ಮಧ್ಯರಾತ್ರಿ ಅಟಲ್‌ಜೀ ಭಾಷಣ ಆಲಿಸಿದ್ದ ರಾಯಚೂರಿನ ಜನ

7

ಮಧ್ಯರಾತ್ರಿ ಅಟಲ್‌ಜೀ ಭಾಷಣ ಆಲಿಸಿದ್ದ ರಾಯಚೂರಿನ ಜನ

Published:
Updated:
Deccan Herald

ರಾಯಚೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಪಕ್ಷದ ಸಂಘಟನೆಗಾಗಿ 1981 ರ ನವೆಂಬರ್‌ 29ರಂದು ಕೈಗೊಂಡಿದ್ದ ಪ್ರವಾಸದ ವೇಳೆ ನಡುರಾತ್ರಿ 1 ಗಂಟೆಗೆ ರಾಯಚೂರು ತಲುಪಿದ್ದರು.

ಅಟಲ್‌ಜೀ ಹೆಜ್ಜೆ ಗುರುತುಗಳನ್ನು ನೆನಪಿಸಿಕೊಳ್ಳುವ ಜನರು ಜಿಲ್ಲೆಯಲ್ಲಿ ಇದ್ದಾರೆ. ನಡುರಾತ್ರಿಯಲ್ಲೂ ತಮ್ಮನ್ನು ನೋಡಲು ಕಾದು ಕುಳಿತಿದ್ದ ಜನರನ್ನು ಕಂಡು ಸಂತಸದಿಂದ ಭಾಷಣ ಮಾಡಿದ್ದರು. ಜಿಲ್ಲಾ ಕ್ರೀಡಾಂಗಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.

ಖುಷಿಯಿಂದ ಮಾತನಾಡಿದ್ದ ಅವರು, ‘ನಾನು ಇಷ್ಟೊಂದು ತಡವಾಗಿ ಬರಲು ಇಲ್ಲಿನ ರಸ್ತೆಗಳೇ ಕಾರಣ. ಇದು ಕಾಂಗ್ರೆಸ್ ನಿಮಗೆ ಕೊಟ್ಟ ಕೊಡುಗೆ’ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದನ್ನು ಬಿಜೆಪಿ ಮುಖಂಡರು ನೆನಪಿಸಿಕೊಳ್ಳುತ್ತಾರೆ.

ನಗರದ ಅತಿಥಿಗೃಹದಲ್ಲಿ ತಂಗಿದ್ದ ಅವರು, ಮರುದಿನ ಬೆಳಿಗ್ಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಉಪಹಾರ ಸೇವಿಸಿದರು. ಆನಂತರ ಜಿಲ್ಲೆಯ ಮಾನ್ವಿ, ಸಿಂಧನೂರು, ಗಂಗಾವತಿ, ಕೊಪ್ಪಳ, ಬಳ್ಳಾರಿ ಮಾರ್ಗವಾಗಿ ಯಾತ್ರೆಯನ್ನು ಮುಂದುವರಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !