ಸಿಂಧನೂರು: ‘ವೀರರಾಣಿ ಕಿತ್ತೂರು ಚನ್ನಮ್ಮ ಅವರು ಅನ್ಯಾಯದ ವಿರುದ್ಧ ಹೋರಾಡಿದ ಮಹಾನ್ ಹೋರಾಟಗಾರ್ತಿ. ಅವರ ಆದರ್ಶ ಮತ್ತು ಧೈರ್ಯ ಇಂದಿನ ಯುವಜನರಿಗೆ ದಾರಿ ದೀಪವಾಗಲಿ’ ಎಂದು ಪಂಚಮಸಾಲಿ ಪೀಠದ ವಚನಾನಂದ ಸ್ವಾಮಿ ಹೇಳಿದರು.

ತಾಲ್ಲೂಕಿನ ತುರ್ವಿಹಾಳ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವೃತ್ತ ಉದ್ಘಾಟನೆ ಮತ್ತು ಪುತ್ಥಳಿ ಅನಾವರಣ ಮಾಡಿ ಮಾತನಾಡಿದರು.

‘ಇಂದಿನ ಯುವಕರು ಮೊಬೈಲ್ಗಳಿಗಿಂತ ಇತಿಹಾಸ ಪ್ರಸಿದ್ಧ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಓದಲು ಮುಂದಾಗಬೇಕು. ಮಕ್ಕಳಿಗೆ ರಾಣಿ ಚನ್ನಮ್ಮ ಹಾಗೂ ಮಹಾನ್ ದಾರ್ಶನಿಕರ ಜೀವನ ಪರಿಚಯಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಪಂಚಮಸಾಲಿ ಸಮುದಾಯದ ಸಂಘಟನೆಗೆ ಈ ಕಾರ್ಯಕ್ರಮ ಮಾದರಿಯಾಗಿದ್ದು, ಸಂಘಟಿತ ಶಕ್ತಿಯ ಮಹತ್ವವನ್ನು ತೋರಿಸಿದೆ’ ಎಂದು ಹೇಳಿದರು.

ಇದಕ್ಕೂ ಮುಂಚೆ ರಾಘವೇಂದ್ರ ಸ್ವಾಮಿ ಮಠದಿಂದ ಶಂಕರಲಿಂಗ ದೇವಸ್ಥಾನದವರೆಗೆ ಸುಮಾರು 45 ಮಹಿಳೆಯರು ಕುಂಭ-ಕಳಸ ಹೊತ್ತು, ಬಾಜಾ-ಭಜಂತ್ರಿಯೊಂದಿಗೆ ಭವ್ಯ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಗಳೂ ಗಮನ ಸೆಳೆದವು.

ಬಸವ ಜಯಮೃತ್ಯುಂಜಯ ಸ್ವಾಮೀಜಿ, ಅಮರಗುಂಡಯ್ಯ ಶಿವಾಚಾರ್ಯರು, ಮಾದಯ್ಯ ಗುರುವಿನ್, ಗುರುಗುಂಡಯ್ಯ ಅಪ್ಪಾಜಿ, ಶಾಸಕ ಆರ್.ಬಸನಗೌಡ, ಮಾಜಿ ಶಾಸಕ ಪ್ರತಾಪ ಗೌಡ ಪಾಟೀಲ ಹಾಗೂ ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಸಿಂಧನೂರು ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸಾಹುಕಾರ ಕಲ್ಲೂರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯಾಧ್ಯಕ್ಷ ಸೋಮನಗೌಡ ಮಾಲಿ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಾಪುಗೌಡ ದೇವರಮನಿ, ಶೇಖರಪ್ಪ ಮುತ್ತಿನವರು, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಕುಮಾರಪ್ಪ ಪವಾಡಶೆಟ್ಟಿ, ಮಲ್ಲನಗೌಡ ದೇವರಮನಿ, ಕೆಪಿಸಿಸಿ ಕಾರ್ಯದರ್ಶಿ ಫಾರೂಖ್ ಸಾಬ್ಖಾಜಿ, ಮುಖಂಡರಾದ ಮೌಲಪ್ಪಯ್ಯ ಗುತ್ತೇದಾರ, ಶಾಮಿದ್ ಸಾಬ್, ಮಂಟೆಪ್ಪ ಎಲೆಕೂಡ್ಲಿಗಿ, ಕರಕಪ್ಪ ಸಾಹುಕಾರ, ಅಮರೇಗೌಡ ಕೆಲ್ಲೂರ, ಪ್ರಸನ್ನ ಪಾಟೀಲ, ಶಿವರಾಜ ಪಾಟೀಲ ಗುಂಜಳ್ಳಿ, ಚಿದಾನಂದಯ್ಯ ಗುರುವಿನ್, ಸಿದ್ದೇಶ್ ಗುರಿಕಾರ, ರಾಜಶೇಖರ ಗಡೇದ್, ಶರಣಪ್ಪ ಹತ್ತಿಗುಡ್ಡ, ಶರಣಪ್ಪ ಗಡೇದ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-32-1588700930

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.