ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ವಿದೇಶಿ ಬಂಡವಾಳ ಹೊರಹರಿವು

Last Updated 10 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಕಚ್ಚಾ ತೈಲ ದರ ಏರಿಕೆ ಮತ್ತು ಸರ್ಕಾರಿ ಸಾಲಪತ್ರಗಳ ಗಳಿಕೆಯಲ್ಲಿ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ವಿದೇಶಿ ಬಂಡವಾಳ ಹೊರಹರಿವಿನ ಪ್ರಮಾಣ ಹೆಚ್ಚುತ್ತಿದೆ.

ಏಪ್ರಿಲ್‌ ತಿಂಗಳಿನಲ್ಲಿ ವಿದೇಶಿ ಹೂಡಿಕೆದಾರರು ಬಂಡವಾಳ ಮಾರುಕಟ್ಟೆಯಿಂದ ₹ 15,500 ಕೋಟಿ ಹಿಂದಕ್ಕೆ ಪಡೆದಿದ್ದಾರೆ. ಹೂಡಿಕೆದಾರರು 16 ತಿಂಗಳಿನಲ್ಲಿ (2016ರ ಡಿಸೆಂಬರ್‌ ನಂತರ) ಷೇರುಪೇಟೆಯಿಂದ ಹಿಂದಕ್ಕೆ ಪಡೆದ ಹೆಚ್ಚಿನ ಮೊತ್ತ ಇದಾಗಿದೆ. ಆ ಸಮಯದಲ್ಲಿ ₹ 27 ಸಾವಿರ ಕೋಟಿ ಹಿಂದಕ್ಕೆ ಪಡೆದಿದ್ದರು.

‘ವಹಿವಾಟುದಾರರು ಅಮೆರಿಕ–ಇರಾನ್‌ ಬೆಳವಣಿಗೆಗಳು, ಕರ್ನಾಟಕದ ಚುನಾವಣೆಯನ್ನು ಬಹಳ ಎಚ್ಚರಿಕೆಯಿಂದ ಎದುರು ನೋಡುತ್ತಿದ್ದಾರೆ. ಇದರಿಂದ ವಹಿವಾಟು ಇಳಿಮುಖವಾಗಿದೆ’ ಎಂದು ಪ್ರಭುದಾಸ್‌ ಲೀಲಾಧರ್‌ನ ಸಿಇಒ ಅಜಯ್ ಭೋಡ್ಕೆ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT