ಮುದಗಲ್: ಹೋಬಳಿಯಲ್ಲಿ ನಕಲಿ ವೈದ್ಯರು, ನಕಲಿ ಕ್ಲಿನಿಕ್ಗಳ ಹಾವಳಿ ಮಿತಿ ಮೀರಿದೆ.

ಎಂಬಿಬಿಎಸ್ ಓದದೆ, ಸ್ಟೆಥಸ್ಕೋಪ್ ಕೊರಳಿಗೆ ಹಾಕಿಕೊಂಡು ಕ್ಲಿನಿಕ್ ನಡೆಸುತ್ತಿರುವ ನಕಲಿ ವೈದ್ಯರ ಸಂಖ್ಯೆ ಹೆಚ್ಚಿದೆ. ಆರೋಗ್ಯ ಇಲಾಖೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ 13 ಕ್ಲಿನಿಕ್ಗಳ ಮೇಲೆ ದಾಳಿ ಮಾಡಿದೆ. ಆದರೆ, ಮುದಗಲ್ ಹೋಬಳಿ ಕಡೆ ಗಮನಹರಿಸುತ್ತಿಲ್ಲ’ ಎಂದು ನಿವಾಸಿ ಬಸವರಾಜ ದೂರಿದರು.

ಎಸ್.ಎಸ್.ಎಲ್.ಸಿ, ಪಿ.ಯು.ಸಿ ಮಾಡಿದ ವ್ಯಕ್ತಿಗಳು ಕ್ಲಿನಿಕ್ ನಡೆಸುತ್ತಿದ್ದಾರೆ. ಪಶ್ಚಿಮ ಬಂಗಾಳದಿಂದ ಬಂದವರೂ ಇಲ್ಲಿ ಕ್ಲಿನಿಕ್ ತೆಗೆದಿದ್ದಾರೆ. ಇವರನ್ನು ಜನ ಬಂಗಾಲಿ ವೈದ್ಯರು ಎಂದು ಕರೆಯುತ್ತಿದ್ದಾರೆ.

ಕೆಪಿಎಂಇ ಅಡಿ ನೋಂದಣಿ ಮಾಡಿಸಿಲ್ಲ. ಹಣದ ಆಸೆ ಸೇರಿ ವಿವಿಧ ಕಾರಣಗಳಿಂದ ವೈದ್ಯರ ವೇಷ ಧರಿಸಿ ಜನರ ಜೀವನದ ಜೊತೆ ಆಟವಾಡುತ್ತಿದ್ದಾರೆ. ಕೆಲವರು ಮನೆಯಿಂದಲೇ ನಕಲಿ ಕ್ಲಿನಿಕ್ ನಡೆಸುತ್ತಿದ್ದಾರೆ. ಇನ್ನು ಕೆಲವರು ಬ್ಯಾಗ್ ಹಾಗೂ ಸ್ಟೆಥಸ್ಕೋಪ್ ಇಟ್ಟುಕೊಂಡು ಮನೆ ಮನೆಗೆ ಹೋಗಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ನಿವಾಸಿ ಲಕ್ಷ್ಮಣ ಆರೋಪಿಸುತ್ತಿದ್ದಾರೆ.

ಆರೋಗ್ಯ ಇಲಾಖೆ ರೂಪಿಸಿರುವ ನಿಯಮದಂತೆ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್ಗಳು ಕೆಪಿಎಂಇ ನೋಂದಣಿ ಸಂಖ್ಯೆ, ಆಸ್ಪತ್ರೆ ಮತ್ತು ಮಾಲೀಕರ ಹೆಸರನ್ನು ಕಟ್ಟಡದ ಮುಂಭಾಗದಲ್ಲಿ ಪ್ರದರ್ಶಿಸಬೇಕು. ಅಲೋಪತಿ ಆಸ್ಪತ್ರೆಗಳಲ್ಲಿ ನೀಲಿ ಬಣ್ಣ ಹಾಗೂ ಆಯುರ್ವೇದ ಆಸ್ಪತ್ರೆಗಳಲ್ಲಿ ಹಸಿರು ಬಣ್ಣದ ಬೋರ್ಡ್ ಬಳಸಬೇಕು. ಕರ್ನಾಟಕ ಖಾಸಗಿ ವೈದ್ಯಕೀಯ ಅಧಿನಿಯಮ 2007 ಹಾಗೂ ತಿದ್ದುಪಡಿ ನಿಯಮ 2017ರಂತೆ ಖಾಸಗಿ ಆರೋಗ್ಯ ಸಂಸ್ಥೆಗಳು ಕಡ್ಡಾಯವಾಗಿ ಕೆಪಿಎಂಇ ಅಡಿ ನೋಂದಣಿ ಆಗಿರಬೇಕಾಗುತ್ತದೆ. ಆದರೆ, ನಕಲಿ ಕ್ಲಿನಿಕ್ಗಳು ಇದ್ಯಾವುದನ್ನು ಮಾಡಿರುವುದಿಲ್ಲ.

ನಕಲಿ ವೈದ್ಯರು, ಕ್ಲಿನಿಕ್ಗಳ ವಿರುದ್ಧ ಕೆಪಿಎಂಇ ಅಡಿ ಕ್ರಮ ಕೈಗೊಳ್ಳಬೇಕು. ಆದರೆ, ನೋಟಿಸ್ ನೀಡಿರುವುದು ಬಿಟ್ಟರೆ, ಕ್ರಮ ಆಗಿದ್ದು ಕಡಿಮೆ. ಪರಿಣಾಮಕಾರಿಯಾಗಿ ಕಾನೂನು ಜಾರಿಯಾಗದ ಕಾರಣ ನಕಲಿ ವೈದ್ಯರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-32-1039000843

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.