ಕಕ್ಕೇರಾ: ರಾಷ್ಟ್ರೀಯ ಹೆದ್ದಾರಿ 150ಎ ಬೀದರ್ದಿಂದ ಶ್ರೀರಂಗಪಟ್ಟಣ ರಸ್ತೆಯ ಹತ್ತಿಗೂಡುರುದಿಂದ ಲಿಂಗಸುಗೂರವರೆಗೆ ರಸ್ತೆಯನ್ನು ವಿಸ್ತರಿಸಬೇಕು ಹಾಗೂ ಈಚೆಗೆ ಅಪಘಾತದಲ್ಲಿ ಮೃತಪಟ್ಟ 9 ಜನರ ಕುಟುಂಬಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪರಿಹಾರ ಧನ ನೀಡುವಂತೆ ಆಗ್ರಹಿಸಿ ತಿಂಥಣಿ ಗ್ರಾಪಂ ವ್ಯಾಪ್ತಿಯ ವಿವಿಧ ಸಾಮೂಹಿಕ ಸಂಘಟನೆಗಳು ರವಿವಾರ ಕರೆ ನೀಡಿದ್ದ ಶಾಂತಪೂರ ಕ್ರಾಸ್ ಬಂದ್ ಹಾಗೂ ರಸ್ತೆ ರೋಕೋ ಚಳುವಳಿಗೆ ಭಾರಿ ಸಂಖ್ಯೆಯಲ್ಲಿ ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿವಿಧ ಸಂಘಟನೆಗಳ ಮುಖಂಡರು, ರೈತರು ಮಾತನಾಡಿ, ‘ಬೀದರ್ದಿಂದ ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ನಂ. 150ಎ ರಸ್ತೆ ವಿಸ್ತರಣೆ ಟೆಂಡರ್ ಈಗಾಗಲೇ ಆಗಿದೆ. ಆದರೆ ಪ್ರಾಧಿಕಾರ ಕಾಮಗಾರಿ ಕೈಗೊಳ್ಳುತ್ತಿಲ್ಲ. ಹೀಗಾಗಿ ಇಕ್ಕಟ್ಟಾದ ರಸ್ತೆ ಪರಿಣಾಮ ನಾಲ್ಕು ವರ್ಷದಲ್ಲಿ 60 ಜನ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನಾದರೂ ಕೂಡಲೇ ಜನಪ್ರತಿನಿಧಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎಚ್ಚೆತ್ತುಕೊಂಡು ಹತ್ತಿಗೂಡೂರದಿಂದ ಲಿಂಗಸೂಗೂರವರೆಗೆ ರಸ್ತೆಯನ್ನು ವಿಸ್ತರಣೆ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕು’ ಎಂದು ಆಗ್ರಹಿಸಿದರು.

ಇತ್ತೀಚೆಗೆ ಖಾಸಗಿ ಬಸ್ ಮತ್ತು ಕಾರು ಮಧ್ಯೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ 9ಜನ ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ನಾಯಕ ಕುಟುಂಬಕ್ಕೆ ತಲಾ ₹ 50 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿದರು. ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನಾಕಾರರು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಎಚ್.ಎ. ಸರಕಾವಸ್ ಅವರಿಗೆ ಸಲ್ಲಿಸಿದರು.

ಪ್ರತಿಭಟನೆಯಿಂದಾಗಿ ವಾಹನಗಳು ಸಾಲುಸಾಲಾಗಿ ನಿಂತಿದ್ದವು. ಬಿಸಿಲಿಗೆ ಪ್ರಯಾಣಿಕರು ಹೈರಾಣಾದರು.

ಡಿವೈಎಸ್ಪಿ ಜಾವೇದ್ ಇನಾಂದಾರ್, ಸುರಪುರ ಸಿಪಿಐ ಉಮೇಶ ನಾಯಕ ಬಿಗಿ ಬಂದೋಬಸ್ತ್ ಮಾಡಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇ ಶಿವರಾಜ ಇದ್ದರು.

ಈ ಸಂದರ್ಭದಲ್ಲಿ ಗೊಲಪಲ್ಲಿಯ ವಾಲ್ಮೀಕಿ ಆಶ್ರಮದ ವರದಾನೇಶ್ವರ ಸ್ವಾಮೀಜಿ, ಗಂಗಾಧರನಾಯಕ ತಿಂಥಣಿ, ಅಯ್ಯಣ್ಣ ಹಾಲಭಾವಿ, ದೇವಿಂದ್ರಪ್ಪಗೌಡ ಮೇಟಿ, ಸಂಜೀವನಾಯಕ ಕವಾಲ್ದಾರ್, ಮಲ್ಲಿಕಾರ್ಜುನ ಸತ್ಯಂಪೇಟ, ಬಲಭೀಮನಾಯಕ ದೇವಾಪೂರ, ಮರಲಿಂಗಪ್ಪ ಹುಣಸಿಹೊಳೆ, ಶರಣು ಮಕಾಶಿ, ಮಲ್ಲಿಕಾರ್ಜುನ ಬೇವಿನಾಳ, ರವಿ ಅಂಬಿಗೇರ, ಶರಣುನಾಯಕ ಡೊಣ್ಣಿಗೇರಾ, ರತ್ನರಾಜ ಶಾಲಿಮನಿ, ರಾಮುನಾಯಕ ಅರಳಳ್ಳಿ, ಬಸವರಾಜ ದಳಪತಿ, ಬೈರಣ್ಣ ಅಂಬಿಗೇರ, ಶ್ರವಣಕುಮಾರ ಡೊಣ್ಣಿಗೇರಾ, ಶರಣಗೌಡ ಬಂಡೊಳ್ಳಿ, ಪರಮಣ್ಣ ವಡಿಕೇರಿ, ವೆಂಕಟೇಶ ದೊರೆ, ದೇವಿಂದ್ರಪ್ಪ ತಳವಾರಗೇರ, ಸಚಿನಕುಮಾರ ನಾಯಕ, ದೇವರಾಜ ಗಿರಣಿ, ದೇವಿಂದ್ರಪ್ಪ ವಿಶ್ವಕರ್ಮ, ಸೇರಿದಂತೆ ದಸಂಸ, ರೈತ ಸಂಘಟನೆಗಳು, ಆಟೊ ಚಾಲಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-30-1653578144

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.