ಕವಿತಾಳ: ಮಸ್ಕಿ ತಾಲ್ಲೂಕಿನ ವಟಗಲ್ ಮತ್ತು ಅಮೀನಗಡ ಗ್ರಾಮದ ನಡುವಿನ ರಾಯಚೂರು–ಲಿಂಗಸುಗೂರು ರಾಜ್ಯ ಹೆದ್ದಾರಿಯಲ್ಲಿ ಜಿಂಕೆ ಮತ್ತು ಜಿಂಕೆ ಮರಿಯ ಕಳೆಬರ ಭಾನುವಾರ ಬೆಳಿಗ್ಗೆ ಕಂಡು ಬಂದಿದೆ.

ಜಿಂಕೆಗಳ ಮುಖದ ಮೇಲೆ ಗಾಯಗಳಾಗಿದ್ದು, ಬಾಯಿಯಿಂದ ರಕ್ತ ಸೋರುತ್ತಿರುವುದು ಕಂಡು ಬಂದಿದೆ. ರಸ್ತೆ ಜಿಗಿಯುವಾಗ ವಾಹನ ಡಿಕ್ಕಿ ಹೊಡೆದು ಜಿಂಕೆಗಳು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಬೈಕ್ ಮೇಲೆ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಸತ್ತು ಬಿದ್ದ ಜಿಂಕೆಗಳನ್ನು ಗಮನಿಸಿ ತಮ್ಮ ಮೊಬೈಲ್ನಲ್ಲಿ ಚಿತ್ರ ತೆಗೆದು, ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ದಾರಿಹೋಕರು ಜಿಂಕೆಗಳ ಕಳೆಬರ ತೆಗೆದು ರಸ್ತೆ ಬದಿ ಹಾಕಿದ್ದಾರೆ.

ತಾವು ದೇವಸ್ಥಾನಕ್ಕೆ ತೆರಳುವಾಗ ರಸ್ತೆಯಲ್ಲಿ ಜಿಂಕೆಗಳು ಸತ್ತು ಬಿದ್ದಿದ್ದವು ಎಂದು ಮಾಳಪ್ಪ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-32-832415606

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.