ರಾಯಚೂರು: ‘ಶಾಂತರಸರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ’ ಎಂದು ಸಾಹಿತಿ ಬಾಬು ಭಂಡಾರಿಗಲ್ ಅಭಿಪ್ರಾಯಪಟ್ಟರು.

ಇಲ್ಲಿಯ ನವಯುಗ ಪದವಿ ಮಹಾವಿದ್ಯಾಲಯದಲ್ಲಿ ರಂಗಸಿರಿ ಸಾಂಸ್ಕೃತಿಕ ಕಲಾ ಬಳಗ, ಬೆಂಗಳೂರಿನ ಸಂಸ ಥಿಯೇಟರ್ ಹಾಗೂ ನವಯುಗ ಪದವಿ ಮಹಾವಿದ್ಯಾಲಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಾಂತರಸ ನೆನಪು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

‘ಶಾಂತರಸರ ಸಾಹಿತ್ಯ ಪ್ರಾಂತೀಯ ಭಾಷೆಯಿಂದ ಕೂಡಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ವಚನ ಸಾಹಿತ್ಯದಲ್ಲಿ ಸಂಶೋಧನೆ ಮಾಡಿದವರಲ್ಲಿ ಮೊದಲಿಗರು. ಇಂದಿನ ವಿದ್ಯಾರ್ಥಿಗಳು ಶಾಂತಸರ ಸಾಹಿತ್ಯವನ್ನು ಅಧ್ಯಯನ ಮಾಡಬೇಕು’ ಎಂದು ಹೇಳಿದರು.

ಏಮ್ಸ್ ಹೋರಾಟಗಾರ ಬಸವರಾಜ ಕಳಸ ಮಾತನಾಡಿ,‘ಕನ್ನಡ ಭಾಷೆಯಲ್ಲಿ ಗಜಲ್ ಸಾಹಿತ್ಯವನ್ನು ಶಾಂತರಸರು ಬೆಳೆಸಿದರು. ಅವರ ಬರವಣಿಗೆಯಲ್ಲಿ ಸಿಟ್ಟು, ಪ್ರೇಮ, ವೇದನೆ, ವಿರಹ, ಆಕ್ರೋಶ ಇತ್ತು’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನವಯುಗ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಈರಣ್ಣ ಪೂಜಾರಿ, ಅಕಾಡೆಮಿ ಆಫ್ ಮೆಡಿಕಲ್ನ ಕೋಶಾಧ್ಯಕ್ಷ ಭೀಮನಗೌಡ ಇಟಗಿ, ಸಾಹಿತಿ ರಾಜಶ್ರೀ ಕಲ್ಲೂರಕರ, ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ವೆಂಕಟೇಶ ಬೇವಿನಬೆಂಚಿ, ಮಹಾದೇವ ಪಾಟೀಲ, ಯಲ್ಲಪ್ಪ ಮರ್ಚೆಡ್, ಮಲ್ಲೇಶ ಭೈರವ, ಅಭಿಷೇಕ ಐಲಿ ಮಸರಕಲ್, ನರಸಿಂಹಲು ವಡವಾಟಿ, ರಂಗಪ್ಪ, ಚಂದ್ರಶೇಖರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಮತಾ ಪ್ರಾರ್ಥನ ಗೀತೆ ಹಾಡಿದರು. ವೆಂಕಟನರಸಿಂಹಲು ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-32-1901135856

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.