ರಾಯಚೂರು: ಮೈಸೂರು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಕಂಪನಿ ಬಾಕಿ ವೇತನ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ದಲಿತ ಸೇನೆಯ ಪದಾಧಿಕಾರಿಗಳು ತಾಲ್ಲೂಕಿನ ಐಜಿಪಿಎಲ್ ಕಾರ್ಖಾನೆಯ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

‘ನಗರದ ಹೊರವಲಯದ ಹೆಗ್ಗಸನಹಳ್ಳಿ ಗ್ರಾಮದ ಬಳಿ ಇರುವ 108 ಎಕರೆ ಪ್ರದೇಶದಲ್ಲಿ ಮೈಸೂರು ಪೆಟ್ರೋ ಕೆಮಿಕಲ್ ಲಿಮಿಟೆಡ್ ಕಂಪನಿಯು ಕಾರ್ಯ ನಿರ್ವಹಿಸುತ್ತಿತ್ತು ಆದರೆ ಏಕಾಏಕಿ 2013ರಲ್ಲಿ ಕಾರ್ಯಚಟುವಟಿಕೆ ಸ್ಥಗಿತಗೊಳಿಸಿದ್ದ ಪರಿಣಾಮ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದರು’ ಎಂದು ಪ್ರತಿಭಟನಕಾರರು ಹೇಳಿದರು.

‘ಈ ಕುರಿತು ನ್ಯಾಯಾಲಯವು ಕಾರ್ಮಿಕರಿಗೆ ಬಾಕಿ ವೇತನ ಪಾವತಿಸುವಂತೆ ತೀರ್ಪು ನೀಡಿದ್ದರೂ ಇಂದಿಗೂ ಬಾಕಿ ವೇತನ ಪಾವತಿಸಿಲ್ಲ. ಕಲಬುರಗಿ ಹೈಕೋರ್ಟ್ನಲ್ಲಿ ಈ ಕುರಿತು ಇನ್ನೂ ತೀರ್ಪು ಹೊರಬಂದಿಲ್ಲ ಇದೀಗ ಮೈಸೂರು ಪೆಟ್ರೋಕೆಮಿಕಲ್ಸ್ ಮತ್ತು ಐಜಿ ಪೆಟ್ರೋಕೆಮಿಕಲ್ಸ್ ಕಂಪನಿಯ ಮಾಲೀಕರು ಒಬ್ಬರೇ ಎಂಬ ಮಾಹಿತಿ ಲಭ್ಯವಾಗಿದ್ದು, ಮೈಸೂರು ಪೆಟ್ರೋಕೆಮಿಕಲ್ಸ್ ಕಾರ್ಮಿಕರಿಗೆ ಬಾಕಿ ವೇತನ ಪಾವತಿಸದೇ ಇದೀಗ ಐಜಿ ಕಂಪನಿಯ ಹೆಸರಿನಲ್ಲಿ ಕಾರ್ಯಗಳನ್ನು ಆರಂಭಿಸಲು ಹೊರಟಿದ್ದು, ಇದರಿಂದ ಅಲ್ಲಿನ ಕಾರ್ಮಿಕರು ಮತ್ತು ರೈತರಿಗೆ ಮೋಸವಾಗುತ್ತಿದೆ’ ಎಂದು ಆರೋಪಿಸಿದರು.

‘ಇದಲ್ಲದೇ ಸಂಸ್ಥೆಯವರು 500 ಎಕರೆ ಕೃಷಿ ಜಮೀನನ್ನು ಸ್ಥಳೀಯ ರೈತರಿಂದ ಲೀಸ್ ಪಡೆದುಕೊಂಡು ಹುಲ್ಲು ಬೆಳೆಯುತ್ತಿದ್ದಾರೆ. ಆ ಹುಲ್ಲನ್ನು ಸಂಸ್ಕರಿಸಿ ಅದರ ರಸದಿಂದ ಬಯೋಕೆಮಿಕಲ್ ಉತ್ಪಾದನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ’ ಎಂದರು.

‘ಕೋರ್ಟ್ನಲ್ಲಿ ಪ್ರಕರಣ ಬಾಕಿ ಇದ್ದರೂ ಐಜಿ ಪೆಟ್ರೋಕೆಮಿಕಲ್ ಲಿಮಿಟೆಡ್ ಹೆಸರಿನಲ್ಲಿ ಮೈಸೂರು ಪೆಟ್ರೋಕೆಮಿಕಲ್ ಲಿಮಿಟೆಡ್ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಸಂಶಯವಿದ್ದು, ಕೂಡಲೇ ಐಜಿ ಕಂಪನಿಯ ಕಾರ್ಯ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾರುತಿ, ಜಯಶ್ರೀ , ಈರಣ್ಣ, ಷಣ್ಮುಖಪ್ಪ, ಸುರೇಶ ಬಾಬು, ಬಾಬುರಾವ್, ಮಹಿಬೂಬ್ ಕವಾಲಿ, ಇಮ್ರಾನ್ ಬಡೇಸಾಬ್, ಬಾಷಾ ನಾಯ್ಕ, ಗೌಸ್ ಪಾಷಾ, ವೆಂಕಟೇಶ, ಮಂಜುನಾಥ, ಮದುಕೃಷ್ಣ, ಡಿಂಗ್ರಿ ನರಸಪ್ಪ, ಶಾಹೀದ್, ಬಾಬು, ಧರ್ಮರಾಜ್ ಪಾಲ್ಗೊಂಡಿದ್ದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-32-189263048

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.