ಲಿಂಗಸುಗೂರು: ಜಿಲ್ಲೆಯಲ್ಲಿ ದೊಡ್ಡ ದೇವಸ್ಥಾನಗಳಲ್ಲಿ ಒಂದಾದ ತಾಲ್ಲೂಕಿನ ಗುರುಗುಂಟಾ ಅಮರೇಶ್ವರ ದೇವಸ್ಥಾನ ಅಭಿವೃದ್ಧಿಯಿಂದ ವಂಚಿತಗೊಂಡಿದೆ.

ಪ್ರಕೃತಿ ಮಡಿಲಲ್ಲಿರುವ ಅಮರೇಶ್ವರ ಸುಕ್ಷೇತ್ರ ಪೌರಾಣಿಕ ಹಿನ್ನಲೆ ಹೊಂದಿದೆ. ದೇವಾಲಯದ ಒಳಗಿರುವ ಶಿವಲಿಂಗವನ್ನು ಸುತ್ತುವರೆದಿರುವ ನೀರಿನ ಹರಿವು ಒಂದು ವಿಶಿಷ್ಟ ಲಕ್ಷಣವಾಗಿದೆ. ಈ ನೀರಿನ ಮೂಲ ಇನ್ನೂ ರಹಸ್ಯವಾಗಿದೆ.

ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ‘ಎ’ ಗ್ರೇಡ್ ಸ್ಥಾನದಲ್ಲಿರುವ ಜಿಲ್ಲೆಯ ಮೂರು ದೇವಸ್ಥಾನಗಳ ಪೈಕಿ ತಾಲ್ಲೂಕಿನ ಅಮರೇಶ್ವರ ದೇವಸ್ಥಾನವೂ ಒಂದು. ವಾರ್ಷಿಕ ಒಂದೂವರೆ ಕೋಟಿ ರೂಪಾಯಿಗೂ ಅಧಿಕ ಆದಾಯ ಇರುವ ಈ ದೇವಸ್ಥಾನ ಅಭಿವೃದ್ಧಿಯಿಂದ ಸಂಪೂರ್ಣ ವಂಚಿತವಾಗಿದೆ.

ಲಿಂಗಸುಗೂರು ಪಟ್ಟಣದಿಂದ 18 ಕಿ.ಮೀ ದೂರವಿರುವ ಅಮರೇಶ್ವರ ಸುಕ್ಷೇತ್ರಕ್ಕೆ ಸಮರ್ಪಕ ಬಸ್ ಸೌಕರ್ಯ ಇಲ್ಲದಾಗಿದೆ. ಇತ್ತೀಚಿಗೆ ಲಿಂಗಸುಗೂರು, ಸಿಂಧನೂರು, ಮಸ್ಕಿ ಸೇರಿದಂತೆ ಘಟಕಗಳ ಕಲುಬುರಗಿ ಮಾರ್ಗದ ಬಸ್ಗಳನ್ನು ಅಮರೇಶ್ವರ ಕ್ರಾಸ್ನಲ್ಲಿ ನಿಲುಗಡೆ ಮಾಡುವಂತೆ ಕಲ್ಯಾಣ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶ ಮಾಡಿದ್ದರು. ಆದರೆ ಆದೇಶ ಕಾರ್ಯರೂಪಕ್ಕೆ ಬಂದಿಲ್ಲ. ಲಿಂಗಸುಗೂರು ಘಟಕದಿಂದ ಪ್ರತಿ ದಿನ ಕೇವಲ ಆರು ಬಾರಿ ಬಸ್ ಸಂಚಾರ ಮಾಡುತ್ತಿದೆ.

ಅಮಾವಾಸ್ಯೆ ದಿನ ಒಂದು ಬಸ್ ಓಡಿಸಲಾಗುತ್ತಿದೆ. ಪ್ರತಿದಿನವೂ ಭಕ್ತರ ಅನುಕೂಲಕ್ಕಾಗಿ ಕಲಬುರಗಿ ಮಾರ್ಗದ ಎಲ್ಲ ಬಸ್ಗಳು ಅಮರೇಶ್ವರ ಕ್ರಾಸ್ ಬದಲು ಸುಕ್ಷೇತ್ರಕ್ಕೆ ಬಂದು ಬಂದು ಹೋಗುವ ವ್ಯವಸ್ಥೆ ಆಗಬೇಕು ಎನ್ನುವುದು ಭಕ್ತರ ಆಗ್ರಹ.

ವಸತಿ ಸೌಕರ್ಯದ್ದೇ ದೊಡ್ಡ ಸವಾಲು: ದೇವಸ್ಥಾನದಲ್ಲಿ ಭಕ್ತರೇ ಕಟ್ಟಿಸಿದ 90 ಕೊಠಡಿಗಳು ಹಾಗೂ ಸರ್ಕಾರ ನಿರ್ಮಾಣ ಮಾಡಿದ 5 ಕೊಠಡಿಗಳುಳ್ಳ ಯಾತ್ರಿ ನಿವಾಸ, ಪಿಡಬ್ಲ್ಯೂಡಿ ಇಲಾಖೆಯ ಪ್ರವಾಸಿ ಮಂದಿರ ಇದೆ. ಭಕ್ತರು ಕಟ್ಟಿಸಿದ 90 ಕೊಠಡಿಗಳಲ್ಲಿ ಕೆಲ ಕೊಠಡಿಗಳು ಹಳೆಯದಾಗಿದ್ದು ಶೇ80 ರಷ್ಟು ಕೊಠಡಿಗಳು ನಿರ್ವಹಣೆ ಇಲ್ಲದೆ ಹಾಳಾಗಿವೆ. ಬಾಗಿಲು, ಕಿಟಕಿ, ವಿದ್ಯುತ್ ಸಂಪರ್ಕ ಇಲ್ಲದ ಕೊಠಡಿಗಳು ಹೆಚ್ಚಿವೆ. ಯಾತ್ರಿ ನಿವಾಸದಲ್ಲಿ ಕಿಟಕಿ, ಫ್ಯಾನ್, ಸಮರ್ಪಕ ವಿದ್ಯುತ್ ಕೊರತೆ ಇರುವುದರಿಂದ ಭಕ್ತರು ಇಲ್ಲಿ ತಂಗಲು ಹಿಂದೇಟು ಹಾಕುತ್ತಿದ್ದಾರೆ.

ಸುಕ್ಷೇತ್ರದಲ್ಲಿರುವ ಶೌಚಾಲಯಗಳ ಸ್ಥಿತಿಯನ್ನು ಕೇಳುವವರೇ ಇಲ್ಲದಾಗಿದೆ. ಬಯಲು ಪ್ರದೇಶವೇ ಶೌಚಾಲಯವಾಗಿದೆ. ಪ್ರತಿ ವರ್ಷ ಹೋಳಿ ಹುಣ್ಣಿಮೆ ದಿನ ಜಾತ್ರಾ ಮಹೋತ್ಸವ ನಡೆಯುತ್ತದೆ. ಆ ಸಂದರ್ಭದಲ್ಲಿ ವಿಶೇಷವಾಗಿ ನಡೆಯುವ ಜಾನುವಾರು ಜಾತ್ರೆಗೆ ಆಗಮಿಸುವ ರೈತರಿಗಾಗಿ ಅನೇಕ ವರ್ಷಗಳ ಹಿಂದೆ ನಿರ್ಮಿಸಿದ ರೈತ ಭವನದ ಒಂದು ಭಾಗದ ಗೋಡೆ ಕುಸಿದು ಬಿದ್ದು ರೈತ ಭವನ ಪಾಳುಬಿದ್ದಿದೆ.

ರಾಜ್ಯದ ವಿವಿಧ ಜಿಲ್ಲೆಗಳು, ಮಹಾರಾಷ್ಟ, ಆಂಧ್ರಪ್ರದೇಶದಿಂದ ಬರುವ ಭಕ್ತರಿಗೆ ಸುಸಜ್ಜಿತ ಹಾಗೂ ಅತ್ಯಾಧುನಿಕ ಸೌಲಭ್ಯಗಳ ವಸತಿ ಸಮಚ್ಛಯ ಇಲ್ಲದಿರುವುದರಿಂದ ಲಿಂಗಸುಗೂರಿನಲ್ಲಿ ರೂಮ್ ಮಾಡಿ ನಂತರ ದೇವಸ್ಥಾನಕ್ಕೆ ಬಂದು ದರ್ಶನ ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಏಳು ವರ್ಷಗಳ ಹಿಂದೆ ನಾಲ್ಕು ವಾಣಿಜ್ಯ ಮಳಿಗೆಗಳು ನಿರ್ಮಾಣ ಮಾಡಿದರೂ ಅವುಗಳ ಬಳಕೆಯಿಲ್ಲದೆ ಪಾಳು ಬಿದ್ದು ಹಾಳಾಗುತ್ತಿವೆ. ದೇವಸ್ಥಾನದಲ್ಲಿ ಏನೇ ಸೌಕರ್ಯ ಬಂದಿದ್ದರೂ ಅದು ಭಕ್ತರ ನೆರವಿನಿಂದ ಧಾರ್ಮಿಕ ದತ್ತಿ ಇಲಾಖೆಯಿಂದ ಅಂತಹ ಗುರುತರ ಯೋಜನೆಗಳು ದೇವಸ್ಥಾನಕ್ಕೆ ಬಂದಿಲ್ಲ, ದೇಣಿಗೆ ನೀಡಲು ಸಾಕಷ್ಟು ಜನ ಭಕ್ತರು ಮುಂದೆ ಬಂದರೂ ಅದನ್ನು ಸ್ವೀಕರಿಸಿ ಅಭಿವೃದ್ಧಿ ಮಾಡುವ ಮನಸ್ಸೇ ಇಲ್ಲಿನ ಅಧಿಕಾರಿಗಳಿಗೆ ಇಲ್ಲದಂತಾಗಿದೆ ಎಂದು ಭಕ್ತ ಅಮರೇಶಸ್ವಾಮಿ ಹೇಳುತ್ತಾರೆ.

ಪ್ರತಿವರ್ಷ ಹೋಳಿ ಹುಣ್ಣಿಮೆ ದಿನ ನಡೆಯುವ ಅಮರೇಶ್ವರ ರಥೋತ್ಸವದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ. ಅಮರೇಶ್ವರ ಕ್ರಾಸ್ನಿಂದ ದೇವಸ್ಥಾನವರೆಗೆ ಕಿರಿದಾದ ರಸ್ತೆಯಿದ್ದು ವಾಹನಗಳ ಸಂಚಾರ ದಟ್ಟಣೆ ಉಂಟಾಗಿ ಉಸಿರುಗಟ್ಟುವ ವಾತವಾರಣ ನಿರ್ಮಾಣವಾಗಿ ಭಕ್ತರು ಪರದಾಡುವಂತಹ ಸ್ಥಿತಿ ಪ್ರತಿ ವರ್ಷ ಅನುಭವಿಸುವಂತಾಗುತ್ತಿದೆ.

ರಥೋತ್ಸವಕ್ಕೆ ಮುಂಚೆ ದರ್ಶನ ಪಡೆದುಕೊಂಡು ಹೋಗುವರ ಸಂಖ್ಯೆಯೇ ಹೆಚ್ಚಾಗಿದೆ. ರಥೋತ್ಸವದ ದಿನದಂದು ವಾಹನಗಳ ಹಾಗೂ ಭಕ್ತರ ಸುಗಮ ಸಂಚಾರಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕಾಗಿದೆ.

ಖಾಸಗಿ ವ್ಯಕ್ತಿಗಳದ್ದೇ ಕಾರುಬಾರು: ದೇವಸ್ಥಾನಕ್ಕೆ ಬರುವ ಭಕ್ತರಿಗೆ ವಸತಿ ಸೌಕರ್ಯ, ಕಲ್ಯಾಣಮಂಟಪ ಇತರೆ ಸೇವೆಗಳನ್ನು ಒದಗಿಸುವ ವಿಚಾರದಲ್ಲಿ ಧಾರ್ಮಿಕ ದತ್ತಿ ಇಲಾಖೆ ಸಿಬ್ಬಂದಿಗಿಂತ ಖಾಸಗಿ ವ್ಯಕ್ತಿಗಳ ಕಾರುಬಾರು ಅಧಿಕವಾಗಿದೆ. ವಸತಿ ಕೊಠಡಿಗಳ ಬೀಗಗಳು ಖಾಸಗಿ ವ್ಯಕ್ತಿಗಳ ಕೈಯಲ್ಲಿ ಇರುತ್ತವೆ, ಅವರ ಹಿಡಿತದಿಂದ ದೇವಸ್ಥಾನ ಮುಕ್ತವಾಗಿ ಭಕ್ತರಿಗೆ ಸೇವೆಗಳು ಸಿಗುವಂತಾಗಬೇಕು ಎಂಬುದು ಭಕ್ತರ ಅಭಿಪ್ರಾಯವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-32-1134275328

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.