ರಾಯಚೂರು: ‘ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಡಿ ಜಮೀನು ಕೊಡಿಸುವುದಾಗಿ ನಂಬಿಸಿ ಬಡ ದಲಿತ ಫಲಾನುಭವಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಆರೋಪಿ ನರಸಿಂಹಲು ಭಂಡಾರಿ ವಿರುದ್ಧ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸಮಾಜ ಸೇವಕ ಹೊನ್ನಪ್ಪ ಕಟ್ಟಿಮನಿ ಆಗ್ರಹಿಸಿದರು.

‘2021-22ನೇ ಸಾಲಿನಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಡಿ ಮಾನ್ವಿ ತಾಲ್ಲೂಕಿನ ಮಾನ್ವಿ ಹಾಗೂ ಸಂಗಾಪುರ ಸೀಮಾಂತರ ಪ್ರದೇಶದಲ್ಲಿ ಜಮೀನು ಮಂಜೂರು ಮಾಡಿಸಿಕೊಡುವುದಾಗಿ ರಾಯಚೂರಿನ ಹರಿಜನವಾಡದ ನರಸಿಂಹಲು ಭಂಡಾರಿ ಭರವಸೆ ನೀಡಿದ್ದರು. ಈ ಮಾತನ್ನು ನಂಬಿದ 22 ಬಡ ದಲಿತ ಫಲಾನುಭವಿಗಳು ತಮ್ಮ ಕಷ್ಟದ ಸಂಪಾದನೆಯಿಂದ ಒಟ್ಟು ₹22 ಲಕ್ಷ ಹಣವನ್ನು ನರಸಿಂಹಲು ಭಂಡಾರಿಗೆ ನೀಡಿದ್ದಾರೆ. ಆದರೆ, ಹಣ ಪಡೆದ ಬಳಿಕ ಕಳೆದ 5-6 ವರ್ಷಗಳಿಂದ ಜಮೀನು ಕೊಡಿಸದೇ, ಹಣವನ್ನೂ ಹಿಂತಿರುಗಿಸದೇ ಫಲಾನುಭವಿಗಳನ್ನು ವಂಚಿಸುತ್ತಿದ್ದಾನೆ’ ಎಂದು ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ದೂರಿದರು.

‘ಜಮೀನು ಸಿಗದೇ ವರ್ಷಗಳು ಕಳೆದ ಹಿನ್ನೆಲೆಯಲ್ಲಿ ನಾಲ್ವರು ಫಲಾನುಭವಿಗಳು ನರಸಿಂಹಲು ಭಂಡಾರಿ ಮನೆಗೆ ತೆರಳಿ ನ್ಯಾಯ ಕೇಳಿದಾಗ, ‘ನಿಮ್ಮ ದುಡ್ಡು ವಾಪಸ್ ಕೊಡುವುದಿಲ್ಲ, ನಿಮ್ಮನ್ನೆಲ್ಲ ಜೈಲಿಗೆ ಹಾಕಿಸುತ್ತೇನೆ’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆ’ ಎಂದು ಆರೋಪಿಸಿದರು.

ಕೂಡಲೇ ಹಣ ಹಿಂದಿರುಗಿಸಬೇಕು. ಇಲ್ಲದಿದ್ದರೆ ಎಸ್ಪಿಗೆ ದೂರು ನೀಡಿ ಕಾನೂನು ಹೋರಾಟ ಕೈಗೊಳ್ಳಲಾಗುವುದು ಎಂದು ಹೇಳಿದರು. ರಾಮಣ್ಣ, ಶಿವಮ್ಮ, ನಾಗಮ್ಮ, ಪಾರ್ವತಮ್ಮ, ಅಯ್ಯಮ್ಮ, ರೇಣುಕಾ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-32-1507148446

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.