ರಾಯಚೂರು: ‘ಜಂತುಹುಳು ಬಾಧೆಯಿಂದ ಮಕ್ಕಳಲ್ಲಿ ರಕ್ತಹೀನತೆ ಹಾಗೂ ಅಪೌಷ್ಟಿಕತೆ ಉಂಟಾಗುತ್ತದೆ. ದೈಹಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಆದ್ದರಿಂದ ಜಂತುಹುಳು ದೇಹದೊಳಗೆ ಪ್ರವೇಶಿಸದಂತೆ ಎಚ್ಚರಿಕೆ ವಹಿಸುವುದು ಅಗತ್ಯ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕುಮಾರ ಕಾಂದೂ ಹೇಳಿದರು.

ನಗರದ ಕೆ.ಇ.ಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಪ್ರತಿಯೊಬ್ಬರೂ ಆರೋಗ್ಯಗಿದ್ದಲ್ಲಿ ಸದೃಢ ಸಮಾಜ ನಿರ್ಮಾಣ ಸಾಧ್ಯ. ಆದ್ದರಿಂದ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ಜಂತುಹುಳು ದೇಹ ಪ್ರವೇಶಿಸುವುದರಿಂದ ಅನೇಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಆದ್ದರಿಂದ ಈ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದರು.

‘ಆಲ್ಬೆಂಡೋಜೋಲ್ ಮಾತ್ರೆಗಳನ್ನು ಶಾಲಾ ಮಕ್ಕಳು, ಅಂಗನವಾಡಿ ಮಕ್ಕಳು ಸೇರಿದಂತೆ ಎಲ್ಲರಿಗೂ ನೀಡಬೇಕು’ ಎಂದು ಹೇಳಿದರು.

‘ಜಿಲ್ಲೆಯಾದ್ಯಂತ ಐದು ತಾಲ್ಲೂಕುಗಳ 2,737 ಅಂಗನವಾಡಿ ಕೇಂದ್ರಗಳು, 2,448 ಶಾಲಾ–ಕಾಲೇಜುಗಳು, ತಾಂತ್ರಿಕ ವಿದ್ಯಾಲಯ ಸೇರಿದಂತೆ 1 ವರ್ಷದಿಂದ 19 ವರ್ಷದೊಳಗಿನ 7,33,702 ಮಕ್ಕಳಿಗೆ ಊಟ ಅಥವಾ ಉಪಾಹಾರದ ನಂತರ ತಪ್ಪದೆ ಮಾತ್ರೆ ಸೇವಿಸುವ ಕುರಿತು ಆರೋಗ್ಯ ಇಲಾಖೆ, ಮುಂಚೂಣಿ ಇಲಾಖೆಗಳಿಂದ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಸಮುದಾಯದಲ್ಲಿ ಜಂತಹುಳು ತಡೆಗೆ ಶೌಚಕ್ಕಾಗಿ ಶೌಚಾಲಯಗಳ ಬಳಕೆ, ಊಟಕ್ಕೂ ಮೊದಲು, ಶೌಚದ ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆಯುವುದು, ನಡೆಯುವಾಗ ಪಾದರಕ್ಷೆ ಬಳಕೆ, ಶುದ್ಧ ನೀರು ಸೇವನೆ, ಹಣ್ಣು, ತರಕಾರಿ ಸ್ವಚ್ಛವಾಗಿ ತೊಳೆದು ಬಳಸುವುದು, ಪೌಷ್ಟಿಕ ಆಹಾರ ಸೇವಿಸುವುದು ಜಂತುಹುಳು ತಡೆಗೆ ಸಹಕಾರಿ ಎಂಬುದರ ಕುರಿತು ವ್ಯಾಪಕ ಪ್ರಚಾರ ಮಾಡಬೇಕು’ ಎಂದು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರ ಬಾಬು ಮಾತನಾಡಿ, ‘ಜಿಲ್ಲೆಯ ಎಲ್ಲ ವೈದ್ಯಾಧಿಕಾರಿಗಳ ನಿಗಾವಣೆಯಲ್ಲಿ ಆರೋಗ್ಯ ಸಿಬ್ಬಂದಿ ಮಾತ್ರೆ ಚೀಪಿಸಿ ನುಂಗಿಸುವ ಕಾರ್ಯ ನಿರ್ವಹಿಸುತ್ತಿದ್ದು, ಗೈರುಹಾಜರಿ ಅಥವಾ ಅನಾರೋಗ್ಯದ ಕಾರಣದಿಂದಾಗಿ ಇಂದು ಯಾವುದಾದರೂ ಮಗು ಮಾತ್ರೆ ತೆಗೆದುಕೊಳ್ಳಲು ಸಾಧ್ಯವಾಗದಿದ್ದಲ್ಲಿ ಅಂತ ಮಕ್ಕಳಿಗೆ ಫೆಬ್ರುವರಿ 16ರಂದು ಮಾಪ್ ಅಫ್ ದಿನದಂದು ಮಾತ್ರೆಗಳನ್ನು ಚೀಪಿಸಲಾಗುವುದು’ ಎಂದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಡಿ ಬಡಿಗೇರ, ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ನಂದಿತಾ ಎಂ.ಎನ್., ಅಕ್ಷರ ದಾಸೋಹ ಯೋಜನೆಯ ಅಧಿಕಾರಿ ಪ್ರಭು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಮೃತ್ ಹುಕ್ಕೇರಿ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಯೂನಸ್ ಬಾಬು, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಅಮರೇಗೌಡ, ವೈದ್ಯಾಧಿಕಾರಿಗಳಾದ ಡಾ.ಅಶ್ವಾಕ್ ಹುಸೇನ್, ಡಾ.ಬುದ್ದಾನಂದ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ, ಡಿವೈಡಿಎಚ್ಇಒ ಬಸಯ್ಯ, ಮುಖ್ಯೊಪಾಧ್ಯಾಯರಾದ ರಾಜಶೇಖರ ಪಾಟೀಲ, ಡಿಪಿಎಂ ನವೀನಕುಮಾರ, ಆರ್ಕೆಎಸ್ಕೆ ಸಂಯೋಜಕಿ ಜ್ಯೋತಿ ಆಲೂರು, ಕಚೇರಿ ಅಧೀಕ್ಷಕ ವೆಂಕಟೇಶ್, ಹಿರಿಯ ಎಚ್ಐಒ ಸುರೇಶ, ಬಿಎಚ್ಇಒ ಸರೋಜಾ.ಕೆ, ಎಫ್ಡಿಎ ರಾಘವೇಂದ್ರ, ಸಿಬ್ಬಂದಿ ಜಮೀಲ್, ಅರುಣಕುಮಾರ, ವನೀತಾ, ಬಿಬ್ಲಿ ಬಾಚಯ್ಯ, ಸಿದ್ದಮ್ಮ ಹಾಗೂ ಚಿರಂಜೀವಿ ಉಪಸ್ಥಿತರಿದ್ದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ರಾಜಮಾನಗಡ್ಡಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.