ರಾಯಚೂರು: ಜಿಲ್ಲೆಯಲ್ಲಿ ಎರಡು ದಿನ ಅಬ್ಬರಿಸಿದ ಮಳೆಗೆ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಬಿಸಿಲು ಅಧಿಕ ಇರುವ ಕಾರಣ ಕೆಲ ತರಕಾರಿಗಳ ಬೆಲೆ ಸಹಜವಾಗಿಯೇ ಹೆಚ್ಚಾಗಿದೆ. ಇನ್ನು ಹದಿನೈದು ದಿನ ಇದೇ ಸ್ಥಿತಿ ಮುಂದುವರಿಯಲಿದೆ.

ಈರುಳ್ಳಿ ಹಾಗೂ ಆಲೂಗಡ್ಡೆ ಮಾತ್ರ ಗ್ರಾಹಕರ ಹಿತ ಕಾಪಾಡಿವೆ. ಬೆಳ್ಳುಳ್ಳಿ ಬೆಲೆ ಪ್ರತಿ ಕೆ.ಜಿಗೆ ದಿಢೀರ್ ₹200 ಜಿಗಿದಿದೆ. ಅಡುಗೆಗೆ ಸ್ವಾದ ಕೊಡುವ ಹಸಿ ಶುಂಠಿಯ ಬೆಲೆಯೂ ಕಡಿಮೆಯಾಗಿಲ್ಲ. ಮಳೆಯ ಕಾರಣ ಎಲೆಕೋಸು, ಹೂಕೋಸು ಹಾಗೂ ಟೊಮೆಟೊ ಬೆಲೆ ಸ್ಪಲ್ಪ ಮಟ್ಟಿಗೆ ಕಡಿಮೆಯಾಗಿದೆ.

ಕೊಂಬಿನ ಬದನೆಕಾಯಿ, ಗಜ್ಜರಿ, ಬೆಂಡೆಕಾಯಿ, ಡೊಣಮೆಣಸಿನಕಾಯಿ, ಹಸಿ ಮೆಣಸಿನಕಾಯಿ, ಹಿರೇಕಾಯಿ, ತೊಂಡೆಕಾಯಿ, ಬೀಟ್ರೂಟ್, ಸೌತೆಕಾಯಿ, ತುಪ್ಪದ ಹಿರೇಕಾಯಿ ಬೆಲೆ ಪ್ರತಿ ಕ್ವಿಂಟಲ್ಗೆ ₹ 2 ಸಾವಿರ ಹೆಚ್ಚಾದ ಕಾರಣ ಪ್ರತಿ ಕೆ.ಜಿಗೆ ₹ 20 ಹೆಚ್ಚಾಗಿದೆ. ಇಡೀ ಮಾರುಕಟ್ಟೆಯಲ್ಲಿ ಚವಳೆಕಾಯಿ ಬೆಲೆ ಮಾತ್ರ ದುಪ್ಪಟ್ಟಾಗಿದೆ. ಎಂದಿನಂತೆ ನಾಸಿಕ್ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ರಾಯಚೂರು ತಾಲ್ಲೂಕಿನ ಗಡಿ ಗ್ರಾಮಗಳು, ಆಂಧ್ರಪ್ರದೇಶ, ತೆಲಂಗಾಣ ಗಡಿ ಗ್ರಾಮಗಳಿಂದ ಟೊಮೆಟೊ, ಎಲೆಕೋಸು, ಹೂಕೋಸು, ಬದನೆ ಕಾಯಿ, ಸೌತೆ ಕಾಯಿ ಸೇರಿದಂತೆ ಕೆಲ ಕಾಯಿಪಲ್ಲೆ ಇಲ್ಲಿನ ಸಗಟು ಮಾರುಕಟ್ಟೆಗೆ ಬಂದಿದೆ.

‘ವಿವಿಧೆಡೆ ಅಕಾಲಿಕ ಮಳೆಯಿಂದಾಗಿ ತರಕಾರಿ ಬೆಳೆ ಹಾಳಾಗಿದೆ. ಹೀಗಾಗಿ ಮಾರುಕಟ್ಟೆಗೂ ಕಡಿಮೆ ಪ್ರಮಾಣದಲ್ಲಿ ತರಕಾರಿ ಆವಕವಾಗಿ, ಬೆಲೆ ಸಹಜವಾಗಿ ಹೆಚ್ಚಾಗಿದೆ’ ಎಂದು ತರಕಾರಿ ವ್ಯಾಪಾರಿಗಳಾದ ಸುನೀಲ ಕುಮಾರ ಹಾಗೂ ಶಶಿಕುಮಾರ ಹೇಳುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-32-846513542

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.