ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ಆಕಾಶವಾಣಿ: ನೇರ್‌ ಫೋನ್‌ ಇನ್‌

Last Updated 8 ಜುಲೈ 2019, 14:51 IST
ಅಕ್ಷರ ಗಾತ್ರ

ರಾಯಚೂರು: ಆಕಾಶವಾಣಿ ರಾಯಚೂರು ಕೇಂದ್ರವು ಜುಲೈ 9 ರಂದು ಸಂಜೆ 6 ಗಂಟೆ 51 ನಿಮಿಷದಿಂದ 7 ಗಂಟೆ 35 ನಿಮಿಷದವರೆಗೆ ಕೈತೋಟ ಮತ್ತು ತಾರಸಿ ತೋಟದ ಮಹತ್ವ ಮತ್ತು ನಿರ್ವಹಣೆ ಕುರಿತು ನೇರ ಫೋನ್-ಇನ್ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ.

ಈ ಕಾರ್ಯಕ್ರಮದಲ್ಲಿ ರಾಯಚೂರು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಮಹೇಶ್ ಮತ್ತು ರಾಯಚೂರು ಕೃಷಿ ವಿಶ್ವ ವಿಶ್ವವಿದ್ಯಾಲಯದ ತೋಟಗಾರಿಕಾ ತಜ್ಞ ಡಾ. ಶೇಖರಗೌಡ ಪಾಟೀಲ ಅವರು ಭಾಗವಹಿಸಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

ಕೇಳುಗರು ಹಾಗೂ ರೈತ ಬಾಂಧವರು ಆಕಾಶವಾಣಿ ದೂರವಾಣಿ ಸಂಖ್ಯೆ 223178 ಅಥವಾ 223365 ಇವುಗಳಿಗೆ ಕರೆಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

ರಾಯಚೂರು ತಾಲ್ಲೂಕಿನ ಹೊರಗಡೆಯಿಂದ ಕರೆಮಾಡುವವರು ಎಸ್.ಟಿ.ಡಿ. ಕೋಡ್ ಸಂಖ್ಯೆ 08532 ಬಳಸಿ ಕರೆ ಮಾಡಬೇಕು. ಜಿಲ್ಲೆಯ ಕೇಳುಗರು ಹಾಗೂ ರೈತ ಬಾಂಧವರು ಈ ಕಾರ್ಯಕ್ರಮದ ಪ್ರಯೋಜನೆ ಪಡೆಯುವಂತೆ ರಾಯಚೂರು ಆಕಾಶವಾಣಿ ಕೇಂದ್ರದ ಕೃಷಿ ವಿಭಾಗದ ಕಾರ್ಯಕ್ರಮ ನಿರ್ವಾಹಕ ಡಾ.ವ್ಹಿ.ಜಿ.ಬಾವಲತ್ತಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT