

‘ಕೃಷಿ ಉತ್ನನ್ನಗಳ ತಯಾರಿಕೆಯಲ್ಲಿ ರಾಯಚೂರು ಮುಂಚೂಣಿಯಲ್ಲಿದೆ. ಅಗ್ರೋ ಕೈಗಾರಿಕೆಗಳನ್ನು ಪ್ರಾರಂಭಿಸಲು ಇಲ್ಲಿ ವಿಫುಲ ಅವಕಾಶಗಳಿವೆ. ನವೋದ್ಯಮಿಗಳು ತರಬೇತಿ ಪಡೆದು ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗಬೇಕು‘ ಎಂದು ಕರೆ ನೀಡಿದರು.

‘ಕೇಂದ್ರ ಸರ್ಕಾರವು ಅತಿ ಹಿಂದುಳಿದ ದೇಶದ 132 ಮಹತ್ವಾಕಾಂಕ್ಷಿ ಜಿಲ್ಲೆಗಳನ್ನು ಗುರುತಿಸಿದೆ. ಮೊದಲ ಬಾರಿಗೆ ಈ ಜಿಲ್ಲೆಯಲ್ಲಿ ಕಾರ್ಯಾಗಾರ ಆರಂಭವಾಗಿದೆ. ನವೋದ್ಯಮಿಗಳು ಇದರ ಪೂರ್ಣ ಲಾಭ ಪಡೆದುಕೊಳ್ಳಬೇಕು‘ ಎಂದು ತಿಳಿಸಿದರು

ಜಿಲ್ಲಾಧಿಕಾರಿ ನಿತೀಶ್ಕುಮಾರ ಮಾತನಾಡಿ,‘ ಸ್ಟಾರ್ಟ್ ಆಪ್ ಇಂಡಿಯಾ ಉಪಕ್ರಮದಡಿ ಆಯೋಜಿಸಿದ್ದ ತೇಜಸ್ ಸ್ಟಾರ್ಟ್ ಅಪ್ ಇಂಡಿಯಾ ಕಾರ್ಯಾಗಾರ ಏರ್ಪಡಿಸಿದೆ. ಜಿಲ್ಲೆಯ ಯುವಕರು ತರಬೇತಿಯ ಲಾಭ ಪಡೆದು ಉದ್ಯಮ ಆರಂಭಿಸಿ ಕನಿಷ್ಠ 100 ಜನರಿಗಾದರೂ ಉದ್ಯೋಗಕೊಡಬೇಕು‘ ಎಂದು ಹೇಳಿದರು.

‘ಕೇಂದ್ರ ಸರ್ಕಾರ ಐಐಐಟಿಗೆ ₹ 5 ಕೋಟಿ ಮಂಜೂರಾಗಿದೆ. ಜಿಲ್ಲಾಡಳಿತ, ರಾಯಚೂರು ವಾಣಿಜ್ಯೋದ್ಮಮ ಮಂಡಳಿ ಸಹಯೋಗದಲ್ಲಿ ಐಐಐಟಿ ಮೂಲಕವೇ ಯುವ ಉದ್ಯಮಿಗಳಿಗೆ ತರಬೇತಿ ಕಾರ್ಯಾಗಾರ ಮುಂದುವರಿಸಲಾಗುವುದು. ಇದರಿಂದ ಜಿಲ್ಲಾ ಮಟ್ಟದ ಕಾರ್ಯಾಗಾರಗಳ ಮೂಲಕ ತಳಮಟ್ಟದವರೆಗೆ ಸ್ಟಾರ್ಟ್ ಅಪ್ಗೆ ಬೆಂಬಲ ದೊರೆಯಲಿದೆ‘ ಎಂದು ತಿಳಿಸಿದರು.

‘ವಿದ್ಯಾರ್ಥಿಗಳು, ನವೋದ್ಯಮಿಗಳು, ಕೈಗಾರಿಕಾ ತಜ್ಞರು ಮತ್ತು ಪರಿಸರ ಸಹಭಾಗಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಜ್ಞಾನ ಹಂಚಿಕೆ, ಮಾರ್ಗದರ್ಶನ ಮತ್ತು ನೆಟವರ್ಕಿಂಗ್ ಅವಕಾಶ ಕಲ್ಪಿಸಲಾಗಿದೆ.. ಪ್ರಮುಖ ಅಧಿವೇಶನಗಳು ಸ್ಟಾರ್ಟ್ ಆಪ್ ಆಲೋಚನೆ ರೂಪಿಸುವಿಕೆ, ವಿಸ್ತರಣೆ ತಂತ್ರಗಳು, ಹಣಕಾಸು ಅವಕಾಶಗಳು, ಇಂಕ್ಯುಬೇಷನ್ ಬೆಂಬಲ ಮತ್ತು ಸರ್ಕಾರದ ಯೋಜನೆಗಳ ಕುರಿತು ಪರಿಣಿತರು ಮಾಹಿತಿ ಒದಗಿಸಲಿದ್ದಾರೆ‘ ಎಂದು ಹೇಳಿದರು.

ಐಐಐಟಿ ನಿರ್ದೇಶಕ ಪ್ರೊ.ಹರೀಶ್ಕುಮಾರ ಸರ್ದಾನಾ, ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ, ಶಿಲ್ಪಾ ಮೆಡಿಕೇರ್ ಲಿಮಿಟೆಸ್ನ ಅಧ್ಯಕ್ಷ ವಿಷ್ಣುಕಾಂತ ಭುತಡಾ, ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಎಸ್.ಕಮಲಕುಮಾರ ಉಪಸ್ಥಿತರಿದ್ದರು.

ರೋಹನ್ ರಚ್ಚದೇವ್ ಉಪನ್ಯಾಸ ನೀಡಿದರು. ಮೆಹಬೂಬ್ ಆಲಂ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.