ಮುದಗಲ್: ‘ಸಮೀಪದ ದೇವರಭೂಪುರ ಗ್ರಾಮದ ಅಮರಗುಂಡ ತೋಪಿನಕಟ್ಟೆ ಸಂಸ್ಥಾನ ಬ್ರಹ್ಮನ್ಮಠದಲ್ಲಿ ಜುಲೈ 4–24ರ ವರೆಗೆ 21ನೇ ಗುರು ಪಟ್ಟಾಧಿಕಾರ ಮಹೋತ್ಸವ ಹಾಗೂ ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮ ಜರುಗಲಿದೆ’ ಎಂದು ತೋಪಿನಕಟ್ಟೆ ಸಂಸ್ಥಾನಮಠದ ಪೀಠಾಧಿಪತಿ ಗಜದಂಡ ಶಿವಾಚಾರ್ಯರು ಹೇಳಿದರು.

ಪಟ್ಟಣದ ನೀಲಕಂಠೇಶ್ವರ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಗಜದಂಡ ಶಿವಾಚಾರ್ಯರ 21ನೇ ಪುಣ್ಯಸ್ಮರಣೆ, ಅಭಿನವ ಗಜದಂಡ ಶಿವಾಚಾರ್ಯರ 21ನೇ ಗುರು ಪಟ್ಟಾಧಿಕಾರ ಮಹೋತ್ಸವದ ನಿಮಿತ್ತ ಪಂಚಪೀಠಾಧೀಶ್ವರರ ಸಾನ್ನಿಧ್ಯದಲ್ಲಿ ಸಮಾರಂಭ ಜರುಗಲಿದೆ ಎಂದು ತಿಳಿಸಿದರು.

‘10 ದಿನ ಆರೂಢ ಪರಂಪರೆಯ ದಿಗ್ಗಜರಿಂದ ವೇದಾಂತ ಸಮ್ಮೇಳನ, 11 ದಿನ ಕಾಶಿ ಪೀಠದ ಶ್ರೀಗಳಿಂದ ಸಿದ್ಧಾಂತ ಶಿಖರಮಣಿ ಪ್ರವಚನ, ನಿತ್ಯ 101 ಜೋಡಿಗಳ ಮಹಾರುದ್ರ ಯಜ್ಞ ನೆರವೇರುತ್ತದೆ. 101 ಜಂಗಮ ಗಣರಾಧನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಲಿಂಗೈಕ್ಯ ಶ್ರೀಗಳ ಶಿಲಾಮೂರ್ತಿ ಪುನರ್ ಪ್ರತಿಷ್ಠಾಪನೆ, ಪಂಚ ಪೀಠಾಧಿಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಜರಗಲಿದೆ. ಭಕ್ತಾರು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು’ ಎಂದರು.

ಲಿಂಗಪ್ಪ ಹಣಗಿ, ಗಂಗಾಧರಯ್ಯ ಶಾಸ್ತ್ರಿ, ರಾಜು ಮಾಲಿಪಾಟೀಲ, ಚಂದ್ರಣ್ಣ ಗಂಗಾವತಿ, ಮಹೇಶ ವಸ್ತ್ರದ, ಮಹಾಂತೇಶ ಪಾಟೀಲ, ವೀರಭದ್ರಪ್ಪ ಕೊಳ್ಳಿ, ಬಸಪ್ಪ ಜೀಡಿ, ಗುಂಡಪ್ಪ ಕಿಲ್ಲಾ, ಮಲ್ಲಪ್ಪ, ರಾಚಪ್ಪ, ಮಹಾಂತೇಶ, ಅಮರಗುಂಡಪ್ಪ, ಭೀಮಣ್ಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-32-652715646

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.